ಕಾರವಾರ :- ಬಲು ಅಪರೂಪದ ಇಂಡೂ ಫ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೆಬರಹವು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಳನಗದ್ದೆ ಕಡಲತೀರದಲ್ಲಿ ಇಂದು ದೊರೆತಿದೆ.
ಈ ಡಾಲ್ಫಿನ್ ಮೂರು ದಿನದ ಹಿಂದೆ ಸತ್ತಿರಬಹುದು ಎಂದು ಊಹಿಸಲಾಗಿದ್ದು ,ಕಡಲ ಅಲೆಗಳ ಹೊಡೆತಕ್ಕೆ ತೇಲಿ ಬಂದಿರಬಹುದು ಎಂದು ಮಾಹಿತಿಯನ್ನು ಅರಣ್ಯಾಧಿಕಾರಿಗಳು ನೀಡಿದ್ದು,

ಸುಮಾರು 2.55 ಮೀಟರ್ ಉದ್ದದ 250 ಕೆ.ಜಿ ತೂಕದ ಇಂಡೂ ಫ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೇಬರಹ ಇದಾಗಿದ್ದು ,ಆಹಾರ ಹುಡುಕಿ ಬಂದ ಈ ಡಾಲ್ಫಿನ್ ಬೊಟ್ ಗೆ ಹೊಡೆದೋ ಅಥವಾ ಆಹಾರದಲ್ಲಿ ತೊಂದರೆಯಾಗಿ ಸತ್ತಿರಬಹುದು ಎಂದು ಊಹಿಸಲಾಗಿದ್ದು ಅರಣ್ಯಾಧಿಕಾರಿ ಪ್ರವೀಣ್ ರವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ.

20 ರಿಂದ 25 ಮೀಟರ್ ಆಳ ಸಮುದ್ರದಲ್ಲಿ ವಾಸವಿರುವ ಇವು 15 ರಿಂದ 20 ಸೆಕೆಂಡ್ ಸಮುದ್ರದಿಂದ ಮೇಲೆಬಂದು ಬಳಿಕ ನೀರಿನಲ್ಲಿ ಸಾಗಿ ಮೀನುಗಳನ್ನು ಶಿಕಾರಿ ಮಾಡುತ್ತವೆ.
ಈ ಸಸ್ತನಿಯು 10 ರಿಂದ 12 ತಿಂಗಳುಗಳಲ್ಲಿ ಗರ್ಭಧಾರಣೆ ಮಾಡುತ್ತವೆ. ಮರಿಗಳು ಸ್ವಾಮಲಂಬಿಯಾಗಿ ಸಮುದ್ರದಲ್ಲಿ ಬದುಕುವ ವರೆಗೂ ಅವುಗಳ ಪೋಷಣೆ ಮಾಡುವ ಇವು ಬುದ್ಧಿವಂತ ಸಸ್ತನಿಯಾಗಿದೆ ಎಂದು ಅರಣ್ಯಾಧಿಕಾರಿ ಪ್ರವೀಣ್ ರವರು ಮಾಹಿತಿ ನೀಡಿದ್ದಾರೆ.