ಕುಮಟಾ|ಮದ್ಯಸೇವಿಸಿ ತೂರಾಡಿದ ಶಾಲಾ ಶಿಕ್ಷಕ!

27

ಕಾರವಾರ/ಕುಮಟಾ:- ವೀಕೆಂಡ್ ರಜೆಯಲ್ಲಿ ಮದ್ಯ (drinking )ಸೇವಿಸಿ ಹಾಡುಹಗಲೇ ಶಾಲಾ ಶಿಕ್ಷಕನೊಬ್ಬ ಅಂಗಡಿಯಲ್ಲಿ ಬಿದ್ದು ಒದ್ದಾಡಿ ರಂಪಾಟ ಮಾಡಿದ ಘಟನೆ ಕುಮಟಾ ತಾಲೂಕಿನ ಕತಗಾಲ್ ನಲ್ಲಿ ನಡೆದಿದೆ.

ಕುಮಟಾ ತಾಲೂಕಿನ ಹೆಗಡೆಕಟ್ಟೆ ಮೂಲದ (Kumta hegadekatta )ಪ್ರಾಥಾಮಿಕ ಶಾಲಾ (primary school )ಶಿಕ್ಷಕನಾಗಿರುವ ನಾರಾಯಣ್ ಕುಡಿದು ರಂಪಾಟ ಮಾಡಿದ ಶಿಕ್ಷಕನಾಗಿದ್ದು,
ಮದ್ಯ ಸೇವಿಸಿದ ಅಮಲಿನಲ್ಲಿ ತೂರಾಡಿ ಅಂಗಡಿಯಲ್ಲೇ ಬಿದ್ದು ಒದ್ದಾಡಿದ್ದಾನೆ. ಬಿದ್ದ ರಭಸಕ್ಕೆ ಮೂಗಿಗೆ ಪೆಟ್ಟು ಬಿದ್ದು ರಕ್ತ ಚಲ್ಲಾಡಿದೆ.

ಈತನ ರಂಪಾಟ ನೋಡಿ ಸ್ಥಳೀಯರು ಸಹ ತರಾಟೆ ತೆಗೆದುಕೊಂಡಿದ್ದಾರೆ. ಇದಲ್ಲದೇ ಕತಗಾಲ್ ನಲ್ಲಿ ಯಾವುದೇ ಮದ್ಯದಂಗಡಿ ಸಹ ಇಲ್ಲ. ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಕಿರಾಣಿ ಅಂಗಡಿಯಲ್ಲಿ ಸಹ ಬೇಕಾಬಿಟ್ಟಿಯಾಗಿ ಮದ್ಯ ಸಿಗುತಿದ್ದು ಜನ ಅಲ್ಲಿಯೇ ಕುಡಿದು ತೂರಾಡಿ ರಸ್ತೆಯಲ್ಲಿ ಓಡಾಡುವ ಜನರಿಗೆ ಇರುಸುಮುರಿಸು ಮಾಡುತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ಮಕ್ಕಳಿಗೆ ಪಾಠ ಮಾಡಿ ವ್ಯಕ್ತಿತ್ವವನ್ನು ರೂಪಿಸಬೇಕಾದ ಶಿಕ್ಷಕ ಹೀಗೆ ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಬಿದ್ದು ರಂಪಾಟ ಮಾಡುತ್ತಿರುವುದು ಶಿಕ್ಷಕ ವೃತ್ತಿಗೇ ಅವಮಾನ ಎನಿಸುವಂತಿದೆ.
ಈ ಶಿಕ್ಷಕನ ಮದ್ಯದ ಅಮಲಿನ ವೀಡಿಯೋ ಇದೀಗ ವಾಟ್ಸ್ ಅಪ್ ( WhatsApp) ನಲ್ಲಿ ಹರಿದಾಡುತಿದ್ದು ,ಪ್ರಜ್ಞಾವಂತ ಜನ ಚೀ ..ತೂ ಎನ್ನುತಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!