ಕುಮಟಾ ಪುರಸಭೆ ಬಿಜೆಪಿ ತೆಕ್ಕೆಗೆ ಅಧ್ಯಕ್ಷರಾಗಿ ಮೋಹಿನಿಗೌಡ ಉಪಾಧ್ಯಕ್ಷರಾಗಿ ರಾಜೇಶ್ ಪೈ ಆಯ್ಕೆ.

1105

ಕುಮಟಾ:-ಇಂದು ನಡೆದ ಕುಮಟಾ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದೆ.ಹಾಲಕ್ಕಿ ಸಮಾಜದ ಶ್ರೀಮತಿ ಮೋಹಿನಿ ಗೌಡ ಅಧ್ಯಕ್ಷರಾಗಿ ಹಾಗೂ ಮೂರು ಬಾರಿ ಆಯ್ಕೆ ಆದ ಪುರಸಭಾ ಸದಸ್ಯ ರಾಜೇಶ ಪೈ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಕುಮಟಾ ಪುರಸಭೆಯ 23 ಸ್ಥಾನಗಳ ಪೈಕಿ ಒಬ್ಬ ಸದಸ್ಯ ಮೃತರಾಗಿದ್ದು ಉಳಿದ 22 ಸದಸ್ಯರಲ್ಲಿ 17 ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ ಕೇವಲ 5 ಸದಸ್ಯರು ಮಾತ್ರ ಕಾಂಗ್ರೆಸ್ ನಿಂದ ಆಯ್ಕೆ ಆದವರಾಗಿದ್ದಾರೆ.ಒರ್ವ ಮಹಿಳಾ ಸದಸ್ಯೆ ಜೆಡಿಎಸ್ ನವರಾಗಿದ್ದು ಬಿಜೆಪಿಗೆ ಬೆಂಬಲ ನೀಡಿದ್ದಾರು.ಇದೇ ಮೊದಲಬಾರಿ ಕಾಂಗ್ರೆಸ್ ನನ್ನು ಮಣಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!