ಕಾರವಾರ:-ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಹಿನ್ನಲೆಯಲ್ಲಿ ಸ್ಥಳೀಯರಿಗೆ ಮಾಹಿತಿ ನೀಡದೇ ಕಾಮಗಾರಿಗಾಗಿ ಕಲ್ಲುಬಂಡೆ ಸ್ಪೋಟಿದಿದ ಪರಿಣಾಮ ಸ್ಪೋಟಗೊಂಡ ಕಲ್ಲುಗಳು ಮನೆಗಳ ಮೇಲೆ ಬಿದ್ದ ಘಟನೆ ಕುಮಟ ತಾಲೂಕಿನ ತಂಡ್ರಕುಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ನಡೆದಿದೆ.

ತಂಡ್ರಕುಳಿಯಲ್ಲಿ ಸ್ಪೋಟದಿಂದ ಮನೆಗಳ ಮೇಲೆ ಕಲ್ಲು ಬಿದ್ದಿದ್ದರಿಂದ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ 66 ನ್ನು ತಡೆದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಕುಮಟಾ ಶಾಸಕ ದಿನಕರ್ ಶಟ್ಟಿ ಆಗಮಿಸಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆದು ಗುತ್ತಿಗೆದಾರನನ್ನು ತರಾಟೆ ತೆಗೆದುಕೊಂಡರು.