ಶಿರಸಿಯಲ್ಲಿ ಗುತ್ತಿಗೆದಾರನ ಮನೆಯ ಶೌಚಗುಂಡಿ ಮಲಹೊತ್ತ ಕೂಲಿ ಕಾರ್ಮಿಕರು!

310

ಕಾರವಾರ :- ಮಲ ಹೊರುವ ಪದ್ಧತಿಯು ಕಾನೂನುಬಾಹಿರ. 2013 ರಲ್ಲಿ ನಿಷೇಧ ಮಾಡಲಾಗಿದೆ. ಆದರೂ ದೇಶದಲ್ಲಿ ಇಂದಿಗೂ ಈ ಪದ್ಧತಿ ಜೀವಂತವಾಗಿದ್ದು ,ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಕಟ್ಟಡ ಕಾರ್ಮಿಕರನ್ನು ಬಳಿಸಿ ಶೌಚಗುಂಡಿ ಸ್ವಚ್ಛಗೊಳಿಸಿದ್ದಲ್ಲದೇ ಅವರಿಂದಲೇ ಮಲವನ್ನು ತಲೆಯಮೇಲೆ ಹೊರಿಸಿ ರಸ್ತೆಯಲ್ಲಿ ನಿಂತಿದ್ದ ವಾಹನಕ್ಕೆ ಅದನ್ನು ಕಟ್ಟಡ ಮಾಲೀಕ ತುಂಬಿಸಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆದ ನಂತರ ತಡವಾಗಿ ಬೆಳಕಿಗೆ ಬಂದಿದೆ‌.

ಇದನ್ನೂ ಓದಿ:-Weather report: ರಾಜ್ಯದ ಈ ಭಾಗದಲ್ಲಿ ಸುರಿಯಲಿದೆ ಮಳೆ

ಶಿರಸಿಯ ಭಗತ್ ಸಿಂಗ್ ನಗರದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವಾಗ ಹಿಂದೆ ಇದ್ದ ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಈ ಘಟನೆ ನಡೆದಿದ್ದು
ಗುತ್ತಿಗೆದಾರ ಹಾಗೂ ಕಟ್ಟಡದ ಮಾಲೀಕ
ಮಹಾಬಲೇಶ್ವರ ಬೈಂದೂರು ರವರು ಕಟ್ಟಡ ಕೆಲಸಕ್ಕೆ ಬಂದಿದ್ದ ಕೂಲಿಕಾರರ ಬಳಿಯೇ ಈ ಕೆಲಸ ಮಾಡಿಸಿದ್ದು ,ಈ ವಿಡಿಯೋ ವೈರಲ್ ( video viral)ಆದ ನಂತರ ಘಟನೆ ಸಂಬಂಧ 2013 ರ ಮಲಹೊರುವ ಪದ್ಧತಿ ನಿಷೇಧ ಕಾಯ್ದೆಯಡಿ ಪ್ರಕರಣವನ್ನು ಸೋಮವಾರ ಶಿರಸಿ ನಗರ ಸಭೆ ಆಯುಕ್ತ ಹೆಚ್.ಕಾಂತರಾಜು ದಾಖಲಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!