BREAKING NEWS
Search

ಕರೋನಾ ನಿಯಮ ಉಲ್ಲಂಘಿಸಿ ಜನುಮದಿನದ ಭರ್ಜರಿ ಸಂಭ್ರಮಾಚರಣೆ ಮಾಡಿದ ಕಾರ್ಮಿಕ ಸಚಿವರ ಕಾರ್ಯಕ್ಕೆ ಖಂಡನೆ.

1782

ಯಲ್ಲಾಪುರ: ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹಲವು ಕಾರ್ಯಕರ್ತರೊಂದಿಗೆ ಕೊವಿಡ್ ನಿಮಯವನ್ನು ಗಾಳಿಗೆ ತೂರಿ ಜನ್ಮದಿನವನ್ನು ಆಚರಿಸಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಕೋವಿಡ್ ಇರುವುದರಿಂದ ಶುಕ್ರವಾರ ಮನೆಯಲ್ಲೇ ತಮ್ಮ 64 ನೇ ಜನುಮದಿನವನ್ನು ಸರಳವಾಗಿ ಆಚರಿಸುವುದಾಗಿ ಹೇಳಿಕೊಂಡಿದ್ದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಇಡೀ ದಿನ ಮನೆಯಲ್ಲಿದ್ದರು.

ಆದರೇ ಮನೆಯಲ್ಲೇ ಕರೋನಾ ನಿಯಮ ಗಾಳಿಗೆ ತೂರಿ ಜನುಮದಿನವನ್ನು ಆಚರಿಸಿಕೊಂಡಿದ್ದು, ಇದೀಗ ಆ ಫೋಟೋಗಳು ಅವರ ಬೆಂಬಲಿಗರಿಂದ ಫೇಸ್ ಬುಕ್ ಮೂಲಕ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನಿನ್ನೆದಿನ ಮನೆಯ ಆವರಣದಲ್ಲಿ ಜನುಮದಿನ ಆಚರಿಸಿಕೊಂಡ ಅವರು ತಮ್ಮ ಬೆಂಬಲಿಗರು ಹಾಗೂ ಮುಖಂಡರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಈ ವೇಳೆ ಸಚಿವರನ್ನು ಮುತ್ತಿಗೆ ಹಾಕಿದ ಹಲವು ಬೆಂಬಲಿಗರು ,ಮಾಸ್ಕ ಸಹ ಹಾಕಿರಲಿಲ್ಲ. ಇನ್ನು ಕೆಲವರು ಗಡ್ಡಕ್ಕೆ ಮಾಸ್ಕ್ ಧರಸಿಕೊಂಡಿದ್ದರು.
ಗುಂಪು ಗುಂಪಾಗಿ ಸಚಿವರೊಂದಿಗೆ ಫೋಟೋ ತೆಗೆಸಿಕೊಂಡ ಬೆಂಬಲಿಗರು ಸಾಮಾಜಿಕ ಅಂತರ ಮರೆತು ನಡೆದುಕೊಂಡಿದ್ದಾರೆ.

ಇನ್ನು ಹಲವು ಬೆಂಬಲಿಗರು ಸಚಿವರೊಂದಿಗೆ ಬೇರೆ ಬೇರೆಯಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಇನ್ನು ನಿನ್ನೆ ದಿನ ಹೊರ ಬರದ ಫೋಟೋಗಳು ಇಂದು ಸಾಮಾಜಿಕ ಜಾಲತಾಣದಲ್ಲಿ ಅವರ ಬೆಂಬಲಿಗರೇ ಹಾಕಿಕೊಂಡಿದ್ದರಿಂದ ಇದೀಗ ವ್ಯಾಪಕ ಟೀಕೆಗೆ ಕಾರಣವಾಗಿದೆ.

ಲಾಕ್ ಡೌನ್ ಇದ್ದರೂ ಸಚಿವರ ಮನೆಗೆ ಕಾರ್ಯಕರ್ತರು ಹೇಗೆ ಬಂದರು? ಬೆಂಬಲಿಗರಿಗೆ ಒಂದು ಕಾನೂನು! ಜನಸಾಮಾನ್ಯರಿಗೆ ಒಂದು ಕಾನೂನು!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಯಲ್ಲಾಪುರ,ಶಿರಸಿ,ಕಾರವಾರ ತಾಲೂಕುಗಳು ಕಂಟೈನ್ಮೆಂಟ್ ಝೋನ್ ಗಳಾಗಿವೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಸೋಂಕು ಇರುವ ತಾಲೂಕಿನಲ್ಲಿ ಯಲ್ಲಾಪುರ ಸಹ ಒಂದು. ಹೀಗಾಗಿ ಜೊಲ್ಲಾಡಳಿತ ಕಠಿಣ ನಿಯಮ ಜಾರಿಗೊಳಿಸಿದೆ.

ಹೀಗಿದ್ದರೂ ನೂರಾರು ಕಾರ್ಯಕರ್ತರು ಸಚಿವರ ಮನೆಗೆ ಹೇಗೆ ಬರಲು ಸಾಧ್ಯ? ಬರಲು ಅನುಮತಿ ಹೇಗೆ ನೀಡಿದರು.

ಜನಸಾಮಾನ್ಯರು ತಮ್ಮ ಮನೆಗೆ ತರಕಾರಿ ಇನ್ನಿತರೆ ವಸ್ತುಗಳನ್ನು ತರಲು ನಗರಕ್ಕೆ ಬಂದರೆ ದಂಡ ವಿಧಿಸಿ ವಾಹನ ಜಫ್ತಿ ಮಾಡುವ ಪೊಲೀಸ್ ಇಲಾಖೆ ಸಚಿವರ ಮನೆಗೆ ಇಷ್ಟೊಂದು ವಾಹನಗಳು ಬಂದು ನಿಂತರೂ ಮಾರುದ್ದ ದೂರದಲ್ಲೇ ಇರುವ ಠಾಣೆಯಲ್ಲಿ ಪೊಲೀಸರು ಏನು ಮಾಡುತಿದ್ದರು ಎಂಬ ಪ್ರಶ್ನೆಯನ್ನ ಇದೀಗ ಫೋಟೋ ನೋಡಿದ ನೆಟ್ಟಿಗರು ಪ್ರಶ್ನೆ ಮಾಡುತಿದ್ದಾರೆ.

ಜಿಲ್ಲಾ ಸಚಿವರಾಗಿ ಜಿಲ್ಲೆಗೆ ಮಾಧರಿಯಾಗಬೇಕಾದ ಅವರು ಹೀಗೆ ನಿಯಮಗಳನ್ನು ಗಾಳಿಗೆ ತೂರಿದ್ದು ಎಷ್ಟು ಸರಿ. ಜನಸಾಮಾನ್ಯರಿಗೊಂದು ಕಾನೂನು ,ಸಚಿವರಿಗೆ ,ಬೆಂಬಲಿಗರಿಗೆ ಒಂದು ಕಾನೂನೆ ಎಂಬ ಪ್ರಶ್ನೆ ಏಳತೊಡಗಿದೆ. ಕರೋನಾ ವನ್ನ ತಡೆಗಟ್ಟಲು ಶ್ರಮ ಪಡುತ್ತಿರುವ ಸಚಿವರು ಹಗಲಿರುಳೆನ್ನದೇ ಕೆಲಸ ಮಾಡುತಿದ್ದಾರೆ. ಆದರೇ ಒಂದು ದಿನದಲ್ಲೇ ಸಚಿವರೇ ಇವೆಲ್ಲವನ್ನು ಮೈ ಮರೆತು ನಡೆದುಕೊಂಡಿದ್ದಾರೆ.

ವರದಿ:- ಗಣಪತಿ ವಾಗಳ್ಳಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!