BREAKING NEWS
Search

ತಾಲೂಕು ಪಂಚಾಯ್ತಿ ರದ್ಧತಿ ಸರ್ಕಾರದಿಂದ ಸಾಧ್ಯವಿಲ್ಲ- ಶಿವರಾಮ್ ಹೆಬ್ಬಾರ್.

891

ಕಾರವಾರ :- ತಾಲೂಕು ಪಂಚಾಯತ್ ರದ್ದತಿ ಕೇವಲ ಊಹಾಪೋಹ. ರದ್ದು ಮಾಡಲು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ.

ಈ ಬಾರಿಯೂ ಮೂರು ವಿಭಾಗದ ಪಂಚಾಯತ ರಾಜ್ ವ್ಯವಸ್ಥೆಯಡಿಯಲ್ಲಿಯೇ ಚುನಾವಣೆ ನಡೆಯಲಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವರು ಸಹ ತಿಳಿಸಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದರು. ಶಿರಸಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ತಾಲೂಕು ಪಂಚಾಯತ್ ರದ್ದತಿಗೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ.

ಮುಂದಿನ ಚುನಾವಣೆಯಲ್ಲಿ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತಕ್ಕೆ ಚುನಾವಣೆ ನಡೆಯಲಿದೆ ಎಂದರು. ಇನ್ನು ಇಂದಿಗೆ ಸಚಿವನಾಗಿ ಪ್ರಮಾಣವಚನ ಸಲ್ಲಿಸಿ ಒಂದು ವರ್ಷ ಆಯಿತು ಜನ ನನ್ನ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ,ನಿರೀಕ್ಷೆಗೆ ತಕ್ಕ ಕೆಲಸ ಮಾಡಬೇಕಿದೆ ಎಂದರು.

Labour Minister Shivaram hebbar-Government cannot repeal Taluk Panchayat

ಸಚಿವ ಶಿವರಾಮ ಹೆಬ್ಬಾರ್ ಅವರು ಇಂದು ಶಿರಸಿ ಪಟ್ಟಣದ ಕೆ.ಡಿ.ಸಿ.ಸಿ ಬ್ಯಾಂಕ್ ಸಭಾಂಗಣದಲ್ಲಿ ನಬಾರ್ಡ್ ಬ್ಯಾಂಕ್ , ಲೀಡ್ ಬ್ಯಾಂಕ್ ಹಾಗೂ ಮೀನುಗಾರಿಕೆ, ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ನ ಮೂಲಕವಾಗಿ ರೈತರಿಗೆ ನೀಡಬಹುದಾದ ಯೋಜನೆ ಕುರಿತು ವಿಶೇಷ ಸಭೆ ನಡೆಸಿದರು.

ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶ ಕುಮಾರ , ಕೆ.ಡಿ‌.ಸಿ.ಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಮೋಹನದಾಸ ನಾಯಕ, ಕೆ.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕರು, ಅಧಿಕಾರಿಗಳು ಹಾಜರಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!