ಭಟ್ಕಳ|ಕ್ರಿಕೇಟ್ ಮೈದಾನದಲ್ಲಿ ಸುನೀಲ ಗದ್ದಲ!

1182

ಭಟ್ಕಳ:- ಭಟ್ಕಳದ ಶಿರಾಲಿ ಬಳಿಯ ತಟ್ಟಿಹಕ್ಲು ಗ್ರಾಮದ ಸರ್ಕಾರಿ ಜಮೀನಿನ ಮೈದಾನವನ್ನು ಅಭಿವೃದ್ದಿ ಪಡಿಸುವಂತೆ ಗ್ರಾಮಸ್ಥರ ಮನವಿಗೆ ಭಟ್ಕಳ ಶಾಸಕ ಸುನಿಲ್ ನಾಯ್ಕ ಉದ್ದಟತನ ತೋರಿ ಅವಾಚ್ಯ ನೀಂದನೆ ಮಾಡಿದ ಘಟನೆ ಸೋಮವಾರ ಮಧ್ಯಾನ್ನ ನಡೆದಿದೆ.

ತಟ್ಟಿಹಕ್ಲು ಗ್ರಾಮದಲ್ಲಿ ಅನಾದಿಕಾಲದಿಂದ ಸ್ಥಳೀಯರು ಕ್ರೀಡಾ ಚಟುವಟಿಕೆಗಾಗಿ ಸರ್ಕಾರಿ ಜಾಗದ ಜಮೀನನ್ನು ಉಳಿಸಿಕೊಂಡು ಬಂದಿದ್ದಾರೆ.

ಆದರೇ ಹಲವು ವರ್ಷಗಳಿಂದ ಒತ್ತುವರಿ ಸೇರಿದಂತೆ ಅನೇಕ ಕಾರಣದಿಂದ ಊರಿನಲ್ಲಿದ್ದ ಕ್ರೀಡಾಂಗಣ ಕಿರಿದಾಗುತ್ತಾ ಬಂದಿದೆ.

ಈ ಕಾರಣದಿಂದಾಗಿ ಅಲ್ಲಿನ ಜನರು ಕ್ರೀಡಾಂಗಣ ಅಭಿವೃದ್ಧಿ ಪಡಿಸುವ ಹಾಗೂ ಒತ್ತುವರಿ ತೆರವುಗೊಳಿಸಲು ಹಲವು ವರ್ಷದಿಂದ ಅಧಿಕಾರಿಗಳಿಗೆ ,ಜನಪ್ರತಿನಿಧಿಗಳಿಗೆ ಬೇಡಿಕೆ ಇಟ್ಟಿದ್ದರು.

ಹಾಗೆಯೇ ಈಬಾರಿ ಆಯ್ಕೆಯಾದ ಶಾಸಕ ಸುನಿಲ್ ನಾಯ್ಕ ಗೆ ಸಹ ಕ್ರೀಡಾಂಗಣ ಅಭಿವೃದ್ಧಿ ಮಾಡುವಂತೆ ಮನವಿ ಸಲ್ಲಿಸಿದ್ದರು.ಆದರೇ ಶಾಸಕರ ನಿರ್ಲಕ್ಷದಿಂದ ನೀಡಿದ್ದ ಭರವಸೆ ಹುಸಿಯಾಗಿತ್ತು. ಇದರಿಂದ ಬೇಸರಗೊಂಡಿದ್ದ ಸ್ಥಳೀಯ ಕೆಲವು ಯುವಕರು ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಬಗ್ಗೆ ಅಸಮದಾನ ಹೊರಹಾಕಿದ್ದರು.

ಕಾರ್ಯಕ್ರಮದ ನಿಮಿತ್ತ ಇಂದು ಈ ಗ್ರಾಮಕ್ಕೆ ಆಗಮಿಸಿದ ಸುನೀಲ್ ನಾಯ್ಕ ನೇರ ಊರಿನ ಯುವಕರು ಆಟವಾಡುತಿದ್ದ ಮೈದಾನಕ್ಕೆ ಬಂದು ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ಯುವಕರು ಅಸಮದಾನ ತೋಡಿಕೊಂಡಿರುವುದಕ್ಕೆ ಕೋಪಗೊಂಡು, ಕೆಲಸ ಮಾಡಿಕೊಡುವುದಿಲ್ಲ ಎಂದು ಗದರಿಸಿದ್ದಾರೆ.

ನಂತರ ಕೆಟ್ಟ ಶಬ್ಧ ಉಪಯೋಗಿಸಿ ನಿಮಗೆ ಏನೂ ಮಾಡಿಕೊಡುವುದಿಲ್ಲ,ಏನು ಮಾಡಿಕೊಳ್ಳುತ್ತೀರ ಮಾಡಿಕೊಳ್ಳಿ ಎಂದು ಸಿಟ್ಟಿನಲ್ಲಿ ತೆರಳಿದ್ದಾರೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು ಶಾಸಕರ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!