ಕಾರವಾರ :- ಲಾಕ್ ಡೌನ್ ನಿಂದ ಜನ ನಿಬಿಡ ಪ್ರದೇಶದಲ್ಲಿ ಸಂಚಾರ ಕಮ್ಮಿಯಾಗುತಿದ್ದಂತೆ ಕಾಡು ಪ್ರಾಣಿಗಳು ಆಹಾರ ಅರಸಿ ಇದೀಗ ನಗರದತ್ತ ಆಗಮಿಸುತಿದ್ದು ಜಿಲ್ಲೆಯ ಕುಮಟಾದ ಮಿರ್ಜಾನ್ ಗ್ರಾಮದ ಸಂತೆಗದ್ದೆಯಲ್ಲಿ ರಾತ್ರಿ ವೇಳೆ ಚಿರುತೆಯೊಂದು ಮನೆಗೆ ನುಗ್ಗಿ ಸಾಕು ನಾಯಿ ಹಾಗೂ ಮರಿಯನ್ನು ಭೇಟೆಯಾಡಿ ತೆಗೆದುಕೊಂಡುಹೋದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಸಂತೆ ಗದ್ದೆಯ ವೆಂಕಟೇಶ್ ಈಶ್ವರ ನಾಯ್ಕ ಎಂಬುವವರ ಮನೆ ಯಲ್ಲಿ ಈ ಘಟನೆ ನಡೆದಿದ್ದು ಚಿರತೆ ಆಗಮಿಸಿದ ವಿಡಿಯೊ ಸೆರೆಯಾಗಿದೆ.
ಇನ್ನು ಚಿರತೆಯು ಮೊದಲು ನಾಯಿ ಮರಿಯನ್ನು ಹೊತ್ತೊಯ್ದಿತ್ತು. ನಂತರ ಪುನಹಾ ಆಗಮಿಸಿ ನಾಯಿಯನ್ನು ಸಹ ಹೊತ್ತೊಯ್ದಿದೆ.
ಕುಮಟಾ ಭಾಗದ ಅರಣ್ಯದಲ್ಲಿ ಚಿರುತೆಗಳು ಹೆಚ್ಚಿನ ಪ್ರಮಾಣದಲ್ಲಿದೆ. ಆದರೇ ಇದೀಗ ಜನರ ಸಂಚಾರ ಕಡಿಮೆ ಆದ್ದರಿಂದ ಚಿರುತೆಗಳು ಇದೀಗ ಹಳ್ಳಿ,ನಗರ ಪ್ರದೇಶಕ್ಕೂ ಆಗಮಿಸುತಿದ್ದು ಕೋಳಿ,ನಾಯಿ ಗಳನ್ನು ಹೊತ್ತೊಯ್ಯುತ್ತಿದೆ.