BREAKING NEWS
Search

ಪಕ್ಷ ತೀರ್ಮಾನ ತೆಗೆದುಕೊಳ್ಳಲಿ ಲೋಕಸಭೆಗೆ ಸ್ಪರ್ಧಿಸಲು ಸಿದ್ದ- ಭೀಮಣ್ಣ ನಾಯ್ಕ.

109

ಶಿರಸಿ:- ಅನಂತಕುಮಾರ್ ಹೆಗಡೆ ವಿವಾಧಾತ್ಮಕ ಹೇಳಿಕೆ ನೀಡಿದರೂ ಉತ್ತರ. ಕನ್ನಡ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಹಿಡಿದು ಯಾವೊಬ್ಬ ಜನಪ್ರತಿನಿಧಿಗಳೂ ಸಹ ಖಂಡಿಸದೇ ತಟಸ್ಥವಾಗಿದ್ದು ಮೌನಕ್ಕೆ ಜಾರಿದ್ದಾರೆ. ಇನ್ನು ಜಿಲ್ಲಾಧ್ಯಕ್ಷರೇ ಕಾಣೆಯಾಗಿದ್ದು ಹೆಗಡೆ ವಿರುದ್ಧ ದ್ವನಿ ಎತ್ತುವ ಶಕ್ತಿಯಿಲ್ಲದ ಜಿಲ್ಲಾ ಕಾಂಗ್ರೆಸ್ ಎರಡು ದಿನವಾದರೂ ಪ್ರತಿಭಟನೆ ಸಹ ಮಾಡದೇ ತಟಸ್ಥ ವಾಗಿದೆ. ಹೀಗಾಗಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ದೂರುಗಳ ಬೆನ್ನಲ್ಲೇ ಈ ಕುರಿತು ಶಿರಸಿ ಶಾಸಕ ಭೀಮಣ್ಣ ನಾಯ್ಕ ಪ್ರತಿಕ್ರಿಯಿಸಿದ್ದು ಸಂಸದ ಅನಂತಕುಮಾರ್ ಹೆಗಡೆಯನ್ನು ತರಾಟೆ ತೆಗೆದುಕೊಂಡರು.

ಇದನ್ನೂ ಓದಿ:-Joida|ಸಿನಿಮಾ ಚಿತ್ರೀಕರಣಕ್ಕೆ ಬಂದ 20 ಕೋಟಿ ಬೆಲೆಬಾಳುವ ಶ್ವಾನ- ಕಾಡುಪ್ರಾಣಿ ಎಂದು ಅರಣ್ಯ ಸಿಬ್ಬಂದಿಯಿಂದ ತಪಾಸಣೆ

ಕಾಂಗ್ರೆಸ್ ಮುಖಂಡರು ಒಳ ಒಪ್ಪಂದ ಮಾಡಿಕೊಂಡವರಲ್ಲ,ಹಿಂದೆ ಲೋಕಸಭಾ ಚುನಾವಣೆಯಲ್ಲಿ ದೀಪಕ್ ಹೊನ್ನಾವರಕ್ಕೆ ಲೋಕಸಭಾ ಟಿಕೆಟ್ ಕೊಟ್ಟರು,ನಂತರ ನನಗೆ ಕೊಟ್ಟರು ನಾನು ಸೋತೆ. ಇದರ ನಂತರ ಶಿವರಾಮ್ ಹೆಬ್ಬಾರ್ ಹಣಕ್ಕಾಗಿ ಪಕ್ಷ ಬಿಟ್ಟು ಹೋದರು, ಕಾರ್ಯಕರ್ತರೂ ಬಿಟ್ಟುಹೋದರು ಆದರೂ ಅಲ್ಲಿ ನಾನು ಸ್ಪರ್ಧೆಮಾಡುವಂತೆ ಪಕ್ಷ ಹೇಳಿತು ,ನಾನು ಒಪ್ಪಿಕೊಂಡು ಸ್ಪರ್ಧೆ ಮಾಡಿ 50 ಸಾವಿರ ಮತ ತೊಗೊಂಡಿದ್ದೇನೆ,MLC ಗೆ ಮತ್ತೆ ಅವಕಾಶ ಕೊಟ್ಟರು ಆಗ ಅಲ್ಪ ಮತದಲ್ಲಿ ಸೋತೆ.ನಂತರ ವಿಧಾನಸಭೆಗೆ ಸ್ಪರ್ಧಿಸಲು ಅವಕಾಶ ಕೊಟ್ಟರು ಈಗ ಗೆದ್ದಿದ್ದೇನೆ.

ಇದನ್ನೂ ಓದು:ಅಪರೂಪದ ಬೃಹತ್‌ ಹಿಮಾಲಯನ್ ಗ್ರಿಫನ್‌ ಓಲ್ಚರ್‌ ರಣಹದ್ದು ಕಾರವಾರದಲ್ಲಿ ಪ್ರತ್ಯಕ್ಷ|ವಿಶೇಷ ಏನು ಗೊತ್ತಾ?

ಪಕ್ಷ ತೀರ್ಮಾನ ತೆಗೆದುಕೊಳ್ಳಲಿ, ಯಾರೇ ಆಗಲಿ ಅವರ ವಿರುದ್ಧ ಲೋಕಸಭೆ ಚುನಾವಣೆಗೆ ನಿಲ್ಲಲು ಸಿದ್ದವಾಗಿದ್ದೇನೆ.ಅದರಿಂದ ಹೆದರಿ ಇನ್ನೊಬ್ಬರಿಗೆ ಸೆಣ್ಣದಾಗಿ,ಪಕ್ಷ ಸೆಣ್ಣದಾಗಿದೆಯೋ ನೋಚಾನ್ಸ್ .ವರಿಷ್ಟರು ತೆಗೆದುಕೊಂಡ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಇವತ್ತು ಶಾಸಕನಾಗಿದೀನಿ ಏನು ಅಂತನಾ, ಜನ ಆಯ್ಕೆ ಮಾಡಿದ್ದು ,ಪಕ್ಷ ಕೊಟ್ಟಿದ್ದಂತದ್ದು .

ಇದು ನಮ್ಮ ಸ್ವತ್ತಲ್ಲ,ಜನರ ಸೊತ್ತು,ಜನರು ಅಧಿಕಾರ ಕೊಟ್ಟಿದ್ದು.ಜನರು ಎಷ್ಟೊತ್ತಿಗೂ ಏಳಿಸಬಹುದು,ಬೀಳಿಸಬಹುದು, ಅದನ್ನೇ ನಾವು ನಮ್ಮ ಜೀವನ ಎಂದುಕೊಳ್ಳಬಾರದು.ಇದು ಸೇವೆ,ಇವತ್ತಿನ ರಾಜ್ಯ ರಾಜಕಾರಣ,ಜಿಲ್ಲಾ ರಾಜಕಾರಣದಲ್ಲಿ ಈ ರೀತಿಯ ಅಪವಾದವನ್ನು ನಾನು ಹೊತ್ತುಕೊಳ್ಳಲು ತೆಯಾರಿಲ್ಲ.

ಇದನ್ನೂ ಓದಿ:-CM ಗೆ ಬೈದ್ರೂ ಪ್ರತಿಭಟಿಸದ ಅಶಕ್ತ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಒಳ ನಂಟು ಏನು!?

ಪಕ್ಷ ಏನೇ ತೀರ್ಮಾನ ಕೈಗೊಳ್ಳಲಿ ನಾನು ಚುನಾವಣೆಗೆ ಸ್ಪರ್ಧಿ ಸಲು ತೆಯಾರಾಗಿದ್ದೇನೆ.ಪಕ್ಷದ ತೀರ್ಮಾನ ಅದು,ಪಕ್ಷದ ಆದೇಶ ಅದು.ಪಕ್ಷದ ಆದೇಶವನ್ನು ಇಲ್ಲೀವರೆಗೆ ಪಾಲನೆ ಮಾಡಿಕೊಂಡು ಬಂದಿದ್ದೇನೆ. 13 ವರ್ಷ ಜಿಲ್ಲಾಧ್ಯಕ್ಷನಾಗಿದ್ದವನು.ಪಕ್ಷದ ಮೂರು ಚುನಾವಣೆಯಲ್ಲಿ ವರಿಷ್ಟರು ಕೊಟ್ಟ ಟಿಕೆಟ್ ನಲ್ಲಿ ಸೋತರೂ ಎಲ್ಲು ಸಹ ಜಗ್ಗಿಲ್ಲ, ಸೋತರೂ ಪಕ್ಷದ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮಾಡಿಕೊಂಡು ಬಂದವನು ನಾನು.ಅಧಿಕಾರಕ್ಕೆ ಅಂಟಿಕೊಂಡಿದ್ದವನು ನಾನಲ್ಲ.ಅನಂತಕುಮಾರ್ ಹೆಗಡೆ ಇರಲಿ ,ಯಾರೇ ಇರಲಿ ಅವರ ವಿರುದ್ಧ ನಿಲ್ಲಲು ತೆಯಾರಿದ್ದೇನೆ ಎಂದು ಹೇಳಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!