Scientists discover bioluminescent mushrooms in Kasaragod, warn against consumption

ಕಾಸರಗೋಡಿನಲ್ಲಿ ವಿಸ್ಮಯ| ರಾತ್ರಿಯಲ್ಲಿ ರೇಡಿಯಂ ನಂತೆ ಹೊಳೆಯುತ್ತೆ ಅಣಬೆಗಳು!

122

ಮಂಗಳೂರು:- ಗಡಿನಾಡು ಕೇರಳದ ಕಾಸರಗೋಡಿನಲ್ಲಿ ಅಪರೂಪದ ಪ್ರಕೃತಿ ವಿಸ್ಮಯವೊಂದು ಬೆಳಕಿಗೆ ಬಂದಿದೆ. ರಾತ್ರಿಯಲ್ಲಿ ಹೊಳೆಯುವ ಜೈವಿಕವಾಗಿ ಪ್ರಕಾಶಿಸಲ್ಪಡುವ ಅಣಬೆಗಳನ್ನು ಕಾಸರಗೋಡಿನ ದಟ್ಟ ಕಾಡುಗಳಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದು ಕೇರಳದ ಪ್ರತಿಷ್ಠಿತ ಪತ್ರಿಕೆ ಮನೋರಮಾ ದಲ್ಲಿ ಇದು ಪ್ರಕಟಗೊಂಡಿದೆ.

ವೈಜ್ಞಾನಿಕವಾಗಿ ‘ಫಿಲೋಬೊಲೆಟಸ್ ಮ್ಯಾನಿಪುಲಾರಿಸ್’ (Filoboletus manipularis) ಎಂದು ಕರೆಯಲ್ಪಡುವ ಈ ಅಣಬೆಗಳು ಜೀವರಾಸಾಯನಿಕ ಪ್ರಕ್ರಿಯೆಯ ಮೂಲಕ ತಮ್ಮದೇ ಆದ ಬೆಳಕನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಕಾಸರಗೋಡು ವಿಭಾಗ ಮತ್ತು ಮಶ್ರೂಮ್ಸ್ ಆಫ್ ಇಂಡಿಯಾ ಕಮ್ಯುನಿಟಿ ಜಂಟಿಯಾಗಿ ಕೇರಳದ ರಾಣಿಪುರಂ ಅರಣ್ಯದಲ್ಲಿ ಮೈಕ್ರೋ ಫಂಗಲ್ ಸಮೀಕ್ಷೆ ನಡೆಸಿದ ನಂತರ ಈ ರಾತ್ರಿ ಬೆಳಗುವ ಅಣಬೆಗಳು ಇರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:-ಮುಂಡಗೋಡಿನಲ್ಲಿ ಸಿಗುವ ಜಂಗಲ್ ಜಿಲೇಬಿ ಹುಳಸೆ ಬಗ್ಗೆ ಗೊತ್ತಾ! ನೀವು ಒಮ್ಮೆ ಟ್ರಯ್ ಮಾಡಿ

ಇದು ವಿಷಕಾರಿಯಾಗಿದ್ದು ಬಳಸಲು ಯೋಗ್ಯವಾಗಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಫಿಲೋಬೊಲೆಟಸ್ ಮ್ಯಾನಿಪುಲಾರಿಸ್, ಬಯೋಲುಮಿನೆಸೆಂಟ್ ಅಣಬೆಗಳ ಆಕರ್ಷಕ ಜಾತಿಯಾಗಿದೆ. ಈ ಅಣಬೆಗಳು ತಮ್ಮ ಜೀವಕೋಶಗಳಲ್ಲಿನ ರಾಸಾಯನಿಕ ಕ್ರಿಯೆಯಿಂದಾಗಿ ರಾತ್ರಿಯಲ್ಲಿ ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊರಸೂಸುತ್ತವೆ.

ಇವು ಉಷ್ಣವಲಯದ, ಆರ್ದ್ರತೆ ಇರುವ ವಾತಾವರಣದಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ದಟ್ಟವಾದ ಕಾಡುಗಳಲ್ಲಿ ಬಿದ್ದ ಮರಗಳು ಮತ್ತು ಕೊಳೆತ ಎಲೆಗಳಿಂದ ನಿರ್ಮಿತವಾದ ಸಾವಯವ ಕಾಂಪೋಸ್ಟ್‌ಗಳು ಸಾಕಷ್ಟು ಇರುತ್ತವೆ. ಈ ಸಮೃದ್ಧ ತೇವಾಂಶವುಳ್ಳ ಪರಿಸರವು ಅವುಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಮತ್ತು ಈ ವಾತಾವರಣ ಅಣಬೆಗಳಿಗೆ ವಿಶಿಷ್ಟವಾದ ಹೊಳೆಯುವ ಸಾಮರ್ಥ್ಯವನ್ನು ನೀಡುತ್ತವೆ ಎಂದು ಸಸ್ಯಶಾಸ್ತ್ರ ತಜ್ಞ ದಿಲೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!