ಅನಂತಕುಮಾರ್ ಹೆಗಡೆಗೆ ಠಕ್ಕರ್ ಕೊಡಲು ಕೈ ಸಿದ್ದ- ಇವರೇ ನೋಡಿ ಕೈ ಅಭ್ಯರ್ಥಿ!?

195

ಕಾರವಾರ, ಮಾರ್ಚ02:- ಲೋಕಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಬಿಜೆಪಿ(BJP) ಯಲ್ಲಿ 195 ಜನ ಅಭ್ಯರ್ಥಿ ಯನ್ನು ಘೋಷಣೆ ಮಾಡಿದ್ದಾರೆ. ಆದ್ರೆ ಕರ್ನಾಟಕ ರಾಜ್ಯದ ವಿಷಯದಲ್ಲಿ ಮಾತ್ರ ಅಭ್ಯರ್ಥಿ ಘೋಷಣೆಗೆ ವಿಳಂಬ ಮಾಡಲಾಗುತ್ತಿದೆ.

ಸದ್ಯ ಕರ್ನಾಟಕ (Karnataka) ದಲ್ಲಿ ಬಿಜೆಪಿ ವಿರೋಧಿ ಅಲೆ ಜೊತೆಗೆ ಬಿಜೆಪಿ ಸಂಸದರ ಮೇಲೂ ಪಕ್ಷದ ಕಾರ್ಯಕರ್ತರ ವಿರೋಧವಿದೆ‌. ಉತ್ತರ ಕನ್ನಡ ,ಉಡುಪಿ ,ಚಿಕ್ಕಮಗಳೂರು ಕ್ಷೇತ್ರದ ಸಂಸದರಿಗೆ ಬಿಜೆಪಿಯಲ್ಲಿ ತೀವ್ರ ವಿರೋಧ ಬೆನ್ನಲ್ಲೇ ಈ ಕ್ಷೇತ್ರ ದಲ್ಲಿ ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಕೂಗೂ ಜೋರಾಗಿದೆ. ಹೀಗಾಗಿ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋದರೇ ,ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ (Congress) ಬಿಜೆಪಿ ಗೆ ಟಕ್ಕರ್ ಕೊಡಲು ಸಿದ್ದಮಾಡಿಕೊಂಡಿದೆ.

ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ನಾಯಕರನ್ನ ಐಷಾರಾಮಿ ಹೋಟಲ್ ನಲ್ಲಿ ಭೇಟಿ ಯಾಗಿದ್ದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರುವುದು ಪಕ್ಕಾ ಆಗಿದೆ. ಇದಲ್ಲದೇ ಲೋಕಸಭೆ ಚುನಾವಣೆ ಘೋಷಣೆ ( Loksabha election)ಯಾದ ಬೆನ್ನಲ್ಲೇ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ( Mla Shivaram hebbar) ರಾಜೀನಾಮೆ ನೀಡುತ್ತಾರೆ ಎನ್ನುತ್ತಿದೆ ಅವರ ಆಪ್ತ ಮೂಲ.

ಇನ್ನು ಡಿ.ಕೆ ಶಿವಕುಮಾರ್ ರವರನ್ನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ( Chief Minister Siddaramaiah) ಹೆಬ್ಬಾರ್ ಭೇಟಿಯಾದಾಗ ಲೋಕಸಭಾ ಚುನಾವಣೆಗೆ ಪಕ್ಷದಿಂದ ನಿಲ್ಲುವಂತೆ ಕೇಳಿಕೊಂಡಿದ್ದಾಗಿ ಮೂಲಗಳು ಹೇಳಿವೆ.

ಕಾಂಗ್ರೆಸ್ ನಿಂದ ಶಿವರಾಮ್ ಹೆಬ್ಬಾರ್ ರವರನ್ನು ಅವರು ಒಪ್ಪಿದಲ್ಲಿ ನಿಲ್ಲಿಸಿ ಗೆಲ್ಲಿಸಲು ಸಕಲ ಸಿದ್ದತೆ ಮಾಡಿಕೊಂಡಿರುವ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೆ ಈ ಮಾಹಿತಿ ರವಾನೆ ಮಾಡಿದ್ದು ಕುದ್ದು ಜಿಲ್ಲಾ ಉಸ್ತುವಾರಿ ಸಚಿವ ಯಲ್ಲಾಪುರಕ್ಕೆ ತೆರಳಿ ಹೆಬ್ಬಾರ್ ಜೊತೆ ಸಭೆ ನಡೆಸಿದ್ದಾರೆ. ಹೀಗಾಗಿ ಲೋಕಸಭೆಗೆ ಹೆಬ್ಬಾರ್ ರನ್ನು ನಿಲ್ಲಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಇನ್ನು ಬಿಜೆಪಿ ಯಲ್ಲಿ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಬಹುತೇಕ ನಿಲ್ಲುವುದು ಗ್ಯಾರಂಟಿ ಆಗಿದ್ದು ಬೆಳಗಾವಿ ಜಿಲ್ಲೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮಾ.5ರಂದು ಭೇಟಿ ನೀಡಲಿದ್ದು, ಕ್ಲಸ್ಟರ್‌ ಸಭೆಗೆ ಚಾಲನೆ ನೀಡಲಿದ್ದಾರೆ. ಈ ಕ್ಲಸ್ಟರ್‌ ವ್ಯಾಪ್ತಿಯಲ್ಲಿ ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡದಂಥ ಹೈ ಪ್ರೊಫೈಲ್‌ ಕ್ಷೇತ್ರಗಳು ಬರುತ್ತವೆ. ಮೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಲ್ಲಿ ಬದಲಿಸಬೇಕೋ, ಬೇಡವೋ ಎಂಬ ವಿಚಾರದಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದ್ದು, ವರಿಷ್ಠರೇ ನೇರವಾಗಿ ಮಧ್ಯ ಪ್ರವೇಶಿಸ ಬೇಕಾದ ಸ್ಥಿತಿ ಇದೆ. ನಡ್ಡಾ ಭೇಟಿ ಸಂದರ್ಭ ಒಂದಿಷ್ಟು ಸಮಾಲೋಚನೆ ನಡೆಯುವುದು ನಿಶ್ಚಿತ ಎನ್ನಲಾಗುತ್ತಿದೆ.

ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಶಿರಸಿಯಲ್ಲಿ ಪದಾಧಿಕಾರಿಗಳ ಗುಪ್ತ ಸಭೆ ನಡೆಸಿದ್ದಲ್ಲದೇ ರಾಷ್ಟ್ರೀಯ ಅಧ್ಯಕ್ಷರ ಮುಂದೆ ಅಸಮಧಾನ ಹೊಗೆಯಾಡದಂತೆ ನೋಡಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಷ್ಟ್ರೀಯ ಅಧ್ಯಕ್ಷರ ಮುಂದೆ ಹೆಗಡೆ ಅಸಮಧಾನದ ಸದ್ದು ಅಡಗುವ ಸಾಧ್ಯತೆಗಳಿವೆ .

ಒಟ್ಟಿನಲ್ಲಿ ಅನಂತಕುಮಾರ್ ಹೆಗಡೆ ಪಕ್ಷದ ,ಜನರ ವಿರೋಧ ನಡುವೆಯೂ ಪಕ್ಷದಲ್ಲಿ ಮತ್ತೊಮ್ಮೆ ಅಭ್ಯರ್ಥಿ ಯಾಗಬೇಕು ಎಂಬ ಮಹದಾಸೆ ಫಲಿಸುವ ಸಾಧ್ಯತೆಗಳಿವೆ .ಆದ್ರೆ ಕಳೆದ ಬಾರಿ ಅಭ್ಯರ್ಥಿಯನ್ನೇ ನಿಲ್ಲಿಸದ ಕಾಂಗ್ರೆಸ್ ಈ ಭಾರಿ ತನ್ನ ಪ್ರಭಲ ಅಭ್ಯರ್ಥಿ ಯನ್ನು ಕಣಕ್ಕಿಳಿಸಲು ಸಿದ್ದತೆ ಮಾಡಿಕೊಂಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!