BREAKING NEWS
Search

ಲಾರಿ ಬ್ಯಾಟರಿಯಲ್ಲಿ ಷಾರ್ಟ ಸೆರ್ಕ್ಯೂಟ್ :ಹೆದ್ದಾರಿಯಲ್ಲೇ ಸುಟ್ಟು ಭಸ್ಮ!

717

ಕಾರವಾರ:- ಬೀಡಿ ಎಲೆ ತುಂಬಿದ ಲಾರಿಗೆಯಲ್ಲಿ ಷಾರ್ಟ ಸೆರ್ಕ್ಯೂಟ್ ನಿಂದ ಬೆಂಕಿ ತಗುಲಿ ಲಾರಿ ಸಂಪೂರ್ಣವಾಗಿ ಭಸ್ಮವಾಗಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಇಂದು ಸಂಜೆ ನಡೆದಿದೆ.

ಅಂಕೋಲಾ ಯಲ್ಲಾಪುರ ರಸ್ತೆಯ ಕಂಚಿನಬಾಗಿಲು ಬಳಿ ಚಲಿಸುತ್ತಿದ್ದ ಬೀಡಿ ಏಲೆ ತುಂಬಿದ ಲಾರಿಗೆ ಏಕಾಏಕಿ ಷಾರ್ಟ ಸೆರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಲಾರಿ ಸಂಪೂರ್ಣ ಭಸ್ಮವಾಗಿದೆ.

ಬೀಡಿಏಲೆ ತುಂಬಿದ ಲಾರಿ ಗುಜರಾತ್ ನಿಂದ ಮಂಗಳೂರಿಗೆ ಚಲಿಸುತ್ತಿತ್ತು.

ಲಾರಿಗೆ ಹೊತ್ತಿ ಉರಿದ ಪರಿಣಾಮ ಅಂಕೋಲಾ-ಯಲ್ಲಾಪುರ ಹೆದ್ದಾರಿ ಸಂಪೂರ್ಣ ಬಂದ್ ಮಾಡಲಾಗಿದೆ.

ಅಗ್ನಿಶಾಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಅಂದಾಜು ನಲವತ್ತು ಲಕ್ಷಕ್ಕೂ ಹೆಚ್ವು ನಷ್ಟವಾಗಿದೆ ಎಂದು ಹೇಳಲಾಗುತಿದ್ದು ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೇಸ್ ಬುಕ್ ಪೇಜ್ ನಲ್ಲಿ ಲಾರಿ ದಹಿಸುವ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಬಳಸಿ.:-

https://m.facebook.com/story.php?story_fbid=2782504422015472&id=2138406246425296

ಕನ್ನಡವಾಣಿ.ನ್ಯೂಸ್ ನ ಪ್ರತಿ ದಿನದ ಸುದ್ದಿಗಳನ್ನು ಉಚಿತವಾಗಿ ತಿಳಿಯಲು ಕೆಳಗಿನ ವಾಟ್ಸ್ ಅಪ್ ಲಿಂಕ್ ಬಳಸಿ ಗ್ರೂಪ್ ಗೆ ಸೇರಿ:-

https://chat.whatsapp.com/HILV8eiLFTBLhVImHmgkYP
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!