ಶಿರಸಿ|ಪ್ರೀತಿಗೆ ಕುಟುಂಬದ ವಿರೋಧದ ತಪ್ಪು ಕಲ್ಪನೆ:ಪ್ರೇಮಿಗಳಿಬ್ಬರು ನೇಣಿಗೆ ಶರಣು

2311


ಕಾರವಾರ:- ಮನೆಯಲ್ಲಿ ಮದುವೆ ಮಾಡಿಕೊಡುತ್ತೇನೆ ಎಂದು ಹೇಳಿದರೂ ಮನೆಯವರು ಮಾಡಿಕೊಡುವುದಿಲ್ಲವೆನೋ ಎಂಬ ಭಯಕ್ಕೆ ಯುವ ಪ್ರೇಮಿಗಳಿಬ್ಬರು ದುಡುಕಿ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿರಸಿ ತಾಲೂಕಿನ ಬೆಣ್ಣೆಹೊಳೆ ಫಾಲ್ಸ ಬಳಿಯ ಹೆಬ್ರೆ ಬೆಟ್ಟದಲ್ಲಿ ನಡೆದಿದೆ. 
ಶಿರಸಿ ತಾಲೂಕಿನ ತೆರಕನಹಳ್ಳಿಯ ಮೇಘನಾ ನಾಯ್ಕ (೨೭)  ಹಾಗೂ ಹುಸುರಿಯ ಬೊಬ್ಬನಕೊಡ್ಲಿನ ವಿಕ್ರಮ ಮಾವಿನಕುರ್ವೆ (೨೮) ಆತ್ಮಹತ್ಯೆ ಮಾಡಿಕೊಂಡ ಯುವ ಪ್ರೇಮಿಗಳಾಗಿದ್ದಾರೆ. 

ಮೇಘನಾ ಅತಿಥಿ ಉಪನ್ಯಾಸಕಿಯಾಗಿದ್ದು, ವಿಕ್ರಮ್ ಖಾಸಗಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದನು. 
ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರ ಮದುವೆಗೆ ಮನೆಯಲ್ಲಿ ಒಪ್ಪಿಗೆ ನೀಡಿ, ಸ್ವಲ್ಪ ದಿನಗಳ ನಂತರ ಮದುವೆ ಮಾಡಿಕೊಡುವುದಾಗಿ ತಿಳಿಸಿದ್ದರು. ಆದರೆ ಎಲ್ಲಿ ಮದುವೆ ಮಾಡಿಕೊಡುವುವುದಿಲ್ಲವೆನೋ ಎಂದು ತಪ್ಪು ತಿಳಿದು, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ದುಡುಕಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 


ಕೊಳೆ ಸ್ಥಿತಿ:-
ಹೆಬ್ರೆ ಬೆಟ್ಟದಲ್ಲಿ ಗಿಡವೊಂದಕ್ಕೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತಪಟ್ಟ ಕೆಲ ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!