ಪರವಾನಿಗೆ ಇಲ್ಲದೇ ಗಾಡಿದಾಟಿ ಬಂದ ಮಹಾರಾಷ್ಟ್ರ ಮೂಲದ ಲಾರಿ ಪಲ್ಟಿ! ಮುಂದಾಗಿದ್ದೇನು?

1439

ಕಾರವಾರ :- ಅಕ್ರಮವಾಗಿ ಗೋವಾ ಮದ್ಯ ವನ್ನು ಸಾಗಿಸುತ್ತಿದ್ದ ಮಹಾರಾಷ್ಟ್ರ ಮೂಲದ ಲಾರಿ ಪಲ್ಟಿಯಾಗಿ ಲಾರಿ ಚಾಲಕ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದ ಬಳಿ ಇಂದು ಸಂಜೆ ನಡೆದಿದೆ.

ಗೋವಾ ಮೂಲಕ ಕಾರವಾರ ಮಾರ್ಗವಾಗಿ ಹುಬ್ಬಳ್ಳಿ ಕಡೆ ಲಾರಿ ಚಲಿಸುತಿತ್ತು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದ್ದು ಪರವಾನಿಗೆ ಇಲ್ಲದ ಗೋವಾ ಮದ್ಯ ರಸ್ತೆಯಲ್ಲಿ ಬಿದ್ದಿದೆ.

ಈ ವೇಳೆ ಚಾಲಕ ಹೆದರಿ ಪರಾರಿಯಾಗಿದ್ದಾನೆ. ಒಂದು ಲಾರಿ ಪೂರ್ತಿ ವಿವಿಧ ಬ್ರಾಂಡ್ ನ ಮದ್ಯ ವಿದ್ದು ,ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಗೋವಾ ಮದ್ಯವೆಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಅಂಕೋಲ ಠಾಣೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಬೇಕಿದೆ.

ಗೋವಾ ಕರ್ನಾಟಕ ಗಡಿಯ ಮಾಜಾಳಿ ತಪಾಸಣಾ ಕೇಂದ್ರ ದಾಟಿದ್ದು ಹೇಗೆ?

ಗೋವಾ ರಾಜ್ಯದ ಒಂದು ಲಾರಿ ಲೋಡ್ ಮದ್ಯ ಗೋವಾ ಭಾಗದಿಂದ ಕರ್ನಾಟಕ ದಾಟಿ ಬಂದಿದೆ.ಆದರೇ ಗೋವಾ-ಕರ್ನಾಟಕ ಗಡಿ ಭಾಗದ ಮಾಜಾಳಿಯಲ್ಲಿ ಪೊಲೀಸ್, ಅಬಕಾರಿ,ಅರಣ್ಯ,ಕಂದಾಯ ಇಲಾಖೆ ತಪಾಸಣಾ ಕೇಂದ್ರವಿದೆ.

ಅದಲ್ಲದೇ ಗಡಿಯಲ್ಲಿ ಒಂದು ಗಡಿಯಿಂದ ಮತ್ತೊಂದು ಗಡಿಗೆ ಹೋಗಬೇಕಾದರೇ ಯಾವ ವಾಹನ ಲೋಡ್ ಆಗುತ್ತದೆಯೋ ಆ ವಾಹನಕ್ಕೆ ಪರ್ಮಿಟ್ ಇರುತ್ತದೆ. ಇದನ್ನು ನೋಡಿ ತಪಾಸಣೆ ನಡೆಸಿ ನಂತರ ವಾಹನಗಳನ್ನು ಬಿಡಲಾಗುತ್ತದೆ.

ಇನ್ನು ಈ ವಾಹನವು ಮಹಾರಾಷ್ಟ್ರ ನೊಂದಣಿ ಹೊಂದಿದೆ. ಹೀಗಿರುವಾಗ ಗಡಿಯಲ್ಲಿ ಕರೋನಾ ನೆಗೆಟೀವ್ ರಿಪೋಟ್ ನೋಡಬೇಕು. ಜೊತೆಗೆ ಕಠಿಣ ನಿಯಮ ಇರುವುದರಿಂದ ಹೆಚ್ಚಿನ ತಪಾಸಣೆಗಾಗಿ ಡಿ.ಆರ್ ತುಕಡಿಯನ್ನು ಹಾಕಲಾಗಿದೆ.

ಹೀಗಿದ್ದರೂ ಗೋವಾ ದಿಂದ ಒಂದು ಲೋಡ್ ಮದ್ಯ ಕರ್ನಾಟಕ ಗಡಿಯೊಳಗೆ ಬರುವ ಜೊತೆಗೆ ಹುಬ್ಬಳ್ಳಿ ಕಡೆ ಹೊರಟಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ.

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮದ್ಯವು ಒಂದು ಗಡಿಯಿಂದ ಮತ್ತೊಂದು ಗಡಿಗೆ ಯಾವುದೇ ಪರವಾನಿಗೆ ಇಲ್ಲದೇ ಬರುತ್ತದೆ ಎಂದರೇ, ಇದರಲ್ಲಿ ಪೊಲೀಸ್ ಇಲಾಖೆ,ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬರಲಿಲ್ಲ ಎಂಬುದೇ ಗಡಿಯಲ್ಲಿ ಯಾವ ಮಟ್ಟದ ಭದ್ರತೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!