ಹಿಂದೂ ಯುವತಿಗೆ ದೌರ್ಜನ್ಯ ವೆಸಗಿ ಮುಸ್ಲಿಂ ಧರ್ಮಕ್ಕೆ ಮತಾಂತರ|ವೈದ್ಯೆ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

63

ಮಂಗಳೂರು:ಮಂಗಳೂರಿನಲ್ಲಿ‌(Mangalur) ಮತಾಂತರದ ಭೂತ ಮತ್ತೆ ಸದ್ದು ಮಾಡಿದೆ.ಹಿಂದೂ ಯುವತಿಗೆ ಕೆಲಸ ಹಾಗೂ ಹಣದ ಆಮಿಷವೊಡ್ಡಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಎಂದು ದೂರು ದಾಖಲಾಗಿದೆ.ಪ್ರಸೂತಿ ವೈದ್ಯೆ ಸೇರಿ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಹಿಂದೂ ಯುವತಿಯನ್ನು ದೌರ್ಜನ್ಯ ಮಾಡಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರೋದಾಗಿ ಮಂಗಳೂರಿನ ಮಹಿಳಾ ಠಾಣೆಯಲ್ಲಿ‌ ಸಂತ್ರಸ್ಥ ಯುವತಿ ದೂರು ನೀಡಿದ್ದಾಳೆ. (Mangalore Police Station)

ಮಂಗಳೂರಿನ‌ ನೀರುಮಾರ್ಗ ನಿವಾಸಿ ಶಿವಾನಿ ಪೂಜಾರಿ ಎಂಬಾಕೆ ಕಳೆದ ಮೂರು‌ ವರ್ಷದ ಹಿಂದೆ ಕುಲಶೇಖರದ ಮೊಬೈಲ್ ಅಂಗಡಿಗೆ ಹೋಗಿದ್ದಾಗ ಅಂಗಡಿ ಮಾಲಿಕ ಖಲೀಲ್ ಮೊಬೈಲ್ ನಂಬರ್ ಪಡೆದಿದ್ದ. ಬಳಿಕ ಕೆಲಸ ಕೊಡೋ ಆಮಿಷವೊಡ್ಡಿ ಆಕೆಯನ್ನು ಮತಾಂತರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಕಿಸಲಾಗಿದೆ.

ಶಿವಾನಿ ಪೂಜಾರಿಯನ್ನು ಖಲೀಲ್ ಮತ್ತು ಆತನ ಸ್ನೇಹಿತ ಇಮಾಮ್ ಇಬ್ಬರು ಸೇರಿ‌‌ ಮಂಗಳೂರಿನ ಪ್ರಸಿದ್ಧ ಪ್ರಸೂತಿ ವೈದ್ಯೆ ಡಾ.ಜಮೀಲಾ ಎಂಬವರ ಮನೆಗೆ ಕೆಲಸಕ್ಕಾಗಿ‌ ಸೇರಿಸಿದ್ದರು. ಬಳಿಕ ಆಯೆಷಾ ಎಂದು ಹೆಸರು ಬದಲಾಯಿಸಿ ಪ್ರತಿದಿನ‌ ನಮಾಝ್ ಮಾಡುವಂತೆ ಹಾಗೂ ಕುರಾನ್ ಓದುವಂತೆ ಮೂವರು ಸೇರಿ ದೌರ್ಜನ್ಯ ಎಸೆಗಿದ ಜೊತೆಗೆ ಲೈಂಗಿಕ ಕಿರುಕುಳವನ್ನು ನೀಡಿದ್ದರು ಎಂದು ಮಂಗಳೂರಿನ ಮಹಿಳಾ ಠಾಣೆಗೆ ಶಿವಾನಿ ದೂರು ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದಲೂ ಶಿವಾನಿ (shivani)ಡಾ.ಜಮೀಲಾರ ಮನೆಯಲ್ಲಿ ಕೆಲಸಕ್ಕಿದ್ದು ಆಯೇಷಾ ಹೆಸರಿನಲ್ಲೇ ದಿನ ಕಳೆಯುತ್ತಿದ್ದಳು.

ಖಲೀಲ್ ಹಾಗೂ ಇಮಾಮ್ ಆಗ್ಗಾಗೆ ಶಿವಾನಿಗೆ ಲೈಂಗಿಕ ಕಿರುಕುಳವನ್ನೂ ನೀಡುತ್ತಿದ್ದರು. ಎಲ್ಲರೂ ಸೇರಿ ಕುರಾನ್ ಓದುವಂತೆ ಹಾಗೂ ನಮಾಝ್ ಮಾಡುವಂತೆ ಹಲ್ಲೆ‌ ನಡೆಸಿ ದೌರ್ಜನ್ಯ ನೀಡುತ್ತಿದ್ದರು, ಹೊರ ಹೋಗುವಾಗ ಬುರ್ಕಾ ಹಾಕಿಕೊಂಡೇ ಮುಸ್ಲಿಂ ಯುವತಿಯಂತೆ ಹೋಗಬೇಕಾಗಿತ್ತು.ಆದ್ರೆ ಇದ್ಯಾವುದನ್ನೂ ಮನೆಯವರಲ್ಲಿ ಮಾಹಿತಿ ನೀಡದೇ ಇದ್ದ ಶಿವಾನಿ ಇತ್ತೀಚೆಗೆ ಕಿರುಕುಳ ಹೆಚ್ಚಾಗಿದ್ದರಿಂದ ಮನೆಯಲ್ಲಿ ಹೇಳಿದ್ದಾಳೆ. ಮನೆಯವರು ವಿಶ್ವ ಹಿಂದೂ ಪರಿಷತ್ ನ ಮೂಲಕ ಮಹಿಳಾ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯುವತಿಯನ್ನು ಮತಾಂತರ ಮಾಡಿದ ಆರೋಪದ ಹಿನ್ನಲೆಯಲ್ಲಿ ಡಾ.ಜಮೀಲಾ,ಖಲೀಲ್ ಹಾಗೂ ಇಮಾಮ್ ನ ವಿರುದ್ಧ ಐಪಿಸಿ 3454,354(ಎ),506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಎಫ್ ಐಆರ್ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!