BREAKING NEWS
Search

ಪುನಿತ್ ಸಾವಿನ ಬಗ್ಗೆ ಸೂಚನೆ ನೀಡಿದ್ರಾ ಮಂತ್ರಾಲಯದ ಶ್ರೀಗಳು? ಅಂದು ನಡೆದಿದ್ದೇನು?

1149

ಕನ್ನಡವಾಣಿ ಡೆಸ್ಕ್ :- ಕರುನಾಡ ರಾಜಕುಮಾರ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣದಿಂದಾಗ ರಾಜ್ಯಕ್ಕೇ ಬರ ಸಿಡಿಲು ಬಡಿದಂತಾಗಿದೆ. ಇದ್ದಕ್ಕಿದ್ದಂತೆ ಅಪ್ಪು ನಿಧನ ಎಲ್ಲರನ್ನೂ ಶೂನ್ಯಗೊಳಿಸಿದೆ. ಆದ್ರೆ ಅಪ್ಪು ಅಗಲಿಕೆಯ ಕುರಿತು ಮಂತ್ರಾಲಯ ರಾಯರಿಗೆ ಮೊದಲೇ‌ ತಿಳಿದಿತ್ತಾ? ತಿಂಗಳ ಹಿಂದೆಯೇ ಸೂಚನೆ ನೀಡಿದ್ರಾ ಅನ್ನೋ ವಿಚಾರ ಇದೀಗ ಬಹು ಚರ್ಚೆಗೆ ಈಡಾಗಿದೆ.

ಹೌದು ಡಾ.ರಾಜ್ ಕುಮಾರ್ ಕಾಲದಿಂದಲೂ ದೊಡ್ಮನೆ ಸದಸ್ಯರು ಮಂತ್ರಾಲಯ ರಾಘವೇಂದ್ರ ಸ್ವಾಮಿಯ ಪರಮ ಭಕ್ತರು. ಅಪ್ಪು ಅಗಲುವಿಕೆಯ ಕುರಿತು ಕಳೆದ ಬಾರಿ ರಾಯರ ದರ್ಶನ ಮಾಡಿದಾಗ್ಲೇ ಸೂಚನೆ ನೀಡಿದ್ರಾ ಅನ್ನೋ ವಿಚಾರ ಇದೀಗ ವೈರಲ್ ಆಗ್ತಾ ಇದೆ.

ಕಳೆದ ಬಾರಿ ಪುನೀತ್ ರಾಜ್ ಕುಮಾರ್ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾಗ ಸುಭುದೇಂದ್ರ ತೀರ್ಥರ ಸಮಕ್ಷಮದಲ್ಲಿ ನಡೆದ ಘಟನೆ ಇದು.

ಕಳೆದ ತಿಂಗಳಷ್ಟೇ ರಾಯರ ಸನ್ನಿಧಾನಕ್ಕೆ ಭೇಟಿ ನೀಡಿದ್ದಾಗ ಪುನೀತ್ ರಾಜ್‍ಕುಮಾರ್ ಭಾಗ್ಯವಂತ ಸಿನಿಮಾ ಬಗ್ಗೆ ವಿವರವಾಗಿ ಮಾತನಾಡಿದ್ದರು. ಇದೇ ವೇಳೆ ಮುಂದಿನ ಬಾರಿ ರಾಯರ ಆರಾಧನೆಗೆ, ರಥೋತ್ಸವಕ್ಕೆ ಬರುತ್ತೇನೆ ಎಂದು ಹೇಳುತ್ತಿದ್ದಾಗಲೇ ರಾಯರ ಮುಖವಾಡ ಅಲುಗಾಡಿತ್ತು. ವೀಣೆ ಸಹ ಕೆಳಕ್ಕೆ ಜಾರಿ‌ ಹೋಗಿತ್ತು.

ವೀಣೆ ಬೀಳುವ ಮುಂಚೆ.
ವೀಣೆ ಬಿದ್ದ ಕ್ಷಣ.

ಆಗಲೇ ಕೆಟ್ಟ ಸೂಚನೆ ಸಿಕ್ಕಿತ್ತಾ ಎನ್ನುವ ಮಾತನ್ನು ಅಭಿಮಾನಿಗಳು ಆಡಿಕೊಳ್ಳುತ್ತಿದ್ದಾರೆ. ಆರಾಧನೆಗೆ ಅಪ್ಪು ಬರೋದಿಕ್ಕೆ ಸಾಧ್ಯವಾಗುವುದಿಲ್ಲ ಅಂತಾ ಅಂದೇ ರಾಯರು ಸೂಚನೆ ನೀಡಿದ್ರಾ? ಇದನ್ನು ಗ್ರಹಿಸುವಲ್ಲಿ ಸಫಲರಾಗಲಿಲ್ಲವಾ ಎನ್ನುವ ಮಾತುಗಳು ಇದೀಗ ಕೇಳಿಬರುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!