ಕಾರವಾರ :-ಉತ್ತರ ಕನ್ನಡ ಜಿಲ್ಲೆಯಲ್ಲಿ ಚೌಕ್ತೆ ಚಂಡಮಾರುತದಿಂದಾಗಿ ಹಾನಿಯಾದ ಪ್ರದೇಶಗಳಿಗೆ ಸಚಿವ ಆರ್ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ಭಟ್ಕಳಕ್ಕೆ ಇಂದು ಆಗಮಿಸಿದ ಸಚಿವ ಆರ್ ಅಶೋಕ್ ಭಟ್ಕಳದ ಹಾನಿಯಾದ ಕಡಲತೀರ ಪ್ರದೇಶಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚಂಡಮಾರುತದ ಅಬ್ಬರಕ್ಕೆ ಕರಾವಳಿಯ 43 ಗ್ರಾಮಗಳು ಹಾನಿ ಸಂಭವಿಸಿದ್ದು ,153 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದ್ದು ,22 ಮನೆ ತೀವ್ರ ಹಾಗೂ ಒಂದು ಮನೆ ಸಂಪೂರ್ಣ ನಾಶವಾಗಿದೆ. ಭಟ್ಕಳ ದಲ್ಲಿ ಮೀನುಗಾರ ಮೃತಪಟ್ಟಿದ್ದಾನೆ. ಆತನ ಕುಟುಂಬಕ್ಕೆ ತಕ್ಷಣದಲ್ಲಿ ಐದು ಲಕ್ಷ ಚಕ್ ನೀಡಲಾಗುವುದು. ಅಲ್ಪ ಮನೆ ಹಾನಿಗೆ ಒಂದು ಲಕ್ಷ, ಸಂಪೂರ್ಣ ಮನೆ ಹಾನಿಗೆ ಐದು ಲಕ್ಷ ಹಾಗೂ ಹಾನಿ ಸಂಭವಿಸಿದ ಕುಟುಂಬಕ್ಕೆ ತಕ್ಚಣದಲ್ಲಿ ಹತ್ತು ಸಾವಿರ ಪರಿಹಾರ ನೀಡಲಾಗುವುದು .


ಸದ್ಯ ಅಧಿಕಾರಿಗಳು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಮಾಹಿತಿ ಬಂದ ನಂತರ ಎಲ್ಲಾ ತೊಂದರೆಗೊಳಗಾದವರಿಗೆ ಹಣ ಬಿಡುಗಡೆ ಮಾಡಲಾಗುವು. ತಕ್ಷಣದಲ್ಲಿ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇಂದು ಮಂಗಳೂರು ಭಾಗದಲ್ಲಿ ಪರಿಶೀಲನೆ ನೆಡೆಸಿ ಭಟ್ಕಳಕ್ಕೆ ಬಂದಿದ್ದೇನೆ ನಂತರ ಉಡುಪಿಯಲ್ಲಿ ಪರಿಶೀಲನೆ ನಡೆಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕರಾವಳಿ ಭಾಗದ ಶಾಸಕರಾದ ರೂಪಾಲಿ ನಾಯ್ಕ, ಸುನಿಲ್ ನಾಯ್ಕ ,ದಿನಕರ್ ಶಟ್ಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಉಪಸ್ಥಿತರಿದ್ದರು.
ತೌಕ್ತೆಯ ಅಬ್ಬರಕ್ಕೆ ನಲುಗಿದ 43 ಗ್ರಾಮಗಳು:
ಇಳಿಮುಖವಾದ ಸಮುದ್ರ ಅಬ್ಬರ.

ಕಳೆದ ಎರಡು ದಿನದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ತೌಕ್ತೆ ಚಂಡಮಾರುತದಿಂದಾಗಿ ಜಿಲ್ಲೆಯಲ್ಲಿ ದೊಡ್ಡ ನಷ್ಟ ಸಂಭವಿಸಿದೆ.
ಚಂಡಮಾರುತದ ಅಬ್ಬರಕ್ಕೆ ಕರಾವಳಿಯ 43 ಗ್ರಾಮಗಳು ಹಾನಿ ಸಂಭವಿಸಿದ್ದು ,153 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದ್ದು ,22 ಮನೆ ತೀವ್ರ ಹಾಗೂ ಒಂದು ಮನೆ ಸಂಪೂರ್ಣ ನಾಶವಾಗಿದೆ. “ತೌಕ್ತೆ” ಅಬ್ಬರಕ್ಕೆ ಭಟ್ಕಳದ ಮೀನುಗಾರ ಮೃತಪಟ್ಟಿದ್ದಾನೆ.
ಕರಾವಳಿ ಭಾಗದಲ್ಲಿ ಬಹುತೇಕ ಮೀನುಗಾರರು ನಷ್ಟ ಅನುಭವಿಸಿದ್ದು, 83 ಬೋಟುಗಳು ಭಾಗಶಃ ಹಾನಿಯಾಗಿದ್ದರೆ , ಮೂರು ಬೋಟುಗಳು ಸಂಪೂರ್ಣ ಹಾನಿ ಸಂಭವಿಸಿದೆ.
ಕಡಲ ಅಲೆಯ ಹೊಡೆತಕ್ಕೆ 37 ಬಲೆಗಳು ಹಾನಿಯಾಗಿದ್ದರೆ 8 ಬಲೆಗಳು ಸಂಪೂರ್ಣ ಹಾನಿಯಾಗಿದೆ ಎಂದು ಗುರುತಿಸಲಾಗಿದೆ.
ಇನ್ನು ಮಳೆ ಹಾಗೂ ಗಾಳಿ ಅಬ್ಬರಕ್ಕೆ ಜಿಲ್ಲೆಯಾಧ್ಯಾಂತ 530 ವಿದ್ಯುತ್ ಕಂಬಗಳು ದರೆಗುರುಳಿದ್ದರೆ ,139 ಟ್ರಾನ್ಸ ಫಾರ್ಮರ್ ಗಳು ಹಾನಿಯಾಗಿದೆ.
ಜಿಲ್ಲೆಯ ಭಟ್ಕಳ,ಅಂಕೋಲ,ಮುಂಡಗೋಡು ಸೇರಿ 3.57 ಹೆಕ್ಟೇರ್ ತೋಟಗಾರಿಕಾ ಭಾಗಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಹೊನ್ನಾವರ,ಭಟ್ಕಳ,ಕುಮಟಾ ಸೇರಿ ಒಟ್ಟು ಏಳು ಕಾಳಜಿ ಕೇಂದ್ರ ತೆರೆದಿದ್ದು ಜಿಲ್ಲಾಡಳಿತ ಆಶ್ರಯ ನೀಡಿದೆ. ಇಂದು ಮಳೆ ಅಬ್ಬರ ಕಡಿಮೆಯಾಗಿದ್ದು, ಅಲೆಗಳ ಅಬ್ಬರ ಹಾಗೂ ಗಾಳಿಯ ಅಬ್ಬರ ಇಳಿಮುಖವಾಗುತ್ತಿದೆ.