BREAKING NEWS
Search

ತಮ್ಮ ಅನುದಾನದಲ್ಲಿ ಕರೀದಿಸಿದ ಅಂಬುಲೆನ್ಸ್ ಗಟ್ಟಿಮುಟ್ಟತೆ ತಿಳಿಯಲು ಅಂಬುಲೆನ್ಸ್ ಚಾಲನೆ ಮಾಡಿ ಟ್ರಯಲ್ ನೋಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್‌.

1485

ಕಾರವಾರ :- ಶಾಸಕರ ಅನುದಾನದಲ್ಲಿ ಕರೋನಾ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ ಅನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ರವರು ತಮ್ಮ ವಿಧಾನಸಭಾ ಕ್ಷೇತ್ರ ಯಲ್ಲಾಪುರಕ್ಕೆ ನಾಲ್ಕು ಅಂಬುಲೆನ್ಸ್ ಕರೀದಿಸಿದ್ದಾರೆ. ಹೀಗೆ ಕರೀದಿಸಿದ ಅಂಬುಲೆನ್ಸ್ ಗಟ್ಟುಮಟ್ಟಾಗಿದೆಯೇ ಎಂದು ಪರೀಕ್ಷಿಸಲು ತಾವೇ ಸ್ವತಹ ಹೊಸದಾಗಿ ಬಂದ ಅಂಬುಲೆನ್ಸ್ ಏರಿ ವಾಹನ ಚಲಾಯಿಸಿ ಟ್ರಯಲ್ ನೋಡಿದರು. ಯಲ್ಲಾಪುರದ ಪ್ರವಾಸಿ ಮಂದಿರದಿಂದ ಯಲ್ಲಾಪುರ ನಗರವನ್ನು ಒಂದು ಸುತ್ತುಹಾಕಿ ನಂತರ ಅಂಬುಲೆನ್ಸ್ ಅನ್ನು ಚಾಲನೆ ನೀಡಿದರು.

ಸಚಿವ ಶಿವರಾಮ್ ಹೆಬ್ಬಾರ್ ರವರು ತಮ್ಮ ವೃತ್ತಿಯನ್ನ ಮೊದಲು ಲಾರಿ ಚಾಲಕರಾಗಿ ಆರಂಭಿಸಿದವರು. ನಂತರ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಕೆಲವು ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ಗೆ ಬರುವ ಮೂಲಕ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಅದರ ನಂತರ ಪುನಹ ಬಿಜೆಪಿಗೆ ಬರುವ ಮೂಲಕ ಇಂದು ರಾಜ್ಯ ಕಾರ್ಮಿಕ ಸಚಿವರಾಗಿದ್ದಾರೆ.

ಹೆಬ್ಬಾರ್ ಅಂಬುಲೆನ್ಸ್ ಚಲಾಯಿಸಿದ ವಿಡಿಯೊ ನೋಡಿ:-

ಇನ್ನು ಟ್ರಯಲ್ ನೋಡಿದ ಹೆಬ್ಬಾರ ತಮ್ಮ ಅನುದಾನದಲ್ಲಿ ಅಲ್ಲದೇ ,ಕ್ಷೇತ್ರಕ್ಕೆ ತಮ್ಮ ಹಣದ ಮೂಲಕ ಹೊಸ ಅಂಬುಲೆನ್ಸ್ ಕರೀದಿಗೆ ಇದೀಗ ಮುಂದಾಗಿದ್ದಾರೆ. ಇನ್ನು ಹೆಬ್ಬಾರ್ ಚಾಲನೆ ಮಾಡುತ್ತಿರುವ ವಿಡಿಯೋ ಇದೀಗ ಜಿಲ್ಲೆಯಲ್ಲಿ ವೈರಲ್ ಆಗತೊಡಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!