ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ವಿಧಾನಪರಿಷತ್ ಚುನಾವಣೆಗೆ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಮೂರು ಅಭ್ಯರ್ಥಿಗಳು ತಲಾ ಮೂರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಉಳಿದ ಅಭ್ಯರ್ಥಿಗಳು ತಲಾ ಒಂದು ನಾಮಪತ್ರ ಸಲ್ಲಿಕೆ ಮಾಡಿದ್ದು ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಯಾವ ಅಭ್ಯರ್ಥಿ ಎಷ್ಟು ನಾಮಪತ್ರ ಸಲ್ಲಿಕೆ?

ಕಾಂಗ್ರೆಸ್ ಅಭ್ಯರ್ಥಿ ಆರ್.ಪ್ರಸನ್ನ ಕುಮಾರ್ ಹಾಗೂ ಬಿಜೆಪಿ ಅಭ್ಯರ್ಥಿ ಅರುಣ್ ರವರು ಮೂರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಜೆಡಿಯು ಅಭ್ಯರ್ಥಿ ಶಶಿಕುಮಾರ್ ಗೌಡರವರು ಒಂದು ನಾಮಪತ್ರ ,ಪಕ್ಷೇತರ ಅಭ್ಯರ್ಥಿ ಆರ್‌ಎಸ್ ಬುಜಂಗ,ಪಿ.ವೈ ರವಿ ರವರು ಒಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.