ಚುನಾವಣಾ ನೀತಿ ಸಂಹಿತೆ ಅಡ್ಡಿ- ಕುಮಟಾದಲ್ಲಿ ಮಕ್ಕಳಿಗೆ ಕನ್ನಡ ಪುಸ್ತಕ ಹಂಚಲು ಅಧಿಕಾರಿಗಳಿಂದ ತಡೆ

437

ಕಾರವಾರ :- ಪರಿಷತ್ ಚುನಾವಣೆ ನೀತಿಸಂಹಿತೆಯಿಂದಾಗಿ ಕನ್ನಡ ಶಾಲೆಯ ಮಕ್ಕಳಿಗೆ ಕುಮಟಾದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕವು ಉಚಿತವಾಗಿ ನೀಡುತಿದ್ದ ಶಾಲಾ ಪುಸ್ತಕವನ್ನು ನೀಡದಂತೆ ತಡೆ ಹಿಡಿದ ಘಟನೆ ಕುಮಟಾ ತಾಲೂಕಿನ ಮಾಸೂರಿನಲ್ಲಿ ನಡೆದಿದೆ.

ಕರ್ನಾಟಕ ರಕ್ಷಣಾ ವೇದಿಕೆ ಕುಮಟಾ ತಾಲೂಕು ಘಟಕದಿಂದ ಕಳೆದ ಹಲವಾರು ವರ್ಷಗಳಿಂದ ಕುಮಟಾ ತಾಲೂಕಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವನ್ನು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ರವರ ನೇತ್ರತ್ವದಲ್ಲಿ ನೀಡಲಾಗುತಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ನೀಡುತಿದ್ದು ಮಾಸೂರಿನಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಆದರೇ ಕಾರ್ಯಕ್ರಮ ನಡೆಯುತಿದ್ದ ವೇಳೆ ನೀತಿ ಸಂಹಿತೆ ನೆಪದಲ್ಲಿ ಕಾರ್ಯಕ್ರಮವನ್ನು ನಡೆಸದಂತೆ ನಿಲ್ಲಿಸಲಾಯಿತು.

ರಾಜಕೀಯೇತರ ಕಾರ್ಯಕ್ರಮ ಕ್ಕೆ ಅಧಿಕಾರಿಗಳ ಅಡ್ಡಿ- ಕರವೇ ಜಿಲ್ಲಾಧ್ಯಕ್ಷರಿಂದ ವಿರೋಧ‌.

ಯಾವುದೇ ರಾಜಕೀಯ ಪಕ್ಷದ ಅಥವಾ ರಾಜಕೀಯ ವ್ಯಕ್ತಿಗಳ ಹೆಸರಿನಲ್ಲಿ ನಡೆಸದೇ ಕನ್ನಡ ರಕ್ಷಣಾ ವೇದಿಕೆ ಹೆಸರಿನಲ್ಲಿ ನಡೆಸಲಾಗುತಿತ್ತು. ಹಲವು ವರ್ಷಗಳಿಂದ ಹಳ್ಳಿಯ ಬಡ ಮಕ್ಕಳಿಗೆ ಉಚಿತ ಪಠ್ಯ ನೀಡಲಾಗುತ್ತಿದೆ.

ಕಳೆದ ವರ್ಷದಿಂದ ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಪಠ್ಯಪುಸ್ತಕ ನೀಡುವ ಕಾರ್ಯಕ್ರಮ ವಿಳಂಬವಾಗಿತ್ತು. ಈ ವರ್ಷವೂ ಪಠ್ಯಪುಸ್ತಕ ಕಾರ್ಯಕ್ರಮವನ್ನು ವಿತರಿಸುವುದನ್ನು ಹಮ್ಮಿಕೊಂಡಿದ್ದು. ತಾಲೂಕಾಡಳಿತ ಈ ಕಾರ್ಯಕ್ರಮವನ್ನು ನೀತಿ ಸಂಹಿತೆ ಅಡಿಯಲ್ಲಿ ಮಾಡದಿರುವಂತೆ ತಡೆದಿದೆ.

ನೀತಿ ಸಂಹಿತೆ ನಮ್ಮ ಬ್ಯಾನರ್ ನಡಿ ಕೊಡುವಾಗ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುವಂಥ ಅವರಿಗೆ ಸಹಾಯ ಮಾಡುವುದು ನೀತಿ ಸಂಹಿತೆ ಅನ್ವಯಿಸುವುದೇ ಎನ್ನುವುದು ತಾಲೂಕು ಆಡಳಿತ ಅಧಿಕಾರಿಗಳು ತಿಳಿದುಕೊಳ್ಳಬೇಕಾಗಿದೆ. ಅಧಿಕಾರಿಗಳು ನಡೆದುಕೊಂಡ ರೀತಿ ಸರಿಇಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ‌.
ನಮ್ಮ ಕಾರ್ಯಕ್ರಮ ಮುಂದಿನ ದಿನ ಅದ್ದೂರಿಯಾಗಿ ಮಾಡುತ್ತೇವೆ ,ಅಧಿಕಾರಿಗಳು ನೀತಿ ಸಂಹಿತೆ ಬಗ್ಗೆ ತಿಳಿದುಕೊಂಡು ಕ್ರಮ ಜರುಗಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ರವರು ಆಗ್ರಹಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!