ಸಿದ್ದರಾಮಯ್ಯ ದಮ್ಮ ಇದ್ರೆ ಹಿಂಧೂ ರಾಷ್ಟ್ರ ಆಗೋದನ್ನ ತಡೆಯಲಿ- ಸಂಸದ ಅನಂತಕುಮಾರ್ ಹೆಗಡೆ

106

ಕಾರವಾರ :- ಸಿದ್ದರಾಮಯ್ಯನವರಿಗೆ ದಮ್ಮ ಇದ್ರೆ ಹಿಂಧೂ ರಾಷ್ಟ್ರ ಆಗೋದನ್ನ ತಡೆಯಲಿ,ಹಿಜಾಬಿನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ,ಸಿದ್ದರಾಮಯ್ಯನ ಸರ್ಕಾರ ಹುಚ್ಚು ಮಹಾಮದ್ ನ ಸರ್ಕಾರ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಕಿಡಿಕಾರಿದ್ದಾರೆ.

ಶಿರಸಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದು
ಅಲ್ಪ ಸಂಖ್ಯಾತರ ಓಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ,ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ,ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತಿದ್ದಾರೆ.

ಟಿಪ್ಪು ಈ ರಾಜ್ಯದ ಜನತೆ ತೆಗೆದಿಟ್ಟ ವ್ಯಕ್ತಿ ಟಿಪ್ಪು. ಈ ರಾಜ್ಯವನ್ನು ಸಾಂಸ್ಕೃತಿಕವಾಗಿ ,ಸಾಮಾಜಿಕವಾಗಿ ತೊಂದರೆಗೀಡು ಮಾಡಿದ ವ್ಯಕ್ತಿ.ಅವನ ಹೆಸರನ್ನೇ ತೆಗದುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತೆ ಎಂದರೇ ಕಾಂಗ್ರೆಸ್ ಗೆ ಮುಂದಿನ ದಿನ ಜನತೆ ಹೇಗೆ ಉತ್ತರ ಕೊಡುತ್ತೆ ಎಂಬುದನ್ನು ಯೋಚನೆ ಮಾಡಬೇಕು.

ಇದನ್ನೂ ಓದಿ:-Loksabha| ನಮ್ಮ ದೇಶವನ್ನಾಳಿದ ಪ್ರಧಾನಿಗಳೆಷ್ಟು ಗೊತ್ತಾ? ಚುನಾವಣೆ ಹೊಸ್ತಿಲಲ್ಲಿ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

ಹಿಜಾಬ್ ವಿಷಯದಲ್ಲಿ ಸಿದ್ದರಾಮಯ್ಯ ಯಾರುಬೇಕಾದ್ರು ಏನುಬೇಕಾದ್ರು ಡ್ರಸ್ ಹಾಕಿಕೊಂಡು ಹೋಗಬಹುದು ಎಂಬ ಹೇಳಿಕೆ ಮುಂದಿನ ದಿನ ಆತಂಕಕಾರಿ ಬೆಳವಣಿಗೆಗೆ ಕಾರಣ ಆಗುತ್ತೆ.ನಮ್ಮವರು ಕೇಸರಿ ಶಾಲು ಹಾಕಿಕೊಂಡು ಹೋಗ್ತಾರೆ ,ಅವರು ಹಿಜಾಬ್ ಹಾಕಿಕೊಂಡು ಹೋಗ್ತಾರೆ.

ಸರ್ಕಾರಕ್ಕೆ ಒಂದು ಚೌಕಟ್ಟಿನ ಕಲ್ಪನೆ ಸರರ್ಕಾಕ್ಕೆ ಇಲ್ಲಾ ಎಂದಾದರೇ ಸರ್ಕಾರ ಇದೆ ಎಂದು ಅನಿಸುವುದಿಲ್ಲ,ಸಿದ್ದರಾಮಯ್ಯನವರಿಗೆ ದಮ್ಮ ಇದ್ರೆ ಹಿಂಧೂ ರಾಷ್ಟ್ರ ಆಗೋದನ್ನ ತಡೆಯಲಿ, ಸಿದ್ದರಾಮಯ್ಯನ ದುರಂಹಕಾರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ,ಕರ್ನಾಟಕದಲ್ಲಿ ಹಿಂದು ವಿರೋಧಿ ಸರ್ಕಾರ ಇರಲು ಸಾಧ್ಯವೇ ಇಲ್ಲ,ಕಾಂಗ್ರೆಸ್ ನವರು ಬದುಕಬೇಕು ಎಂದರೇ ಮುಸ್ಲೀಮರ ಹಿಜಾಬನ್ನು ಹಿಡಿದುಕೊಂಡೇ ಓಟು ತಗೋಬೇಕು,ಹಿಜಾಬಿನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ,ಕರ್ನಾಟಕದಲ್ಲಿ ಮುಂದಿನ ದಿನದಲ್ಲಿ ಬಿಜೆಪಿ ಬರುತ್ತದೆ ಎಂದರು.

ಇನ್ನು ರಾಜ್ಯ ಸರ್ಕಾರ
ಗ್ಯಾರಂಟಿ ಯೋಜನೆ ಯನ್ನು ಖಂಡಿಸಿದ ಅವರು
ಆರ್ಥಿಕ ಸುಭದ್ರತೆಯ ಕಲ್ಪನೆಯೇ ಇಲ್ಲದಂತ ಕೆಲವರು ಮಾಡಿದಂತಹ ಉಪದ್ರವ ಇದು ,ಜನರಿಗೂ ಸಹ ಇದು ಬೇಕಾಗಿಲ್ಲ,ಇದರ ಪರಿಣಾಮ ಅಭಿವೃದ್ಧಿಗೆ ಹಣವಿಲ್ಲ,ಸಾಲ ತಂದು ಈ ಸರ್ಕಾರ ಫ್ರೀ ಬೀಸ್ ಕೊಟ್ಟಿರುವುದು ಹುಚ್ಚು ಮಹಾಮದ್ ನ ಸರ್ಕಾರವಾಗಿದೆ.ರಾಮ ಮಂದಿರ ಉದ್ಘಾಟನೆ ಆಗುತ್ತಿರುವುದು ಇದು ಹಿಂದು ಸಮಾಜದ ವಿಜಯ.
ಇದು ಹಿಂದೂ ಸಮಾಜದ ನಿರ್ಮಾಣದ ಮೊದಲ ಹೆಜ್ಜೆಯ ಗುರುತು ಎಂದರು.

ಇದನ್ನೂ ಓದಿ:- Astrology|ದಿನಭವಿಷ್ಯ-24-12-2023
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!