BREAKING NEWS
Search

ಹಿಂದುಗಳ ಭಾವನೆಗಳಿಗೆ ದಕ್ಕೆ- ಅಮಿರ್ ಖಾನ್ ನಟಿಸಿರುವ ಸಿಎಟ್ ಜಾಹಿರಾತು ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ವಿರೋಧ- ಸಿಎಟ್ ಕಂಪನಿ ಮಾಲೀಕನಿಗೆ ಪತ್ರ

1586

ಕಾರವಾರ :- ಸಿಎಟ್ ಟೈರ್ ಜಾಹಿರಾತಿನಲ್ಲಿ ಹಿಂದುಗಳ ಹಬ್ಬಗಳನ್ನು ಟೀಕಿಸಿ ಹಿಂದುಗಳ ಭಾವನೆಯನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಸಿಎಟ್ ಟೈರ್ ಕಂಪನಿ ಮಾಲೀಕ ಅನಂತ ವರಧನ್ ಗೆ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದಾರೆ.


ಸಿಎಟ್ ಜಾಹಿರಾತಿನಲ್ಲಿ ಹಿಂದುಗಳ ಆಚರಣೆಗಳನ್ನು ನಟ ಅಮೀರ್ ಖಾನ್ ಹೀಯಾಳಿಸಿರುವ ಕುರಿತು ವಿರೋಧ ವ್ಯಕ್ತಪಡಿಸಿ ಉಲ್ಲೇಖಿಸಿರುವ ಅವರು
ಈ ಜಾಹಿರಾತಿನಲ್ಲಿ ಹಿಂದುಗಳ ಭಾವನೆಯನ್ನು ತುಳಿಯುವ ಕ್ಷುಲ್ಲಕ ಕುತಂತ್ರ ಎಂದು ಆರೋಪಿಸಿದ್ದು,
ಆಮೀರ್ ಕಾನ್ ನಟಿಸಿರುವ ಜಾಹಿರಾತಿನಲ್ಲಿ ಹಿಂದುಗಳು ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ. ಅಮೀರ್ ಕಾನ್ ರವರ ಪರಿಸರ ,ಪ್ರಾಣಿ ಗಳ ಬಗ್ಗೆ ಕಾಳಜಿಗೆ ನನ್ನ ಮೆಚ್ಚುಗೆ ಇದೆ,ಆದರೇ ಅಮೀರ್ ಖಾನ್ ಪ್ರತಿಪಾದಿಸುವ ಮುಸ್ಲಿಂ ಧರ್ಮದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವುದು,ಬೆಳಗ್ಗೆ ದ್ವನಿವರ್ದಕ ಬಳಸುವುದರ ಬಗ್ಗೆ ಏಕೆ ಮೌನ ಎಂದು ಪ್ರಶ್ನಿಸಿದ್ದು ಹಿಂದುಗಳ ಭಾವನೆಗಳನ್ನು ತುಳಿಯುವ ಕೆಲಸವಾಗಿದೆ ಎಂದು ಆರೋಪಿಸಿ ಪತ್ರ ಬರೆದಿದ್ದು,ತಾವು ಬರೆದಿರುವ ಪತ್ರವನ್ನು ಟ್ವೀಟ್ ಮಾಡಿದ್ದಾರೆ.

ತಮ್ಮ ಫೇಸ್ ಬುಕ್ ನಲ್ಲಿ ಸಂಸದ ಅನಂತಕುಮಾರ್ ಹಗಡೆ ಹಂಚಿಕೊಂಡ ವಿವರ ಹೀಗಿದೆ:-

ಹಿಂದುಗಳ ಆಚರಣೆಗಳನ್ನು ಹೀಯಾಳಿಸುವುದೊಂದೆ ಇವರ ಕೆಲಸವೇ????

ಪರಿಸರವಾದಿ, ಪ್ರಾಣಿಪ್ರೇಮಿ ಆಮೀರ್ ಖಾನ್ ಅಭಿನಯಿಸಿರುವ ಜಾಹೀರಾತು ಒಂದರಲ್ಲಿ ದೀಪಾವಳಿ ಹಬ್ಬದಲ್ಲಿ ಹಿಂದುಗಳಿಗೆ ಪಟಾಕಿ ಸಿಡಿಸದಂತೆ ಮನವಿಮಾಡಿದ್ದಾನೆ….. ಅವರು ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ತೋರುತ್ತಿರುವ ಕಾಳಜಿಗೆ ನನ್ನ ಮೆಚ್ಚುಗೆ!!!!!

ಅದರಂತೆ ಅನ್ಯಧರ್ಮಗಳಲ್ಲಿ (ತಾನು ಪ್ರತಿಪಾದಿಸುವ ಧರ್ಮವನ್ನು ಹಿಡಿದು) ನಡೆಯುವ ಎಷ್ಟೋ ಆಚರಣೆಗಳ ಬಗ್ಗೆ ಏಕೆ ಮೌನ……

ಪ್ರತಿದಿನ ಬೆಳಗ್ಗೆ ಚೀರುವ ಧ್ವನಿವರ್ಧಕಗಳು, ರಸ್ತೆಗಳ ಮಧ್ಯದಲ್ಲಿ ನಮಾಜ್ ಮಾಡುವುದು ಇನ್ನು ಎಷ್ಟೋ ಆಚರಣೆಗಳು ಅಮೀರ್ ಖಾನ್ ಗಮನ ಹರಿಸಿದರೆ ಎಷ್ಟೋ ಸಮಸ್ಯೆಗಳು ಬಗೆಹರಿಯುತ್ತವೆ….

ಅಂದಹಾಗೆ ಈ ರೀತಿಯ ಜಾಹೀರಾತುಗಳು ಹಿಂದುಗಳ ಭಾವನೆಗಳನ್ನು ತುಳಿಯಲು ಮಾಡಿದ ಕ್ಷುಲಕ ಕುತಂತ್ರವಲ್ಲದೆ ಮತ್ತೇನೂ ಆಗಿರುವುದಿಲ್ಲ.. ಅಂತೆಯೇ ಭಾರತದಲ್ಲಿ ಇಂತಹ ಹಿಂದೂ ವಿರೋಧಿ ಅಭಿನೇತರriಗೇನು ಕಮ್ಮಿಯಿಲ್ಲ…..

ಈ ಜಾಹಿರಾತನ್ನು ಶ್ರೀ ಅನಂತ ವರಧಾನ್ ಗೋಯೆಂಕ ಮಾಲೀಕತ್ವದ CEAT ಸಂಸ್ಥೆಯು ಪ್ರಸ್ತುತ ಪಡೆಸಿದ್ದು, ಈ ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕು ಹಾಗೂ ಹಿಂದೂಗಳೇ ಆಗಿರುವ ಅವರು ಹಿಂದುಗಳ ಭಾವನೆಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗಿ ಆಗ್ರಹ ಎಂದು ಬರೆದುಕೊಂಡಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!