BREAKING NEWS
Search

Ram Mandir crowd: ರಾಮಮಂದಿರದಲ್ಲಿ ಭಾರಿ ಜನಸ್ತೋಮ:ವಾಹನಗಳ ಪ್ರವೇಶ ನಿರ್ಬಂಧ

39

ನವದೆಹಲಿ,ಜನವರಿ24:- ಅಯೋಧ್ಯೆ (Ayodhya) ರಾಮಮಂದಿರ ಉದ್ಘಾಟನೆ ಬೆನ್ನಲ್ಕೇ ಶ್ರೀ ರಾಮನ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ‌.

ಸೋನವಾರದ ದಿನವೇ ಲಕ್ಷಾಂತರ ಜನ ಅಯೋಧ್ಯೆ ಗೆ ಆಗಮಿಸಿದ್ದು ಜನಸಂದಣಿ ಜೊತೆ ವಾಹನಗಳನ್ನು ಕಂಟ್ದೋಲ್ ಮಾಡಲು ಸಹ ಸ್ಥಳೀಯ ಆಡಳಿತಕ್ಕೆ ದೊಡ್ಡ ತಲೆನೋವಾಗಿತ್ತು.

ಆದರೂ ಮಂಗಳವಾರದ ದಿನ ಅಯೋಧ್ಯೆ ಗೆ ಬರುವ ವಾಹನ ( vehicles) ಸಂಖ್ಯೆ ಹಟಾತ್ ಹೆಚ್ಚಾಗಿದ್ದು ಇದರಿಂದಾಗಿ ಸ್ಥಳೀಯ ಅಧಿಕಾರಿಗಳು ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.ಆದರೂ ಜನಸಂದಣಿ ಹೆಚ್ಚಾದ ಹಿನ್ನಲೆಯಲ್ಲಿ ನೂಕು ನುಗ್ಗಲು ಪ್ರಾರಂಭವಾಗಿ ಹಲವು ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ( Chief Minister Yogi Adityanath) ಅಯೋಧ್ಯೆ ಗೆ ಬರುವ ಪ್ರವಾಸಿಗರಿಗೂ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಅಯೋಧ್ಯೆಯಲ್ಲಿನ ಪರಿಸ್ಥಿತಿ ಕುರಿತು ಸಭೆ ನಡೆಸಲಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಅಯೋಧ್ಯೆಗೆ ತೆರಳುವ ಎಲ್ಲಾ ವಾಹನಗಳ ಮೇಲೆ ನಿಷೇಧ ಹೇರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ವಾಹನಗಳಿಗೆ ಮಾಡಲಾದ ಎಲ್ಲಾ ಆನ್‌ಲೈನ್ ಬುಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ ಮತ್ತು ಯಾತ್ರಿಕರ ಬಸ್ ದರಗಳ ಮರುಪಾವತಿಯನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತಿದೆ.

ಭದ್ರತೆಗೆ ಸವಾಲಾದ ಭಕ್ತರ ಸಂಖ್ಯೆ!

ದೇವಾಲಯದ ಭದ್ರತೆ (Temple security )ನಿರ್ವಹಣಾ ಅಧಿಕಾರಿಗಳು ಮಂಗಳವಾರ ಭದ್ರತಾ ಸಿಬ್ಬಂದಿ ಭಾರೀ ಯಾತ್ರಾರ್ಥಿಗಳ ಗುಂಪನ್ನು ನಿಯಂತ್ರಿಸಲು ಕಷ್ಟಪಟ್ಟ ನಂತರ ಈ ಹೇಳಿಕೆ ಬಂದಿದೆ. ಎಲ್ಲಾ ಭಕ್ತರು ರಾಮಲಲ್ಲಾನ (Ramalulla) ದರ್ಶನ ಪಡೆಯಲು ಸಾಧ್ಯವಾಗುತ್ತದೆ. ದರ್ಶನವು ನಿರಂತರವಾಗಿ ನಡೆಯುತ್ತಿದೆ. ಭಕ್ತರು ತಾಳ್ಮೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:-Astrology|ದಿನಭವಿಷ್ಯ 24-01-2024

ಮಂಗಳವಾರ ಮುಂಜಾನೆ ಶ್ರೀರಾಮನ ದರ್ಶನ (shri Rama Darshana) ಪಡೆಯಲು ರಾಮಮಂದಿರಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಸುಮಾರು ಮೂರು ಲಕ್ಷ ಜನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹೊರಗೆ ಕಾಯುತ್ತಿರುವವರ ಸಂಖ್ಯೆಯೂ ಐದು ಲಕ್ಷ ಮೀರಿತ್ತು. ಸೋಮವಾರ ರಾತ್ರಿಯಿಂದಲೇ ಕೆಲವರು ಸರತಿ ಸಾಲಿನಲ್ಲಿ ನಿಂತು ರಾಮನ ದರ್ಶನಕ್ಕೆ ಕಾದಿದ್ದರು.

ರಾಮಮಂದಿರದ ಗರ್ಭಗುಡಿಯೊಳಗೆ ಜನಸಂದಣಿಯನ್ನು ನಿರ್ವಹಿಸಲು ಸ್ವತ: ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಉತ್ತರ ಪ್ರದೇಶ ಡಿಜಿ ಪ್ರಶಾಂತ್ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಶ್ರಮ ಪಟ್ಟರು. ಇದೀಗ ಇಂದು ಸಹ ಜನಸಂದಣಿ ಹೆಚ್ಚಾಗಿದ್ದು ಪ್ರತಿ ಕ್ಷಣ ಅಯೋಧ್ಯೆ ರಾಮಮಂದಿರಕ್ಕೆ ( ramamandira)ಬರುವ ಭಕ್ತರ ಸಂಖ್ಯೆ ಗಣನೀಯ ಏರಿಕೆ ಕಾಣುವ ಜೊತೆ ಭದ್ರತೆಗೂ ತೊಂದರೆಯುಂಟಾಗಿದೆ.

ಇದನ್ನೂ ಓದಿ:-Weather report- ರಾಜ್ಯ ಹವಾಮಾನ ವರದಿ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!