ಕಾರವಾರ :- ಇಂಜಿನ್ ನಲ್ಲಿ ತಾಂತ್ರಿಕ ದೋಷದ ಕಾರಣಕ್ಕೆ ಭಾರತೀಯ ನೌಕಾದಳಕ್ಕೆ ಸೇರಿದ ಎನ್-741 ಹೆಲಿಕಾಪ್ಟರ್ ಶಿರಸಿ ತಾಲ್ಲೂಕಿನ ದಾಸನಕೊಪ್ಪ ಗ್ರಾಮದ ಎಪಿಎಂಸಿ ಮೈದಾನದಲ್ಲಿ ತುರ್ತು ಭೂ ಸ್ಪರ್ಷ ಮಾಡಿದೆ.
ಬೆಂಗಳೂರಿನಿಂದ ಗೋವಾದತ್ತ ಹೆಲಿಕಾಪ್ಟರ್ ತೆರಳುತಿದ್ದು ಈವೇಳೆ ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ನಂತರ ಪೈಲೆಟ್ ದಾಸನಕೊಪ್ಪದ ಮೈದಾನದಲ್ಲಿ ಜೀವರಕ್ಷಣೆಗಾಗಿ ಮೈದಾನದಲ್ಲಿ ಕೆಳಗಿಳಿಸಿದ್ದಾರೆ.

ಇಬ್ಬರು ಪೈಲಟ್ ,ಓರ್ವ ಕಮಾಂಡಿಂಗ್ ಆಫೀಸರ್ ಇದ್ದ ಈ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತಿದ್ದು ಅದೃಷ್ಟವಶಾತ್ ಪೈಲೆಟ್ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇನ್ನು ಏಕಾಏಕಿ ಹೆಲಿಕಾಪ್ಟರ್ ಇಳಿದಿದ್ದು ಕಂಡು ಗ್ರಾಮಸ್ಥರು ದಿಗ್ಭ್ರಮೆಗೊಳಗಾಗಿದ್ದು, ಪೈಲಟ್ ಗಳು ಹೊರಬರುತ್ತಿದ್ದಂತೆ ಹೆಲಿಕಾಪ್ಟರ್ ನೋಡಲು ನೂರಾರು ಜನ ಜಮಾಯಿಸಿದ್ದರು.ಇನ್ನು ಹೆಲಿಕಾಪ್ಟರ್ ನಲ್ಲಿ ದೋಷವಿದ್ದಿದ್ದರಿಂದ ಸರಿಪಡಿಸಲು ಗೋವಾದಿಂದ ಶಿರಸಿಗೆ ತಾಂತ್ರಿಕ ತಜ್ಞರು ಹೆಲಿಕಾಪ್ಟರ್ ಮೂಲಕ ಆಗಮಿಸುತಿದ್ದು ನಂತರ ಹೆಲಿಕಾಪ್ಟರ್ ನಲ್ಲಿ ಯಾವ ಭಾಗದಲ್ಲಿ ತಾಂತ್ರಿಕ ಸಮಸ್ಯೆ ಗೊಂಡಿತ್ತು ಎಂಬುದು ತಿಳಿದುಬರಲಿದೆ.

ಘಟನೆಯು ಬನವಾಸಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಸ್ಥಳದಲ್ಲಿ ಜಮಾಯಿಸಿದ ಜನರನ್ನು ಚದುರಿಸಲು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಸುದ್ದಿ ಮತ್ತು ಜಾಹಿರಾತಿಗೆ ಸಂಪರ್ಕಿಸಿ:- 9741058799