BREAKING NEWS
Search

ಉತ್ತರ ಕನ್ನಡ ಜಿಲ್ಲೆಯ ತರಬೇತುದಾರ ಕಾಶಿನಾಥ್ ಮನೆಗೆ ಬಂದ ಚಿನ್ನದ ಹುಡುಗ ನೀರಜ್ ಚೋಪ್ರಾ.

2459

ಕಾರವಾರ :- ಟೊಕಿಯೊದಲ್ಲಿ ನಡೆದ ಒಲಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಜೋಪ್ರಾ ಇಂದು ಪುಣೆಯಲ್ಲಿರುವ ಉತ್ತರ ಕನ್ನಡ ಜಿಲ್ಲೆ ಮೂಲದ ಕೋಚ್ ಕಾಶಿನಾಥ್ ನಾಯ್ಕ ರವರ ಮನೆಗೆ ಆಗಮಿಸಿ ತಮ್ಮ ಸಾಧನೆಯ ಸಂತಸ ಹಂಚಿಕೊಂಡಿದ್ದಾರೆ.

ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿರುವ, ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‌ಸ್ಟಿಟ್ಯೂಟ್‌ನಲ್ಲಿ ತರಬೇತುದಾರರಾಗಿರುವ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಗ್ರಾಮದ ಕಾಶಿನಾಥ ನಾಯ್ಕ್ ಅವರು ಈ ಚಿನ್ನದ ಪದಕ ವೀರ ನೀರಜ್ ಚೋಪ್ರಾ ಅವರ ಹಿಂದಿನ ಶಕ್ತಿಯಾಗಿದ್ದಾರು.

23 ವರ್ಷದಿಂದ ಸೇನೆಯಲ್ಲಿರುವ ಕಾಶಿನಾಥ ನಾಯ್ಕ್, 2010ರ ನವದೆಹಲಿಯ ಕಾಮನ್‌ವೆಲ್ತ್ ಗೇಮ್ಸ್‌ನ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. 2013ರಿಂದ 2019ರವರೆಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಾರೆ. ಈ ವೇಳೆ ನೀರಜ್ ಜೋಪ್ರಾಗೂ ತರಬೇತಿ ನೀಡಿದ್ದರು.

ತಾನು ತರಬೇತಿ ನೀಡಿದ್ದ ಹುಡುಗ ಚಿನ್ನ ಗೆದ್ದಿದ್ದಕ್ಕೆ ಸಂತಸ ಪಟ್ಟಿದ್ದರು.ಇನ್ನು ರಾಜ್ಯ ಸರ್ಕಾರ ಕೂಡ ಕಾಶಿನಾಥ್ ಗೆ 10 ಲಕ್ಷ ಬಹುಮಾನ ಸಹ ಘೋಷಿಸಿತ್ತು. ಆದರೇ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಕಾಶಿನಾಥ್ ತರಬೇತಿ ನೀಡಿಲ್ಲ ಎಂದು ಹೇಳಿಕೆ ನೀಡಿ ವಿವಾಧ ಸೃಷ್ಟಿಸಿದ್ದರು.

ಆದರೇ ಇದೀಗ ನೀರಜ್ ಚೋಪ್ರಾ ಕುದ್ದು ಕಾಶಿನಾಥ್ ರವರ ಮನೆಗೆ ಬಂದು ಕುಟುಂಬದವರೊಂದಿಗೆ ಸಮಯ ಕಳೆದಿದ್ದಾರೆ. ನೀರಜ್ ಚೋಪ್ರಾ ಬರುತಿದ್ದಂತೆ ಆರತಿ ಎತ್ತಿ ಒಳ ಬರಮಾಡಿಕೊಂಡ ಕುಟುಂಬ ಖಷಲೋಪರಿ ವಿಚಾರಿಸಿದರು. ತಮ್ಮ ಶಿಷ್ಯನ ಸಾಧನೆಗೆ ಸಂತಸದಿಂದ ಮನೆಗೆ ಬರಮಾಡಿಕೊಂಡ ಕಾಶಿನಾಥ್ ರವರೊಂದಿಗೆ ನೀರಜ್ ಚೋಪ್ರಾ ಕೆಲವು ಸಮಯ ಕಳೆದರು. ಇನ್ನು ಇದೇ ಸಂದರ್ಭದಲ್ಲಿ ಮನೆಯಲ್ಲಿದ್ದ ನಾಯಿಯನ್ನು ಮುದ್ದಾಡಿ ಖುಷಿಪ್ಟರು. ಆರ್ಮಿ ಕ್ಯಾಂಪ್ ನಲ್ಲಿನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಚೋಪ್ರಾ ರವರು ಮೊದಲು ಕಾಶಿನಾಥ್ ಮನೆಗೆ ಬೇಟಿ ನೀಡಿದ್ದು ಹಿಂದೆ ಎದ್ದಿದ್ದ ವಿವಾದ ಈಗ ತಣ್ಣಗಾಗಲು ಕಾರಣವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!