ಫಟಾಫಟ್ ಸುದ್ದಿ @ Uttrakannada

188

ಬೆಂಗಳೂರು:- ಈ ಹಿಂದೆ ಕುಮಟಾದ ಹೆಸ್ಕಾಂ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲ ಅಭಿಯಂತರ ಅಧಿಕಾರಿಯಾಗಿದ್ದ ಕುಂದಾಪುರ(kundapura) ಬಿಟಕೇರಿ ನಿವಾಸಿ ರಾಕೇಶ.ಬಿ ಎನ್ನುವವರಿಗೆ ರಾಜ್ಯ ಉಚ್ಚನ್ಯಾಯಾಲಯ ಕುಮಟಾದ ಬಿ.ಎಡ್ ವಿದ್ಯಾರ್ಥಿನಿಗೆ ನಂಬಿಸಿ ಅತ್ಯಾಚಾರ ಮಾಡಿದ ಆರೋಪದಡಿ ಏಳು ವರ್ಷ ಶಿಕ್ಷೆ ವಿಧಿಸಿ ಆದೇಶಿಸಿದೆ.

ಕುಮಟಾ ದಲ್ಲಿ ಕರ್ತವ್ಯ ನಿರ್ವಹಿಸುವಾಗ ತಾನಿದ್ದ ಬಾಡಿಗೆ ಮನೆಯ ಪಕ್ಕದಲ್ಲೇ ಬಿಎಡ್ ಓದುತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿಸುವುದಾಗಿ ನಂಬಿಸಿದ್ದ ಕುಮಟಾದಿಂದ ಕುಂದಾಪುರಕ್ಕೆ ವರ್ಗಾವಣೆ ಆದ ಬಳಿಕೆ ಆಕೆಯನ್ನು ಕುಂದಾಪುರಕ್ಕೆ ಕರೆಯಿಸಿ ಅಲ್ಲಿ ಅತ್ಯಾಚಾರ ಮಾಡಿರುವ ಕುರಿತು ಕುಂದಾಪಯರದಲ್ಲಿ ದೂರು ದಾಖಲಾಗಿತ್ತು.ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆ ನಂತರ ಆತ ನಾಪತ್ತೆಯಾಗಿದ್ದು ಸಂತ್ರಸ್ತೆ ಕೋರ್ಟ ಮೊರೆಹೋಗಿದ್ದು ಇದೀಗ ನ್ಯಾಯಾಲಯವು ಆರೋಪಿಗೆ 50 ಸಾವಿರ ದಂಡ ಹಾಗೂ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬೈಕ್ ಹಾಗೂ ಬಸ್ ನಡುವೆ ಅಪಘಾತ-ಸವಾರ ಸಾವು

ಶಿರಸಿ ;- ಸಾರಿಗೆ ಬಸ್ ಹಾಗೂ ಬೈಕ್ ನಡುವೆ bike bus accident )ಅಪಘಾತ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹೆಗಡೆಕಟ್ಟಾ ಕ್ರಾಸ್ ಬಳಿ ಫೆ. 11ರ ಭಾನುವಾರ ನಡೆದಿದೆ.

ಪ್ರಕಾಶ ಗೋಪಾಲ ಭಟ್ ಹೆಗ್ಗಾರು (33) ಮೃತ ಸವಾರ. ಬೈಕ್ ಸವಾರನ ಅತೀ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಕಾರಿನಲ್ಲಿ ಗಾಂಜಾ ಸಾಗಾಟ-ಐದು ಜನರ ಬಂಧನ.

ಯಲ್ಲಾಪುರದ ನೂತನ ನಗರದ ಮೀರ್ ಅದಂ ಮೀ‌ರ್ ಮುನಾಫ, ಸೈಯ್ಯದ್ ನಯೀಂ ಸೈಯ್ಯದ್ ಮಹಮ್ಮದ್, ಮಲ್ಲಿಕ್ ರಿಹಾನ್ ಹರೂನ್ ಶೇಖ್, ಉದ್ಯಮನಗರದ ಪವನ ಸರ್ವೇಶ ಬನ್ನೋಡೆ ಹಾಗೂ ಮದನೂರು ಸಮೀಪದ ಖಂಡ್ರೆನಕೊಪ್ಪದ ಮಾಲು ಲಕ್ಕು ಲಾಂಬೋರೆ ಬಂಧಿತರು.

ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಇವರನ್ನು ಪೊಲೀಸರು ದಾಳಿ ನಡೆಸಿ, ವಶಕ್ಕೆ ಪಡೆದಿದ್ದಾರೆ. ಇವರಿಂದ 565 ಗ್ರಾಂ ಗಾಂಜಾ, 2600 ರೂ ನಗದು, 4 ಮೊಬೈಲ್‌ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕಾರವಾರ: ಅಪ್ರಾಪ್ತ ಬಾಲಕನಿಗೆ ಸ್ಕೂಟರ್ ಕೊಟ್ಟ ಮಾಲೀಕನಿಗೆ ಸಿಜೆಎಂ ನ್ಯಾಯಾಲಯ 30 ಸಾವಿರ ದಂಡ ವಿಧಿಸಿದೆ.

ನಗರದ ಮುರಳೀಧರಮಠ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಅಪಘಾತ ಸಂಭವಿಸಿದ ಬಗ್ಗೆ ಆರೋಪಿ ಅಪ್ರಾಪ್ತ ಬಾಲಕನಾಗಿದ್ದ. ಪ್ರಕರಣವನ್ನು ಬಾಲ ನ್ಯಾಯ ಮಂಡಳಿಗೆ ಹಸ್ತಾಂತರಿಸಲಾಗಿತ್ತು.
ಬಾಲ ನ್ಯಾಯ ಮಂಡಳಿಯು ಅಪ್ರಾಪ್ತನಿಗೆ 6,500 ರೂ. ದಂಡ ವಿಧಿಸಿದೆ.

ವಾಹನ ಮಾಲೀಕನ ವಿರುದ್ಧವೂ ಪ್ರಕರಣ ದಾಖಲಿಸಿದ್ದು, ಹಿರಿಯ ಸಿವಿಲ್ ಹಾಗೂ ಸಿ.ಜೆ.ಎಂ.‌ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಮೋಟಾರ ಸ್ಕೂಟರಿನ ಮಾಲೀಕರಿಗೆ 30,000 ರೂಗಳನ್ನು ದಂಡ ವಿಧಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!