BREAKING NEWS
Search

ಗಂಡನ ಮೇಲೆ ಜಪಾನ್ ಮಹಿಳೆಮುನಿಸು!ಗೋಕರ್ಣ ಪೊಲೀಸರಿಗೆ ತಂತು ಪಚೀತಿ!

35

ಕಾರವಾರ:- ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ (Japan )ದೇಶದ ಪ್ರವಾಸಿ ಮಹಿಳೆ (tourist women )ಕೇರಳದಲ್ಲಿ ಪತ್ತೆಯಾಗಿದ್ದು ಗೋಕರ್ಣ ಪೊಲೀಸರ ತಂಡ ಆಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ಸು ಕಂಡಿದ್ದಾರೆ.

ಪೆ.5 ರಂದು ಗೋಕರ್ಣ ನೇಚರ್ ಕಾಟೇಜ್ ನಿಂದ ನಾಪತ್ತೆಯಾಗಿದ್ದು ಆಕೆಯ ಪತಿ ದೈ ಯಮಾಝಕಿ ಠಾಣೆಯಲ್ಲಿ ದೂರು ನೀಡಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಗೋಕರ್ಣ ಪೊಲೀಸರು (gokarna police) ಪಿಎಸ್ಐ ಖಾದರ್ ಭಾಷಾ ಮತ್ತು ಸುಧಾ ಅಘನಾಶಿನಿ ನೇತತ್ವದ ವಿಶೇಷ‌ ತಂಡ ರಚಿಸಿದ್ದರು.

ಕಾಣೆಯಾಗಿದ್ದ ಎಮಿ ಯಮಾಝಕಿ ಆನ್ ಲೈನ್ ನಲ್ಲಿ ಇರುವ ಕುರಿತು ಪತ್ತೆ ನಡೆಸಿದ ಪೊಲೀಸರು ಕೇರಳದ (kerala )ಸ್ಥಳ ಟ್ರಾಕ್ ಮಾಡಿದ್ದರು.
ನಂತರ ಅಲ್ಲಿಗೆ ತೆರಳಿದ್ದಾಗ ಆಗೆ ಪತ್ತೆಯಾಗಿದ್ದು ಇದೀಗ ಗೋಕರ್ಣಕ್ಕೆ ಕರೆತರುತಿದ್ದಾರೆ.

ಪತಿಯ ಮೇಲಿನ ಕೋಪ ಪೊಲೀಸರಿಗೆ ತಂದ ಪಚೀತಿ

ಫೆಬ್ರುವರಿ 4ರಂದು ಗೋಕರ್ಣದ ಬಂಗ್ಲೆಗುಡ್ಡದ ನೇಚರ್ ಕಾಟೇಜ್‌ನಲ್ಲಿ ತನ್ನ ಪತಿಯ ಜತೆ ತಂಗಿದ್ದ ಮಹಿಳೆ ಯಾವುದೋ ವಿಷಯಕ್ಕೆ ಗಲಾಟೆ ಮಾಡಿಕೊಂಡಿದ್ದಳು. ನಂತರ ಪತಿಯ ಮೇಲಿನ ಸಿಟ್ಟಿನಿಂದ ಮುಂಜಾನೆ ಎದ್ದು ಹೋದ ಮಹಿಳೆ ಗೋಕರ್ಣದ ರೈಲ್ವೆ ನಿಲ್ದಾಣಕ್ಕೆ ತೆರಳಿ ಹಿಂದೆ ಭೇಟಿ ನೀಡಿದ್ದ ಕೇರಳಕ್ಕೆ ತೆರಳಿದ್ದಾಳೆ. ಈ ವೇಳೆ ಆನ್ ಲೈನ್ ನಲ್ಲಿ ಸಕ್ರಿಯವಾಗಿದ್ದರಿಂದ ಪತ್ತೆ ಹಚ್ಚುವಲ್ಲಿ ಪೊಲೀಸರಿಗೂ ಸಹಾಯವಾಗಿದ್ದು ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!