Pm modi Leaders contesting against Prime Minister Modi in Varanasi Lok Sabha constituency

Varanasi| ಮೋದಿ ವಿರುದ್ಧ ಎಷ್ಟು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಗೊತ್ತಾ?ವಿವರ ನೋಡಿ

104
GILANI super market karwar KSRTC bus stand near Karwar

Loksabha election 2024 :- ಪ್ರಧಾನಿ ನರೇಂದ್ರ ಮೋದಿ (pm narendra modi) ರವರು ಉತ್ತರ ಪ್ರದೇಶದ ವಾರಣಾಸಿಯಿಂದ ಲೋಕಸಭೆಗೆ ಆಯ್ಕೆ ಬಯಸಿ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ.

ದೇಶದ ಪ್ರಧಾನಿ ಅಕಾಡದಲ್ಲಿ ಯಾರೆಲ್ಲಾ ಅವರ ವಿರುದ್ಧ ಸ್ಪರ್ಧೆ ತಿಳಿದಿದ್ದಾರೆ ಎಂಬ ಸಹಜ ಕುತೂಹಲ ಇಡೀ ದೇಶದ ಜನತೆಗೆ ಇದ್ದೇ ಇರುತ್ತೆ.ಹಾಗಿದ್ರೆ ಯಾರೆಲ್ಲಾ ನಾಮಪತ್ರ ಸಲ್ಲಿಸಿದ್ರು? ಯಾರು ಅಖಾಡದಲ್ಲಿದ್ದಾರೆ ವಿವರ ಇಲ್ಲಿದೆ.

ಜೂನ್‌ 1ರಂದು ನಡೆಯುವ ವಾರಣಾಸಿ ಕ್ಷೇತ್ರದ ಲೋಕಸಭೆ ಚುನಾವಣೆಗೆ ಒಟ್ಟು 39 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 33 ನಾಮಪತ್ರಗಳು ತಿರಸ್ಕಾರಗೊಂಡಿವೆ. ಅಂತಿಮವಾಗಿ ಕಣದಲ್ಲಿ 6 ಅಭ್ಯರ್ಥಿಗಳು ಮಾತ್ರ ಉಳಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಹಾಸ್ಯನಟ ಶ್ಯಾಮ್ ರಂಗೀಲಾ ಚುನಾವಣಾ ಕಣಕ್ಕಿಳಿದಿದ್ದರು. ಅವರು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು. ಆದರೆ ನಾಮಪತ್ರ ಸಲ್ಲಿಕೆ ಮಾಡುವಾಗ ಅವರು ಪ್ರಮಾಣ ವಚನ ಸ್ವೀಕಾರ ಮಾಡದ ಕಾರಣ ನಾಮಪತ್ರ ತಿರಸ್ಕಾರವಾಗಿದೆ.

ಕಣದಲ್ಲಿರುವ ಅಭ್ಯರ್ಥಿಗಳ ವಿವರ:-

ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ , ಕಾಂಗ್ರೆಸ್‌ನಿಂದ ಅಜಯ್ ರಾಯ್ ಕಣದಲ್ಲಿದ್ದಾರೆ. ಸಮಾಜವಾದಿ ಪಕ್ಷದಿಂದ ಅಥಲ್ ಜಲಾಲ್ ಲಾರಿ ಅಭ್ಯರ್ಥಿಯಾಗಿದ್ದಾರೆ.

ಅಪನಾ ದಳ್‌ ಪಕ್ಷದಿಂದ ಗಂಗನ್ ಪ್ರಕಾಶ್, ರಾಷ್ಟ್ರೀಯ ಸಮಾಜವಾದಿ ಜನಶಕ್ತಿ ಪಕ್ಷದಿಂದ ಪರಾಸ್ ನಾಥ್ ಕೇಸರಿ ಮತ್ತು ಪಕ್ಷೇತರ ಅಭ್ಯರ್ಥಿಯಾದ ಸಂಜಯ್ ಕುಮಾರಿ ತಿವಾರಿ ಕಣದಲ್ಲಿದ್ದಾರೆ.

ಜೂನ್ 1ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಹಿಂದೆ ಏನಾಗಿತ್ತು?

ವಾರಣಾಸಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ ಚುನಾವಣಾ ಕಣಕ್ಕಿಳಿದಿದ್ದರು. ಬಿಜೆಪಿ ಅಭ್ಯರ್ಥಿಯಾದ ಅವರು 581,022 ಮತಗಳನ್ನು ಪಡೆದು ಜಯಗಳಿಸಿದ್ದರು ಮತ್ತು ಭಾರತದ ಪ್ರಧಾನಿಯಾದರು. ಅವರ ಎದುರಾಳಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್(Aravind kejrival) 209,238 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಅಜಯ್ ರಾಯ್ 75,614, ಬಿಎಸ್‌ಪಿಯ ವಿಜಯ್ ಪ್ರಕಾಶ್ ಜೈಸ್ವಾಲ್ 60,579 ಮತ್ತು ಸಮಾಜವಾದಿ ಪಕ್ಷದ ಕೈಲಾಶ್‌ ಚಾರುಸಿಯಾ 45,291 ಮತಗಳನ್ನು ಪಡೆದಿದ್ದರು.

2019ರ ಚುನಾವಣೆಯಲ್ಲಿ ನರೇಂದ್ರ ಮೋದಿ 2ನೇ ಬಾರಿಗೆ ವಾರಣಾಸಿಯಿಂದ(Varanasi) ಕಣಕ್ಕಿಳಿದರು. 674,664 ಮತಗಳನ್ನು ಪಡೆದು ಜಯಗಳಿಸಿದರು. 2ನೇ ಅವಧಿಗೆ ಭಾರತದ ಪ್ರಧಾನಿಯಾದರು. ಸಮಾಜವಾದಿ ಪಕ್ಷದಿಂದ ಎದುರಾಳಿಯಾಗಿದ್ದ ಶಾಲಿನಿ ಯಾದವ್ 195,159 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಅಜಯ್ ರಾಯ್ 152,548 ಮತಗಳನ್ನು ಪಡೆದು ಸೋಲು ಕಂಡರು.

ಕಾಂಗ್ರೆಸ್ 3 ಚುನಾವಣೆಗಳಿಂದಲೂ ಅಜಯ್ ರಾಯ್ ಅವರನ್ನೇ ನರೇಂದ್ರ ಮೋದಿ ವಿರುದ್ಧ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದೆ. ಎರಡು ಬಾರಿ ಸೋಲು ಕಂಡಿರುವ ಅವರು 2024ರ ಚುನಾವಣೆಯಲ್ಲಿಯೂ ಮೋದಿಯನ್ನು ಎದುರಿಸುತ್ತಿದ್ದಾರೆ.

ಹಿಂದಿನ ಲೋಕಸಭಾ ಚುನಾವಣೆ ಅಂಕಿ ಅಂಶಗಳನ್ನು ತೆಗೆದುಕೊಳ್ಳುವುದಾದರೇ 479505 ಮತಗಳ ಅಂತರ ಮೋದಿ ಗೆಲವು ಇದೆ. ಪ್ರತಿ ಬಾರಿಯೂ ಮೋದಿಯವರ ಮತಗಳು ಹೆಚ್ಚಾಗುತ್ತಲೇ ಹೋಗಿವೆ. ಹೀಗಾಗಿ ಈಬಾರಿ ಎಷ್ಟು ಅಂತರದಲ್ಲಿ ಗೆಲ್ಲುತ್ತಾರೆ ಎಂಬ ಕುತೂಹಲ ಸಹ ಮೂಡಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!