Kannada actor Rishabh Shetty came to Gokarna Temple

ಮಹಾಬಲೇಶ್ವರನಲ್ಲಿ ಕಾಂತಾರ ಕಂಡ ರಿಷಭ್ ಶಟ್ಟಿ!

87

Gokarna news:- ಕಾಂತಾರ (Kantara movie )ಸಿನಿಮಾ ಮೂಲಕ ದೈವದ ಶಕ್ತಿ ಸಂದೇಶವನ್ನು ಜಗತ್ತಿಗೆ ಸಾರಿಸ ಖ್ಯಾತ ಚಿತ್ರ ನಟ,ನಿರ್ಮಾಪಕ ರಿಷಭ್ ಶಟ್ಟಿ( Rishabh Shetty) ಕುಟುಂಬಸಮೇತರಾಗಿ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗ ಸ್ಪರ್ಷ ದರ್ಶನ ಪಡೆದರು.

ಇದಕ್ಕೂ ಮೊದಲು ಮಹಾಬಲೇಶ್ವರ ದೇವಸ್ಥಾನ ಅನುವಂಶಿಯ ಅರ್ಚಕರಾಸ ರಾಜಗೋಪಾಲ ಅಡಿ ರವರ ನೇತ್ರತ್ವದಲ್ಲಿ ಮಹಾಗಣಪತಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಇವೆರಡು ದೇವಾಲಯದ ಭೇಟಿ ಬಳಿಕ ತಾಮ್ರಗೌರಿ, ಸ್ಮಶಾನಕಾಳಿ ದೇವಾಲಯಕ್ಕೆ ತೆರಳಿ ದೇವಿ ದರ್ಶನ ಪಡೆದರು. ಈ ವೇಳೆ ಮಂದಿರದ ಅನುವಂಶೀಯ ಮುಖ್ಯ ಅರ್ಚಕರಾದ ರಾಜಗೋಪಾಲ ಅಡಿ ರವರು ಶಾಲು ಹೊದಿಸಿ ,ಸ್ಮರಣಿಕೆ ನೀಡಿ ಗೌರವಿಸಿದರು.
ಈ ವೇಳೆ ರಿಷಬ್‍ರವರ ಪತ್ನಿ ಪ್ರಗತಿ, ಮಕ್ಕಳಾದ ರನ್ವಿತ್, ರಾಧ್ಯಾ ಮತ್ತಿತರರು ಉಪಸ್ಥಿತರಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!