Health tips for dengue fever

ಡೆಂಗ್ಯೂ ಭಯ ಬೇಡ| ಈ TIPS ಅನುಸರಿಸಿ-ಏನದು ವಿವರ ನೋಡಿ.

147

Information news :- ಮಳೆಗಾಲ (Rain) ಪ್ರಾರಂಭವಾಗುತಿದ್ದಂತೆ ಜ್ವರ ( fever) ಸೇರಿದಂತೆ ಸಾಂಕ್ರಾಮಿಕ ರೋಗಗಳು ಬರೋದು ಸಾಮಾನ್ಯ ಹಾಗಂತ ಇವುಗಳಿಂದ ರಕ್ಷಣೆ ಪಡೆಯುವುದು ಸಹ ಅತೀ ಮುಖ್ಯ.

ಡೆಂಗ್ಯೂ ವೈರಸ್ ( dengue virus )ನಿಂದ ಹರಡುವಂತಹ ಡೆಂಗ್ಯೂ ಜ್ವರವು ಸೊಳ್ಳೆಗಳಿಂದ (mosquito )ಮನುಷ್ಯರಿಗೆ ಹಬ್ಬುತ್ತದೆ. ಡೆಂಗ್ಯೂ ಸೋಂಕಿತ ಸೊಳ್ಳೆಗಳು ಕಚ್ಚಿದ ವೇಳೆ ಅದು ಮನುಷ್ಯರಿಗೆ ಹರಡುವುದು. ಇದು ಉಷ್ಣವಲಯ ಮತ್ತು ಉಪ ಉಷ್ಣವಲಯದಲ್ಲಿ ಸಾಮಾನ್ಯವಾಗಿದೆ.

ಡೆಂಗ್ಯೂ ಬಂದ ಹೆಚ್ಚಿನವರಲ್ಲಿ ಇದರ ಯಾವುದೇ ಲಕ್ಷಣಗಳು ಗೋಚರಿಸಲ್ಲ. ಆದರೆ ಕೆಲವರಲ್ಲಿ ಇದರ ಸಾಮಾನ್ಯ ಲಕ್ಷಣಗಳಾಗಿರುವಂತಹ ಅಧಿಕ ಜ್ವರ, ತಲೆನೋವು, ಮೈಕೈನೋವು, ವಾಕರಿಕೆ ಮತ್ತು ದದ್ದು ಕಂಡುಬರಬಹುದು. 1-2 ವಾರದಲ್ಲಿ ಇದರಿಂದ ಗುಣಮುಖವಾಗಬಹುದು. ಕೆಲವರಲ್ಲಿ ಡೆಂಗ್ಯೂ ಅಧಿಕವಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾಗಬಹುದು.

ಡೆಂಗ್ಯೂ ಲಘು ಅಥವಾ ಯಾವುದೇ ಲಕ್ಷಣಗಳು ಇಲ್ಲದೆ ಇದ್ದರೆ ಆಗ1-2 ದಿನಗಳಲ್ಲಿ ಚೇತರಿಸಿಕೊಳ್ಳಬಹುದು. ಡೆಂಗ್ಯೂ ತೀವ್ರವಾಗಿ ಪ್ರಾಣಕ್ಕೆ ಹಾನಿ ಉಂಟು ಮಾಡುವುದು ತುಂಬಾ ಅಪರೂಪ.ಸೋಂಕು ತಗುಲಿದ 4-10 ದಿನಗಳಲ್ಲಿ ಇದರ ಲಕ್ಷಣಗಳು ಕಾಣಿಸಿಕೊಳ್ಳುವುದು ಮತ್ತು 2-7 ದಿನಗಳ ಕಾಲ ಇದು ಜ್ವರ,ಅಧಿಕ ಸ್ನಾಯು ಸೆಳತ,ಗಂಟುಗಳಲ್ಲಿ ನೋವು ,ಕಣ್ಣಗುಡ್ಡೆ ಕೆಳಭಾಗದಲ್ಲಿ ನೋವು,ವಾಕರಿಕೆ ,ವಾಕರಿಕೆ ಕಾಣಿಸಿಕೊಳ್ಳುತ್ತದೆ.

ಡೆಂಗ್ಯೂವಿನಿಂದ ಚೇತರಿಸಿಕೊಳ್ಳುವುದು ಹೇಗೆ?

ಅಧಿಕ ವಿಶ್ರಾಂತಿ,ಅಧಿಕ ಪ್ರಮಾಣದಲ್ಲಿ ದ್ರವಾಹಾರ ಸೇವನೆ,ಅಸೆಟಾಮಿನೋಫೆನ್(ಪ್ಯಾರಸಿಟಾಮೋಲ್) ನೋವಿಗೆ ಬಳಸಿ.ಐಬುಪ್ರೊಫೇನ್ ಮತ್ತು ಆಸ್ಪಿರಿನ್ ನಂತಹ ಉರಿಯೂತ ಶಮನಕಾರಿ ಔಷಧಿ ಸೇವಿಸಬೇಡಿ.ಲಕ್ಷಣಗಳು ತೀವ್ರವಾಗಿದ್ದರೆ, ಆಗ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಿರಿ.

ಇದನ್ನು ಮಾಡಿ ನೋಡಿ:-

ಪಪ್ಪಾಯಿ ಮರದ ಎಲೆ ಡೆಂಗ್ಯೂ ಜ್ವರ ಇರುವವರಿಗೆ ರಾಮಬಾಣ ವಾಗಿ ಕೆಲಸ ಮಾಡುತ್ತದೆ. ಇದು ಅತ್ಯಂತ ಪರಿಣಾಮಕಾರಿಯಾಗಿ ಜ್ವರ ವಾಸಿ ಮಾಡುವುದರ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಪ್ಲೇಟ್ಲೆಟ್ ಸಂಖ್ಯೆಯನ್ನು ವೃದ್ಧಿಸುತ್ತದೆ. ಇದಕ್ಕಾಗಿ ನೀವು ಸ್ವಲ್ಪ ಪಪ್ಪಾಯಿ ಎಲೆಯ ರಸವನ್ನು ನೀರಿಗೆ ಹಾಕಿ ಮಿಕ್ಸ್ ಮಾಡಿ ದಿನದಲ್ಲಿ ಎರಡು ಅಥವಾ ಮೂರು ಬಾರಿ ಕುಡಿಯುವುದು ಉತ್ತಮ. ಪಪ್ಪಾಯಿ ಹಣ್ಣು ಸಹ ಒಳ್ಳೆಯದು.

ಇವಿಗಳನ್ನು ಸೇವಿಸಬೇಡಿ:-

ಎಣ್ಣೆ ಜಿಡ್ಡಿನ ಆಹಾರಗಳು ಮತ್ತು ಕರಿದ ಆಹಾರ ಪದಾರ್ಥಗಳು, ಕೆಫಿನ್ ಅಂಶ ಇರುವ ಪಾನೀ ಯಗಳು, ಕಾರ್ಬೋ ನೇಟೆಡ್ ಪಾನೀಯಗಳು, ಮಸಾಲೆ ಭರಿತ ಆಹಾರಗಳು ಮತ್ತು ಕೊಬ್ಬಿನ ಅಂಶ ಹೆಚ್ಚಾಗಿರುವ ಆಹಾರ(food) ಪದಾರ್ಥಗಳಿಂದ ದೂರ ಇರಿ.

ಇವುಗಳನ್ನು ಹೆಚ್ಚು ಉಪಯೋಗಿಸಿ.:-

ಕೀವಿ, ದಾಳಿಂಬೆ,ಡ್ರಾಗನ್ ಫ್ರೂಟ್,ಬಾಳೆ ಹಣ್ಣು,ಆರೆಂಜ್,ಮೂಸಂಬಿ ,ಪಪ್ಪಾಯಿ ಗಳ ಜೊತೆ ಎಳನೀರು ಸೇವಿಸಿ.
ನೆನಸಿದ ಶೇಂಗಾ , ಟೊಮೆಟೊ, ಬ್ರೊಕೊಲಿ, ಹೂಕೋಸು ಮುಂತಾದ ತರಕಾರಿಗಳನ್ನು ಸೇವಿಸಿ.

ಇವುಗಳ ಬಗ್ಗೆ ಕಾಳಜಿ ಇರಲಿ:-

ಮನೆಯ ಸುತ್ತ ಹೆಚ್ಚು ನೀರು ಸಂಗ್ರಹವಾಗದ ಹಾಗೆ ನೋಡಿಕೊಳ್ಳಿ, ಸೊಳ್ಳೆಗಳ ರಕ್ಷಣೆಗೆ ಅವುಗಳಿಗೆ ಸಂಬಂಧಿಸಿದ ವಸ್ತುಗಳನ್ನು ಬಳಸಿ, ಉದಾಹರಣೆಗೆ ,ಸೊಳ್ಳೆ ಕಡಿಯದಂತೆ ಲಿನ್ಸಿಡಾಯಿಲ್, ಬೇವಿನ ಎಣ್ಣೆ ಬಳಕೆ, ಮಸ್ಕಿಟೋ ಬಾಮ್ ಗಳನ್ನು ಬಳಸಿ. ನಿಮ್ಮ ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!