said that there will be a cabinet reshuffle in the state government after the Lok Sabha elections and there will be many changes

ಇಬ್ಬರು ಹಿರಿಯ ನಾಯಕರಿಗೆ ಸಚಿವ ಸ್ಥಾನ| ಕಾಂಗ್ರೆಸ್ ಮೂಲ ಏನು ಹೇಳುತ್ತೆ?

93

Bangalore news:- ರಾಜ್ಯ ಸರ್ಕಾರದಲ್ಲಿ ( Karnataka Government) ಈ ಬಾರಿಯ ಅಧಿವೇಶನದ ವೇಳೆ ರಾಜ್ಯ ಸಂಪುಟಕ್ಕೆ ಹೊಸ ಸಚಿವರು ಸೇರ್ಪಡೆಯಾಗುವುದು ಬಹುತೇಕ ಕಚಿತವಾಗಿದೆ. ಇದರ ಜೊತೆಗೆ ಹಲವರ ತಲೆದಂಡ ಸಹ ಆಗಲಿದೆ. ಹೀಗೆಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಮಾಹಿತಿ ನೀಡಿದ್ದಾರೆ.

ಕನ್ನಡವಾಣಿ ಜೊತೆ ಮಾತನಾಡಿದ ಅವರು ಲೋಕಸಭಾ ಚನುನಾವಣೆ ನಂತರ ರಾಜ್ಯ ಸರ್ಕಾರದಲ್ಲಿ ಸಂಪುಟ ಪುನರ್ಚನೆಯಾಗಲಿದೆ ಎಂದಿರುವ ಅವರು ಹಲವು ಬದಲಾವಣೆ ಆಗಲಿದೆ.
ಒಂದು ವ್ಯಕ್ತಿಗೆ ಒಂದು ಹುದ್ದೆ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷರ ರಾಜೀನಾಮೆ ಕುರಿತು ಚರ್ಚೆ ನಡೆಯುತ್ತಿದೆ. ಇನ್ನು ಒಂದು ಸಚಿವ ಸ್ಥಾನ ಕೂಡ ಕಾಲಿ ಇದೆ. ಇದಲ್ಲದೇ ಕೆಲವು ಸಚಿವರು ಕೆಲವು ಸ್ಕ್ಯಾಮ್ ನಲ್ಲಿ ಇದ್ದಾರೆ, ಹೀಗಾಗಿ ಬದಲಾವಣೆ ಮಾಡುವ ಬಗ್ಗೆ ಚರ್ಚೆಗಳಿವೆ.

ಇದನ್ನೂ ಓದಿ:-ಯುವತಿಯಿಂದ ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್.ಪೇಟೆ ವಿರುದ್ದ ದೂರು

ಇನ್ನು ದಿನೇಶ್ ಗುಂಡುರಾವ್ ( state Minister Dinesh Gundu Rao) ರವರ ಕ್ಷೇತ್ರದಲ್ಲಿ 20 ಸಾವಿರ ಲೀಡ್ ಬಿಜೆಪಿ ಇತ್ತು, ಗಾಂಧಿ ನಗರದಲ್ಲಿ ಬಿಜೆಪಿ ಲೀಡ್ ಬಂದಿದೆ,ಇನ್ನು ಉಸ್ತುವಾರಿ ಇರುವ ಮಂಗಳೂರಿನಲ್ಲಿ ಸೋತಿದ್ದೇವೆ ಈ ಕಾರಣ ದಿನೇಶ್ ಗುಂಡುರಾವ್ ಅವರ ಬಗ್ಗೆ ಏನೂ ಪ್ರಯೋಜನವಿಲ್ಲ ಎಂದು ಹೇಳಿ ಬ್ರಾಹ್ಮಣ ಕೋಟಾದಡಿ ದಿನೇಶ್ ಗುಂಡುರಾವ್ ಅವರ ಸ್ಥಾನಕ್ಕೆ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ರವರನ್ನು ತರುವ ಲೆಕ್ಕಾಚಾರವಿದೆ ಎಂದಿದ್ದಾರೆ.

ಇನ್ನು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ಮುಂದುವರೆಯಲಿದೆ. ಮೀನುಗಾರ ಬೆಸ್ತ ಜನಾಂಗದ ನಾಯಕರು ಯಾರೂ ಇಲ್ಲದ ಕಾರಣ ಅವರನ್ನು ಮುಂದುವರೆಸಲಾಗುತ್ತದೆ. ಇನ್ನು ಜಿಲ್ಲಾ ಉಸ್ತುವಾರಿ ಯನ್ನು ಬದಲಾವಣೆ ಮಾಡಬೇಕಾ ಬೇಡವಾ ಎಂಬ ಚರ್ಚೆ ಇದೆ. ಆರ್. ವಿ ದೇಶಪಾಂಡೆ ಸಚಿವರಾದರೇ ಮಂಗಳೂರು ಅಥವಾ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿಗಳಾಗುತ್ತಾರೆ. ಈ ಬಗ್ಗೆ ಚರ್ಚೆಗಳಿವೆ. ಉಸ್ತುವಾರಿ ಸ್ಥಾನ ಆರ್.ವಿ ದೇಶಪಾಂಡೆ ರವರು ಯಾವುದನ್ನು ಕೇಳುತ್ತಾರೆ ಎಂಬುದರ ಮೇಲಿದೆ ಎಂದು ಹಿರಿಯ ನಾಯಕರು ಹೇಳಿದ್ದಾರೆ.

ಇನ್ನು ರಾಜ್ಯ ದಲ್ಲಿ ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಬದಲಾಗುತ್ತಾರೆ . ಡಿ.ಕೆ ಶಿವಕುಮಾರ್ ಅಥವಾ ಆ ಸ್ಥಾನಕ್ಕೆ ಯೋಗ್ಯವಾದ ವ್ಯಕ್ತಿಗಳು ಅಧಿಕಾರಕ್ಕೆ ಬರಲಿದ್ದಾರೆ ಎಂದು ಆ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!