BREAKING NEWS
Search

ಕರ್ನಾಟಕದಿಂದ ನಿರ್ಮಲಾ,ಜಯಶಂಕರ್ ಲೋಕಸಭೆಗೆ ಸ್ಪರ್ಧೆ! ಕರಾವಳಿಯತ್ತ ಕೇಂದ್ರ ನಾಯಕರ ಚಿತ್ತ.

82

ನವದೆಹಲಿ January12 : ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಇದರ ಬೆನ್ನಲ್ಲೇ ರಾಜ್ಯ ಬಿಜೆಪಿ ಸಹ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆ ನಡೆಸಿದೆ. ಈ ಬಾರಿ ಹೆಚ್ಚಿನ ಸ್ಥಾನ ಗಳಿಸಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೇಂದ್ರ ನಾಯಕರನ್ನು ಕರ್ನಾಟಕದಿಂದ ಲೋಕಸಭೆ ಚುನಾವಣೆ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.

ಬಿಜೆಪಿ ಮೂಲಗಳ ಮಾಹಿತಿ ಪ್ರಕಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ ಸಚಿವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕೆಂದು ಬಿಜೆಪಿ ಬಯಸಿದೆ. ಅದರಂತೆ ನಿರ್ಮಲಾ ಸೀತಾರಾಮನ್ (Nirmala sitaraman) ಜೈಶಂಕರ್ (central minister Jayashankar )ರಂಥವರಿಗೆ ಸೂಕ್ತ ಸೀಟುಗಳನ್ನು ಹುಡುಕಲಾಗುತ್ತಿದೆ. ನಿರ್ಮಲಾ ಅವರು ಕರಾವಳಿ ಕರ್ನಾಟಕ ಮತ್ತು ಜೈಶಂಕರ್ ಬೆಂಗಳೂರು ದಕ್ಷಿಣದಿಂದ ಪ್ರತಿನಿಧಿಸುವ ಚಿಂತನೆಗಳು ನಡೆಯುತ್ತಿವೆ.

ಮೂಲಗಳ ಪ್ರಕಾರ, ಪ್ರಸ್ತುತ ಕೇಸರಿ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡ ಅಥವಾ ಉತ್ತರ ಕನ್ನಡ ಕ್ಷೇತ್ರದಿಂದ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಜೊತೆಗೆ ಜೈಶಂಕರ್‌ಗೆ ಹಲವು ಆಯ್ಕೆಗಳಿವೆ.

ಹಿಂದುತ್ವದ ಫೈರ್‌ಬ್ರಾಂಡ್ ಅನಂತಕುಮಾರ್ ಹೆಗಡೆ ಪ್ರಸ್ತುತ ಸಂಸದರಾಗಿರುವ ಉತ್ತರ ಕನ್ನಡ ಬಿಜೆಪಿಯ ಭದ್ರಕೋಟೆಯಾಗಿದ್ದು, ಇಲ್ಲಿ ನಿರ್ಮಲಾ ಸೀತಾರಾಮ್ ಅಥವಾ ಜೈಶಂಕರ್ ಸ್ಪರ್ದೆಗೆ ಇಳಿಸುವ ಚಿಂತನೆ ನಡೆಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಯಾರನ್ನೇ ನಿಲ್ಲಿಸಿದ್ರೂ ಗೆಲ್ಲುವ ಅವಕಾಶ ಇದೆ.ಆದ್ರೆ ಇದೀಗ ಇಬ್ಬರು ಮಾಜಿ ಸಚಿವರುಗ ಕಿತ್ತಾಟ ಬಿಜೆಪಿ ಭದ್ರ ಕೋಟೆ ಒಡೆದುಹೋಗುವ ಆತಂಕವಿದೆ. ಸಂಸದ ಹಾಗೂ ಕೇಂದ್ರ ಮಾಜಿ ಸಚಿವ ಅನಂತಕುಮಾರ್ ಹೆಗಡೆ ಹಾಗೂ ರಾಜ್ಯ ವಿಧಾನಸಭಾ ಮಾಜಿ ಸಚಿವ ,ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಇಬ್ಬರೂ ಲೋಕಸಭಾ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇಬ್ಬರೂ ಒಂದೇ ಪಕ್ಷದಲ್ಲಿ ಇದ್ದರೂ ವಿರೋಧಿಗಳಾಗಿದ್ದಾರೆ.ಹೀಗಾಗಿ ಯಾರಿಗೆ ಟಿಕೆಟ್ ನೀಡಿದ್ರೂ ಕಾಲೆಳೆತ ಗ್ಯಾರಂಟಿ ಎನ್ನುವ ಸನ್ನಿವೇಶವಿದೆ.ಇದರಿಂದ ಕಾಂಗ್ರೆಸ್ ಗೆ ಹೆಚ್ಚು ಲಾಭ ಆಗಲಿದೆ. ಹೀಗಾಗಿ ಕೇಂದ್ರ ಬಿಜೆಪಿ ನಾಯಕರು ಗೆಲ್ಲುವ ಕ್ಷೇತ್ರ ವನ್ನು ಹಾಳುಮಾಡಿಕೊಳ್ಳಲು ಇಷ್ಟವಿಲ್ಲದೆ ಈ ಹೊಸ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎನ್ನುತ್ತದೆ ದೆಹಲಿ ಮೂಲಗಳು.

ಇದನ್ನೂ ಓದಿ:-ಅಯೋಧ್ಯೆ ರಾಮಮಂದಿರ ವಿಗ್ರಹಕೆತ್ತನೆ ಹಿಂದೆ ಕರಾವಳಿ, ಮಲೆನಾಡಿಗರು!

ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರಗಳು ಜೈಶಂಕರ್‌ಗೆ ಸುರಕ್ಷಿತವಾಗಿರುತ್ತವೆ ಎಂದು ಬಿಜೆಪಿ ಭಾವಿಸಿದೆ. ಹೀಗಾಗಿ ಜೈಶಂಕರ್ ಅವರು ಬೆಂಗಳೂರಿಗೆ ಆಗಾಗ್ಗೆ ಬರುತ್ತಿದ್ದಾರೆ. ಈ ನಗರದೊಂದಿಗೆ ಅವರು ದೀರ್ಘ ವೈಯಕ್ತಿಕ ಒಡನಾಟ ಹೊಂದಿದ್ದಾರೆಂದು ಹೇಳಲಾಗುತ್ತಿದೆ.

ಅವರು ಇಲ್ಲಿನ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಬಿಜೆಪಿಯ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಜೈಶಂಕರ್ ಬೆಂಗಳೂರಿಗೆ ಹಲವು ಬಾರಿ ಭೇಟಿ ನೀಡಿದ್ದರು. ಅವರು ಶಿಕ್ಷಣ ಸಂಸ್ಥೆಗಳು, ಕಬ್ಬನ್ ಪಾರ್ಕ್‌ಗಳಲ್ಲಿ ಕಾರ್ಯಕ್ರಮಗಳನ್ನು ಮಾಡಿದ್ದರು ಮತ್ತು ಪ್ರಸಿದ್ಧ ವಿವಿ ಪುರಂ ಫುಡ್ ಸ್ಟ್ರೀಟ್‌ನಲ್ಲಿಯೂ ತಿನ್ನಲು ಅವರು ಹೋಗಿರುವುದಿದೆ. ಪಿಇಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಅವರು ಕಳೆದ ವಾರ ಸಹ ಆಗಮಿಸಿದ್ದರು.

ಇದನ್ನೂ ಓದಿ:- Loksabha election:ಪಕ್ಷ ಕಟ್ಟುವಲ್ಲಿ ಕಾಲಿಯಾದ ಸಿಮೆಂಟು ಮರಳು! ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧವೇ ಮೂಡಿದ ಅಸಮಧಾನ?

ಬೆಂಗಳೂರು ದಕ್ಷಿಣಕ್ಕೆ ಕರ್ನಾಟಕ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಹೆಸರು ಕೇಳಿಬರುತ್ತಿದೆ ಎಂದು ಹೇಳಲಾಗುತ್ತಿದೆ. ತೇಜಸ್ವಿನಿ ದಿವಂಗತ ಮಾಜಿ ಕೇಂದ್ರ ಸಚಿವ ಎಚ್‌.ಎನ್ ಅನಂತಕುಮಾರ್ ಅವರು ಪತ್ನಿ, ಅನಂತಕುಮಾರ್ 1996 ರಿಂದ ಸತತ ಆರು ಅವಧಿಗೆ ಬೆಂಗಳೂರು ದಕ್ಷಿಣವನ್ನು ಪ್ರತಿನಿಧಿಸಿದ್ದರು.

2018 ರಲ್ಲಿ ಅವರ ಅಕಾಲಿಕ ಮರಣದ ನಂತರ, ತೇಜಸ್ವಿನಿ ಅವರು 2019 ರ ಲೋಕಸಭಾ ಅಭ್ಯರ್ಥಿಯಾಗಿ ಉತ್ತರಾಧಿಕಾರಿಯಾಗುತ್ತಾರೆ ಎಂದು ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿಯು ರಾಜಕೀಯವಾಗಿ ಹಸಿರು ನಿಶಾನೆ ತೋರಿದ್ದ ಸೂರ್ಯ ಅವರನ್ನು ಕಣಕ್ಕಿಳಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಆದ್ರೆ ಇದೀಗ ಸೂರ್ಯರವರಿಗೆ ಟಿಕೆಟ್ ಇಲ್ಲಿಯೇ ನೀಡಿದರೇ ಕೇಂದ್ರದ ಇಬ್ವರು ನಾಯಕರು ಕರಾವಳಿ ಕರ್ನಾಟಕದಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತಿದ್ದು ಮುಂದಿನ ದಿನದಲ್ಲಿ ಪಕ್ಷದ ವರಿಷ್ಠರು ಏನು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದರಮೇಲೆ ಬದಲಾವಣೆ ನಿಂತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!