ಲೋಕಸಭಾ ಚುನಾವಣೆ: ಉತ್ತರ ಕನ್ನಡದಲ್ಲಿ ಚಕ್ರವರ್ತಿ ಸೂಲಿಬೇಲೆ, ಹರಿಪ್ರಕಾಶ ಕೋಣೆಮನೆ ಹೆಸರು!

130

ಕಾರವಾರ/uttarakannada ,ಫೆಬ್ರವರಿ07:-
ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರ ( Uttrakhand Lok Sabha constituency) ಈಭಾರಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತಿದ್ದು ,ಬಿಜೆಪಿ ಪಕ್ಷಕ್ಕೆ ಸುಲಭ ಜಯ ಗಳಿಸಿಕೊಡುವ ಈ ಕ್ಷೇತ್ರದಲ್ಲಿ ಇದೀಗ ಅನೇಕ ಹೆಸರುಗಳು ಮನ್ನೆಲೆಗೆ ಬರುತ್ತಿದೆ.

ಬಿಜೆಪಿ ಹೈಕಮಾಂಡ್ ಈಗಾಗಲೇ ಕರ್ನಾಟಕದಲ್ಲಿರುವ ತನ್ನ ಹಾಲಿ ಸಂಸದರಲ್ಲಿ ಕೆಲವರಿಗೆ ಟಿಕೆಟ್ ನೀಡದೇ ಹೊಸ ಮುಖಗಳಿಗೆ ಟಿಕೆಟ್‌ ನೀಡುವ ಲೆಕ್ಕಾಚಾರವನ್ನ ಹಾಕಿಕೊಂಡಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ.

ಹೀಗಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಈ ಬಾರೀ ಹಾಲಿ ಸಂಸದರಾದ ಅನಂತ್‌ ಕುಮಾರ್‌ ಹೆಗಡೆ ಅವರಿಗೆ ಟಿಕೆಟ್‌ ಸಿಗುವುದು ಅನುಮಾನ ಎಂಬ ಸುದ್ದಿ ಕ್ಷೇತ್ರದಲ್ಲಿದೆ.

ಇಷ್ಟು ದಿನಗಳ ಕಾಲ ಅನಂತ್‌ ಕುಮಾರ್‌ ಹೆಗಡೆ (ananthkumar hegde) ಅವರ ಅನಾರೋಗ್ಯ ಕಾರಣದಿಂದ ರಾಜಕೀಯ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು.ಆದ್ರೆ ಇದೀಗ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಫುಲ್‌ ಆಕ್ಟಿವ್‌ ಆಗಿದ್ದಾರೆ.

ಬಿಜೆಪಿ ಹೈಕಮಾಂಡ್‌ ನಾಯಕರಿಂದ ಅಂತರವನ್ನ ಕಾಯ್ದುಕೊಂಡಿರುವ ಅನಂತ್‌ ಕುಮಾರ್ ಹೆಗಡೆ ಅವರಿಗೆ ಟಿಕೆಟ್‌ ಸಿಗುವುದು ಡೌಟ್‌ ಎನ್ನಲಾಗಿದ್ದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಇದೀಗ ಇಬ್ಬರು ನಾಯಕರ ಹೆಸರು ಹರಿದಾಡುತ್ತಿದೆ.

ಇದನ್ನೂಓದಿ:-ಶಿರಸಿ ಸೋಮೇಶ್ವರ ದೇವಸ್ಥಾನದಲ್ಲಿ ಶಿವಲಿಂಗ ವಿರೂಪ ಗೊಳಿಸಿದ ಕಿಡಿಗೇಡಿಗಳು

ಮೊದಲನೆಯದಾಗಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯಾಗಿ ಚಕ್ರವರ್ತಿ ಸೂಲಿಬೆಲೆ ಅವರ ಹೆಸರು ಕೇಳಿ ಬರುತ್ತಿದೆ. ಈ ಹಿಂದೆ ಸಹ ಕೇಳಿಬಂದಿದ್ದರೂ ಈ ಕುರಿತು ಮಾಧ್ಯಮ ಹೇಳಿಕೆ ನೀಡಿದ್ದ ಚಕ್ರವರ್ತಿ ಸೂಲಿಬೆಲೆ ಚುನಾವಣೆ ಸ್ಪರ್ಧೆ ನಿರಾಕರಿಸಿದ್ದರು.

ಈ ಹಿಂದೆ ಬಿಜೆಪಿ ಗೆಲುವಿಗಾಗಿ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ರಚಿಸಲಾದ ನಮೋ ಬ್ರಿಗೇಡ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರದಲ್ಲಿ ಭಾಗವಹಿಸಿದ್ದರು, ಇತ್ತೀಚೆಗಷ್ಟೇ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿ ಸೂಲಿಬೆಲೆ ಸುದ್ದಿಯಾಗಿದ್ದರು. ಸದಾ ಹಿಂದುತ್ವದ ಕಟ್ಟಾಳಾಗಿರುವ ಸೂಲಿಬೆಲೆ ಮೂಲತಹಾ ಉತ್ತರ ಕನ್ನಡ ಜಿಲ್ಲೆಯವರು,ಇದಲ್ಲದೇ ಈ ಕ್ಷೇತ್ರದಲ್ಲಿ ಸಾಮಾಜಿಕ ಕೆಲಸದ ಮೂಲಕ ಸಕ್ರಿಯರಾಗಿದ್ದು ,ಇವರ ತಂಡ ಸಹ ಈ ಭಾಗದಲ್ಲಿ ಗಟ್ಟಿಯಾಗಿದೆ. ಹೀಗಾಗಿ ಇವರ ಹೆಸರು ಸಹ ಕೇಳಿಬರುತ್ತಿದೆ‌

ಇದನ್ನೂ ಓದಿ:-ಕರಾವಳಿಯಲ್ಲಿ ಕುತೂಹಲ ಮೂಡಿಸಿದ ಕಮಲ ಪಾಳೆಯದ ನಡೆ-ಲೋಕಸಭೆ ಅಖಾಡಕ್ಕೆಪ ಬ್ರಿಜೇಶ್ ಚೌಟ್, ಮಹೇಶ್ ವಿಕ್ರಮ್ ಹೆಗ್ಡೆ!

ಇನ್ನೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ರಾಜ್ಯ ಭಾರತೀಯ ಜನತಾ ಪಕ್ಷದ ವಕ್ತಾರರಾಗಿ ವಿಸ್ತಾರ ಮೀಡಿಯಾದ ಮುಖ್ಯಸ್ಥ ಹಾಗೂ ಪತ್ರಕರ್ತರಾದ ಹರಿ ಪ್ರಕಾಶ ಕೋಣೆಮನೆಯವರ (hariprakash konemane) ಹೆಸರು ಸಹ ಕೇಳಿ ಬರುತ್ತಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಗುಂಪು ರಚಿಸಿಕೊಂಡಿರುವ ಇವರು ಈ ಹಿಂದೆ ಯಲ್ಲಾಪುರ ಕ್ಷೇತ್ರದಿಂದ ವಿಧಾನಸಭೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಹ ಆಗಿದ್ದರು. ಇದಲ್ಲದೇ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ತಮ್ಮದೇ ಆದ ಬೆಂಬಲಿಗರನ್ನು ಹೊಂದಿದ್ದಾರೆ. ಇನ್ನೂ ಆರ್‌ ಎಸ್‌ ಎಸ್‌ ನಾಯಕರ ಜೊತೆಗೆ ಉತ್ತಮ ಸಂಬಂಧವನ್ನ ಹೊಂದಿರುವ ಹರಿಪ್ರಕಾಶ್‌ ಕೋಣೆಮನೆ ಅವರು ಸಹ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ .

ಇದನ್ನೂ ಓದಿ:-CM ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ನ್ಯಾಯಾಲಯದಿಂದ ದಂಡ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಹೈಕೋರ್ಟ್ ಸೂಚನೆ?

ಇನ್ನು ಕಳೆದ ಮೂರು ತಿಂಗಳಿಂದ ಜಿಲ್ಲೆಯಲ್ಲಿ ಸಕ್ರಿಯರಾಗಿರು ಕೋಣೇಮನೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇದರ ಜೊತೆ ಜಿಲ್ಲೆ,ರಾಜ್ಯ,ಕೇಂದ್ರ ನಾಯಕರ ಗಮನ ಸೆಳೆಯುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಅವರ ಹೆಸರು ಚಾಲ್ತಿಗೆ ಬರುವ ಜೊತೆ ಪಕ್ಷದಲ್ಲೂ ಸದ್ದು ಮಾಡುತ್ತಿದೆ.

ಆದರೇ ಅನಂತಕುಮಾರ್ ಹೆಗಡೆ ಬದಲು ಬೇರೆಯವರಿಗೆ ಈ ಕ್ಷೇತ್ರ ದಲ್ಲಿ ಅಷ್ಟು ಸುಲಭದ ಜಯವಿಲ್ಲ,ಹೀಗಾಗಿ ಪೆ.10 ರ ನಂತರ ಈ ಕ್ಷೇತ್ರದಲ್ಲಿ ಯಾರಿಗೆ ಬಿಜೆಪಿ ಟಿಕೆಟ್ ವಲಿಯಲಿದೆ ಎಂಬುದು ಅಧಿಕೃತವಾಗಿ ಹೊರಬರಲಿದೆ.

/news/karnataka/ district /chakravarthy sulibele and hariprakash konemane considered for uttara kannada lok sabha seat
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!