Uttra kannda Dengue death

ಉತ್ತರ ಕನ್ನಡ| ಮೂರು ದಿನದಲ್ಲಿ ಡೆಂಗ್ಯೂ ಗೆ ಎರಡು ಸಾವು

67


ಕಾರವಾರ :- ರಾಜ್ಯಾಧ್ಯಾಂತ ಡೆಂಗ್ಯೂ ಮಹಾಮಾರಿ ಜನರನ್ನು ಬಿಟ್ಟು ಬಿಡದೇ ಕಾಡುತ್ತಿದೆ. ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯುಗೆ (Dengue)ಜಿಲ್ಲೆಯಲ್ಲಿ ಎರಡನೇ ಸಾವಾಗಿದೆ.

ಮೊನ್ನೆ ಅಂಕೋಲದ (ankola) ಬೇಲಿಕೇರಿಯಲ್ಲಿ ಯುವಕನೋರ್ವ ಡೆಂಗ್ಯೂ ಬಂದ ನಂತರ ಸಾವು ಕಂಡಿದ್ದ. ಇದೀಗ 12ವರ್ಷದ ವಿದ್ಯಾರ್ಥಿನಿ (student)ಶಂಕಿತ ಡೆಂಗ್ಯೂ ಗೆ ಬಲಿಯಾಗಿದ್ದಾಳೆ.

ಶಿರಸಿಯಲ್ಲಿ (SIRSI) ಐದನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಸುಹಾನಾ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು ,ಕಸ್ತೂರಬಾ ನಗರದಲ್ಲಿ ಖಾಸಗಿ ವೈದ್ಯರಿಂದ ಡೆಂಗ್ಯೂ ಗೆ ಚಿಕಿತ್ಸೆಪಡೆಯುತಿದ್ದಳು.

ಆದರೂ ಜ್ವರ ಕಡಿಮೆಯಾಗದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಹಾಲಕ್ಷ್ಮಿ ಆಸ್ಪತ್ರಗೆ ಕರೆತಂದ ಸಂದರ್ಭದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಜಿಲ್ಲೆಯಲ್ಲಿ ಇಂದಿಗೆ ಎಷ್ಟಿದೆ ಡೆಂಗ್ಯೂ?
ಒಟ್ಟು ಸಕ್ರಿಯ ಪ್ರಕರಣ- 122
ಶಂಕಿತ ಪ್ರಕರಣ-1692
ರಕ್ತ ಪರೀಕ್ಷೆ -1489
ಡೆಂಗ್ಯೂ ಶಂಕಿತ ಸಾವು- 2
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!