Complaint in Karwar Nagar police station against Chaitra Kundapur

ಅವಾಚ್ಯ ಶಬ್ದದ POST ಮಾಡಿ ಪತ್ರಕರ್ತರ ನಂಬರ್ ಗೆ ಶೇರ್ ಮಾಡಿದ ಚೈತ್ರ ಕುಂದಾಪುರ್ ವಿರುದ್ಧ ಕಾರವಾರದಲ್ಲಿ ದೂರು.

98

KARWAR NEWS :- ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಕೊಡಿಸುವ ಆಮೇಶ ತೋರಿಸಿ ಕೋಟಿಗಟ್ಟಲೇ ಹಣ ಪಡೆದ ಆರೋಪದಡಿ ಜೈಲು ಕಂಬಿ ಎಣಿಸಿ ಬೇಲ್ ಮೇಲೆ ಬಂದಿದ್ದ ಚೈತ್ರ ಕುಂದಾಪುರ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ ಟಿವಿ ಮಾಧ್ಯಮದ ಪತ್ರಕರ್ತರೊಬ್ಬರು ದೂರು ನೀಡಿದ್ದಾರೆ.

ಚೈತ್ರ ಕುಂದಾಪುರ ಪತ್ರಕರ್ತರ ದಿನಾಚರಣೆ ಹಿನ್ನಲೆಯಲ್ಲಿ ಪತ್ರಕರ್ತರಿಗೆ ಶುಭಾಶಯ ಎನ್ನುವ ಫೋಟೋ ಬಳಸಿ ಆಕೆ ವಿರುದ್ಧ ಮಾಧ್ಯಮದಲ್ಲಿ ಬಂದ ಸುದ್ದಿ ಯನ್ನು ಉಲ್ಲೇಖಿಸಿ ಪತ್ರಕರ್ತರು ಹಾಗೂ ಮಾಧ್ಯಮಗಳ ಬಗ್ಗೆ ಅವಾಚ್ಯ ಶಬ್ದ ಬಳಸಿ ಕಿಡಿ ಕಾರಿದ್ದಳು.

ಫೇಸ್ ಬುಕ್ ಗೆ ಮಾತ್ರ ಸೀಮಿತವಾಗದೇ ಆಕೆ ಬರೆದ ಪೋಸ್ಟ್ ನನ್ನು ತನಗೆ ಪರಿಚಯವಿರುವ ಪತ್ರಕರ್ತರಿಗೆ ತನ್ನ ವಾಟ್ಸ್ ಅಪ್ ನಂಬರ್ ನಿಂದ ಶೇರ್ ಮಾಡಿದ್ದಾಳೆ.

ಹೀಗೆ ಕಾರವಾರದ ಪತ್ರಕರ್ತರಿಗೂ ಶೇರ್ ಮಾಡಿದ್ದು ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ರಕರ್ತರಿಗೆ ಸವಾಲು ಹಾಕುವ ಜೊತೆ ಕೆಟ್ಟ ಶಬ್ದ ಬಳಸಿ ವಾಟ್ಸ್ ಅಪ್ ನಲ್ಲಿ ಮೆಸೇಜ್ ಮಾಡಿದ್ದು ಈ ಕುರಿತು ಟಿವಿ ಮಾಧ್ಯಮದ ಪತ್ರಕರ್ತರೊಬ್ಬರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸದ್ಯ ದೂರನ್ನು ಪಡೆದುಕೊಂಡಿರುವ ಕಾರವಾರ ನಗರ ಠಾಣೆ ಪೊಲೀಸರು (police) ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಾರ ಎಂಬುದನ್ನು ಕಾದು ನೋಡಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!