BREAKING NEWS
Search

Karwar :ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ ನಿಂದ ಕ್ಷಿಪ್ರ ಕಾರ್ಯಾಚರಣೆ- ಗುಂಡಿನ ದಾಳಿ

83

ಕಾರವಾರ,ಪೆಬ್ರವರಿ 03:- ಅರಬ್ಬಿ ಸಮುದ್ರದಲ್ಲಿ (Arabian Sea )ಬುಲೆಟ್ ಗಳ ಸದ್ದು ,ವಾಟರ್ ಫೈರ್ ,ಕ್ಷಿಪ್ರ ಕಾರ್ಯಾಚರಣೆಗಿಳಿದ ಕೋಷ್ಟ್ ಗಾರ್ಡ ಸಿಬ್ಬಂದಿ .ಅರೇ ಇದೇನಿದು ಅರಬ್ಬಿ ಸಮುದ್ರ ದಲ್ಲಿ ಶತ್ರುಗಳು ದಾಳಿ ನೆಡೆಸಿದ್ರಾ. ಹೀಗೆ ಏಕಾ ಏಕಿ ಕಾರ್ಯಾಚರಣೆಯಾದ್ರೂ ಏಕೆ ಅಂತೀರಾ ಹಾಗಿದ್ರೆ ಈ ಸುದ್ದಿ ಓದಿ.

ಒಂದೆಡೆ ಸಮುದ್ರದ ಅಲೆಗಳನ್ನು ಸೀಳಿ ಶತ್ರುಗಳತ್ತ ಮುನ್ನುಗ್ಗುತ್ತಿರುವ ಕೋಷ್ಟ್ ಗಾರ್ಡ ಹಡಗು,ಮತ್ತೊಂದೆಡೆ ಶತ್ರುವನ್ನು ಗುರಿ ಇಟ್ಟು ಗುಂಡಿನ ದಾಳಿ ನೆಡಸುತ್ತಿರುವುದು. ಹೌದು ಈ ಯುದ್ಧ ಸನ್ನಿವೇಶದ ದೃಶ್ಯಗಳು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಭಾಗದ ಅರಬ್ಬಿ ಸಮುದ್ರದಲ್ಲಿ ನಡೆದ ಕಾರ್ಯಾಚರಣೆ.ಭಾರತೀಯ ತಟರಕ್ಷಣಾಪಡೆ ತನ್ನ ಸಾಮರ್ಥ್ಯವನ್ನು ಅಣುಕು ಕಾರ್ಯಾಚರಣೆ ಮೂಲಕ ತಾವೆಷ್ಟು ಸಮರ್ಥರು ಎಂಬುದನ್ನು ಪ್ರಾತಕ್ಷಿಕೆ ಮೂಲಕ ತೋರಿಸಿಕೊಟ್ಟರು.

ಇದನ್ನೂ ಓದಿ:-ನಾನು ಸತ್ತಿಲ್ಲ ಬದುಕಿದ್ದೇನೆ ಎಂದ ಪೂನಂಪಾಂಡೆ! ಮೂರ್ಖರಾದ ಮಾಧ್ಯಮ! ಆಕೆ ಹೇಳಿದ್ದೇನು?

ಇದಕ್ಕಾಗಿ ಕಾರವಾರದಲ್ಲಿರುವ(karwar) ಕೋಸ್ಟ್‌ಗಾರ್ಡ್ಸ್ ತಟರಕ್ಷಕ ತಂಡದ ಹಡಗುಗಳಾದ ಐಸಿಜಿಎಸ್ ಕಸ್ತೂರ್ ಬಾ ಗಾಂಧಿ, ಐಸಿಜಿಎಸ್ ಸಾವಿತ್ರಿ ಬಾಯಿ ಪುಲೆ, ಐಸಿಜಿಎಸ್ ಸಿ-448, ಐಸಿಜಿಎಸ್ ವಿಕ್ರಮ್ (ICGS Vikram ship) ಕಾರ್ಯಾಚರಣೆಗಾಗಿ ಜನರನ್ನು ಹೊತ್ತುಕೊಂಡು ಸಮುದ್ರ ಭಾಗದ 16 ನಾಟಿಕನ್ ಮೈಲು ದೂರದಲ್ಲಿ ಸಾಗಿ ತನ್ನ ಕಾರ್ಯ ಕ್ಷಮತೆಯನ್ನು ಪ್ರದರ್ಶಿಸಿತು. ಜೊತೆಗೆ ತಾವು ನಿರ್ವಹಿಸುವ ಕರ್ತವ್ಯದ ಕುರಿತು ನೆರೆದಿದ್ದ ಜನರಿಗೆ ಅರಿವು ಮೂಡಿಸಿದ್ರು.

ಇದನ್ನೂ ಓದಿ:-https://kannadavani.news/bollywood-news-cervical-cancer-poonam-pandey-dies-at-32

ಫೆ.1ಕ್ಕೆ ಇಂಡಿಯನ್ ಕೋಸ್ಟ್ ಗಾರ್ಡ್ ಡೇ ( Indian Coast Guard day )ಆಚರಣೆ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ಸ್ ವತಿಯಿಂದ ಎರಡು ದಿನಗಳ ಕಾಲ ಈ ಅಣುಕು ಕಾರ್ಯಾಚರಣೆ ಆಯೋಜಿಸಲಾಗಿತ್ತು. ಇಂಡಿಯನ್ ಕೋಸ್ಟ್ ಗಾರ್ಡ್ಸ್ ಯಾವ ರೀತಿಯಲ್ಲಿ ಭಾರತದ ಸಮುದ್ರ ಭಾಗದ ಸರಹದ್ದಿನಲ್ಲಿ ಯಾವ ರೀತಿ ಪಹರೆ ಕಾಯುತ್ತೆ, ಸಮುದ್ರದಲ್ಲಿ ಮೀನುಗಾರರು
ಅಪಾಯದಲ್ಲಿದ್ದಾಗ ಯಾವ ರೀತಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತೆ, ಸಮುದ್ರ ಭಾಗದಲ್ಲಿ ಯಾವುದಾದ್ರೂ ಶಿಪ್ ಅಥವಾ ಬೋಟ್‌ಗಳಲ್ಲಿ(boat) ಅಗ್ನಿ ಅವಘಢ ನಡೆದರೆ, ಸಮುದ್ರದ ಲೂಟಿಕೋರರು ದಾಳಿಯನ್ನು ಯಾವ ರೀತಿ ಎದುರಿಸಲಾಗುತ್ತದೆ ಮುಂತಾದವುಗಳ ಬಗ್ಗೆ ಜನರಿಗೆ ಪ್ರಾತಕ್ಷಿಕೆ ಮೂಲಕ
ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಅಣುಕು ಕಾರ್ಯಾಚರಣೆ ನಡೆಸಲಾಗಿತ್ತು.

ಸುಮಾರು ನಾಲ್ಕು ಗಸ್ತು ಶಿಪ್‌ಗಳಲ್ಲಿ ಸುಮಾರು 16 ನಾಟಿಕನ್ ಮೈಲುದೂರದ ಸಮುದ್ರದಲ್ಲಿ ತೆರಳಿದ ನೂರಾರು ಜನರು, ಇಂಡಿಯನ್ ಕೋಸ್ಟ್ ಗಾರ್ಡ್ಸ್‌ಗಳ ಕಾರ್ಯ ವೈಖರಿ ಕಂಡು ಸಂತೋಷ ಪಟ್ಟರು.

ಇದನ್ನೂ ಓದಿ:-Karwar :ಅರಬ್ಬಿ ಸಮುದ್ರದಲ್ಲಿ 27 ಮೀನುಗಾರರ ರಕ್ಷಣೆ

ಕ್ಷಣಕ್ಷಣಕ್ಕೂ ವಿವಿಧೆಡೆ ನಡೆಯುವ ಕಾರ್ಯಾಚರಣೆಯ ಮಾಹಿತಿಯನ್ನು ಕೂಡಾ ಸಿಬ್ಬಂದಿ ಮೂಲಕ ಜನರು ಪಡೆದುಕೊಂಡರು. ಸಾಕಷ್ಟು ಬಾರಿ ಸಮುದ್ರದಾಳದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಣೆ ಮಾಡಿದ್ದಲ್ಲದೇ, ವಿದೇಶಗಳಿಂದ ಬರುವ ಸರಕು ಹಡಗುಗಳ ಮೇಲೆ ಲೂಟಿಕೋರರು ದಾಳಿ ನಡೆಸಿದಾಗಲೂ ಇಂಡಿಯನ್ ಕೋಸ್ಟ್‌ಗಾರ್ಡ್ಸ್ ಕೂಡಲೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ( rescue operation )ನಡೆಸಿತ್ತು. ಇಂದು ನಡೆದ ಅಣುಕು ಕಾರ್ಯಾಚರಣೆಯ ಮೂಲಕ ಇಂಡಿಯನ್ ಕೋಸ್ಟ್ ಗಾರ್ಡ್ಸ್ ನಡೆಸಿದ ಆಪರೇಷನ್ ಅನ್ನು ಕಣ್ಣಾರೆ ಕಂಡ ಜನರಿಗೆ ತಾವೂ ದೇಶ ರಕ್ಷಣೆಯಲ್ಲಿ ತೊಡಗಬೇಕು ಎಂಬ ಹುಮ್ಮಸ್ಸನ್ನು ತಂದಿತ್ತು.

ಒಟ್ಟಿನಲ್ಲಿ ಇಂಡಿಯನ್ ಕೋಸ್ಟ್ ಗಾರ್ಡ್ಸ್ ಸಮುದ್ರದಾಳದಲ್ಲಿ ನಡೆಸಿದ ಅಣುಕು ಕಾರ್ಯಾಚರಣೆ ಜನರಿಗೆ ಅತ್ಯದ್ಭುತ ಅನುಭವ ನೀಡಿ ಪುಳಕಿತಗೊಳಿಸಿದ್ದಲ್ಲದೇ, ದೇಶಸೇವೆಗೆ ತಾವೂ ಸೇರಬೇಕು ಎಂಬ ಹುಮ್ಮಸ್ಸನ್ನು ಹುಟ್ಟಿಸಿದ್ದು ಸುಳ್ಳಲ್ಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!