Uttra Kannada news

ಉತ್ತರ ಕನ್ನಡ ಫಟಾಫಟ್ ಸುದ್ದಿ|ಇಂದು ಎಲ್ಲಿ ಏನಾಯ್ತು? ವಿವರ ನೋಡಿ.

54
GILANI super market karwar KSRTC bus stand near Karwar

ಕುಡಿದ ನಶೆಯಲ್ಲಿ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ.

Karwar news

ಕಾರವಾರ :- ಕುಡಿದ ನಶೆಯಲ್ಲಿ ಸಮುದ್ರದಲ್ಲಿ (sea)ಈಜಲು ಹೋಗಿ ಮುಳುಗುತಿದ್ದ ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆ ಕಾರವಾರದ (karwar) ರವೀಂದ್ರನಾಥ್ ಕಡಲತೀರದಲ್ಲಿ ನಡೆದಿದೆ.

ಉತ್ತರಪ್ರದೇಶದ ಮೂಲದ ಸಿಖಂದರ್ ಹಾಗೂ ಸುಧೀರ್ ಕುಮಾರ ಎಂಬುವವರನ್ನ ರಕ್ಷಣೆ ಮಾಡಲಾಗಿದೆ. ಇಬ್ಬರೂ ಸಿರ್ಬಡ್ ನೌಕಾನೆಲೆಯಲ್ಲಿ ಕಾರ್ಮಿಕರಾಗಿದ್ದರು. ಸಮುದ್ರದಲ್ಲಿ ಮುಳುಗಡೆ ಆಗುತ್ತಿರುವುದನ್ನ ಗಮಸಿದಿ ಲೈಪ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದು, ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರ ರಕ್ಷಣೆ

Honnavara :-ಹೊನ್ನಾವರ ಕಾಸರಕೋಡನಲ್ಲಿರುವ ಇಕೋ ಬೀಚ್‌ನಲ್ಲಿ ಸಮುದ್ರದಲ್ಲಿ ಮುಳುಗಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಸಾಗರ ಮೂಲದ ಮೂವರು ಪ್ರವಾಸಿಗರನ್ನು ಪ್ರವಾಸೋದ್ಯಮ ಇಲಾಖೆಯ ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಸಿದ್ದಾರೆ. ಸಾಗರ ಮೂಲದ ಪ್ರವಾಸಿಗರಾದ ಅಭಿಷೇಕ, ಪ್ರತೀಶ ಹಾಗೂ ಶ್ರೀಕಾಂತ ಎನ್ನುವವರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಲೈಫ್‌ ಗಾರ್ಡ್‌ಗಳಾದ ಶಶಾಂಕ ಅಂಬಿಗ, ಯೋಗಿಶ ಅಂಬಿಗ,ಮಹೇಶ ಹರಿಕಂತ್ರ ರಕ್ಷಸಿದ್ದಾರೆ.

ಅಕ್ರಮ ಜಾನುವಾರು ಸಾಗಾಟ: ಇಬ್ಬರ ಬಂಧನ

Honnavara news:-ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಲಾರಿ ಮತ್ತು 18 ಗೂಳಿಯನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ಹೊನ್ನಾವರ ತಾಲೂಕಿನ ಹಳದಿಪುರದ ಬಡಗಣಿ ಬ್ರಿಡ್ಜ್ ಹತ್ತಿರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ಹಾಸನ ಹೊಳೆನರಸಿಪುರದ ಕಂಟೆನರ್ ಚಾಲಕ ಸಯ್ಯದ್ ರಿಜ್ವಾನ್, ಸಲ್ಮಾನ್ ಝಮ್ರದ್ ಖಾನ್ ಬಂಧಿತರು. ಮಂಡ್ಯ ಜಿಲ್ಲೆ ನಾಗಮಂಗಲದ ಸೋಮಶೇಖರ್ ಎ. ಬಿ ಬೊರೇಗೌಡ, ಭಟ್ಕಳದ ಮಹಮದ್‌ ಸಿಯಾವನ್ ತಪ್ಪಿಸಿಕೊಂಡಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಳ್ಳು ತಂತಿಗೆ ಸಿಲುಕಿದ್ದ ಹಾರು ಬೆಕ್ಕು ರಕ್ಷಣೆ

ಜೋಯಿಡಾ ತಾಲೂಕಿನ ಪಣಸೋಲಿ ಅರಣ್ಯ ವಲಯದ ಪಣಸೋಲಿ ಮಾರುತಿ ದೇವಸ್ಥಾನದ ಹತ್ತಿರ ಖಾಸಗಿ ತೋಟವೊಂದರಲ್ಲಿನ ಮುಳ್ಳು ತಂತಿಗೆ ಸಾವು ಬದುಕಿನಲ್ಲಿ ಹೋರಾಡುತ್ತಿದ್ದ ಹಾರು ಬೆಕ್ಕೊಂದನ್ನು ಅರಣ್ಯಾಧಿಕಾರಿಗಳು ಸರಿಯಾದ ಕಾರ್ಯಾಚರಣೆಯಿಂದ ಬದುಕಿಸಿ ಅರಣ್ಯಕ್ಕೆ ಬಿಟ್ಟ ಘಟನೆ ನಡೆದಿದೆ.

ಮಾನಾಯಿಯ ಮೋಹನ ಮಾವಸ್ಕರ ಎಂಬಾತ ಪಣಸೋಲಿ ಮಾರ್ಗವಾಗಿ ಹೋಗುತ್ತಿದ್ದ ಖಾಸಗಿ ತೋಟಕ್ಕೆ ಅಳವಡಿಸಿದ ಮುಳ್ಳು ತಂತಿಗೆ ಹಾರು ಬೆಕ್ಕೊಂದು ಸಿಲುಕಿದ್ದನ್ನು ಕಂಡು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!