Vishweshwar Hegde Kageri B Y Raghavendra takes oath in parliament 24 june 2024

ಸಂಸತ್ ಮೊದಲ ಅಧಿವೇಶ|ವಿಶಿಷ್ಟರೀತಿಯಲ್ಲಿ ಮೊದಲ ದಿನವೇ ಪ್ರಮಾಣವಚನ ಸ್ವೀಕರಿಸಿದ್ರು ಈ ಸಂಸದರು!

93

NATIONAL NEWS:- 18 ನೇ ಲೋಕಸಭಾ ಅಧಿವೇಶನ ಇಂದಿನಿಂದ ಪ್ರಾರಂಭವಾಗಿದೆ.ನೂತನ ಸಂಸದರು ಇಂದು ಪ್ರಮಾಣವಚನ (OATH) ಸ್ವೀಕರಿಸಿದರು.

ಮೊದಲ ದಿನವಾದ ಇಂದು ಕರ್ನಾಟಕದ 16 ಜನ ಸಂಸದರು ಪ್ರಮಾಣವಚನ ಸ್ವೀಕರಿಸಿದರು. ಉತ್ತರ ಕನ್ನಡ ಜಿಲ್ಲೆಯ ಮೊದಲಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿರವರು ಪ್ರಮಾಣ ವಚನ ಪಡೆದ 209 ನೇ ಸಂಸದರಾಗಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದರೇ ಶಿವಮೊಗ್ಗ ಜಿಲ್ಲೆಯ ಸಂಸದ ಬಿ.ವೈ ರಾಘವೇಂದ್ರ ರವರು 211 ನೇ ಪ್ರಮಾಣವಚನ ಪಡೆದ ಸಂಸದರಾಗಿ ಕನ್ನಡ ಭಾಷೆಯಲ್ಲಿ ಶಿವಮೊಗ್ಗ ಜಿಲ್ಲೆಯ ಮತದಾರರ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.

ಇದನ್ನೂ ಓದಿ:-ಡೆಂಗ್ಯೂ ಗೆ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷೆ ಸಾವು| ಶಿರಸಿಯಲ್ಲೂ ಹೆಚ್ಚಾದ ಡೆಂಗ್ಯೂ!

ಅಧಿವೇಶನ ಆರಂಭಕ್ಕೂ ಮೊದಲು‌ ಬಿಜೆಪಿ ಸಂಸದ ಭತೃಹರಿ ಮೆಹ್ತಾಬ್‌ ಅವರಿಗೆ ಹಂಗಾಮಿ ಸ್ಪೀಕರ್‌ ಆಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು. ಆ ಬಳಿಕ ಅಧಿವೇಶನದಲ್ಲಿ ಲೋಕಸಭೆ ಸದ್ಯಸರು ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ, ಕ್ಯಾಬಿನೆಟ್‌ ಸಚಿವರು, ಸಂಸದರು ಪ್ರತಿಜ್ಞೆ ಸ್ವೀಕರಿಸಿದರು.

ಇದನ್ನೂ ಓದಿ:-NIA ದಾಳಿ| ಶಿರಸಿಯ ಅಬ್ದುಲ್ ಶುಕ್ಕೂರ್ ಮೇಲಿರುವ ಆರೋಪ ಏನು ಗೊತ್ತಾ?
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!