Sirsi news poor quality rice distribute government shop

ಒಳ್ಳೆ ಅಕ್ಕಿ ಕೊಡ್ರೋ! ಶಿರಸಿಯಲ್ಲಿ ಪಡಿತರ ದಾರರಿಗೆ ಹೀಗೂ ಕೊಡ್ತಾರೆ ಆಕ್ಕಿ!

69

SIRSI NEWS :- ಉತ್ತರ ಕನ್ನಡ ಜಿಲ್ಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ( ration shop) ಪಡಿತರ ದಾರರಿಗೆ ನೀಡುವ ಅಕ್ಕಿ ಕಳಪೆಯಾಗಿದೆ ಎಂಬ ದೂರುಗಳು ಇತ್ತೀಚಿನ ದಿನದಲ್ಲಿ ಹೆಚ್ಚಾಗಿದೆ.

ಇದೀಗ ಇದಕ್ಕೆ ಸಾಕ್ಷಿ ಎನ್ನುವಂತೆ ಜಿಲ್ಲೆಯ ಶಿರಸಿ(sirsi) ತಾಲೂಕಿನ ಕಾಳಂಗಿ ಸೇವಾ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ನೀಡುತ್ತಿರುವ ಅಕ್ಕಿ( rice) ಉಪಯೋಗಕ್ಕೆ ಬಾರದಷ್ಟು ಕಳೆಪೆಯಾಗಿದೆ.

ಕಳೆದ ಎರಡು ತಿಂಗಳಿಂದ ಅತೀ ಕಳಪೆ ಮಟ್ಟದ ಅಕ್ಕಿ ವಿತರಣೆಯಾಗುತಿದ್ದು ಇಂದು ಅಕ್ಕಿ ಪಡೆಯಲು ಹೋದ ಪಡಿತರದಾರರಿಗೆ ಶಾಕ್ ಆಗಿದೆ.

ಹೌದು ಇಂದು ಈ ನ್ಯಾಯಬೆಲೆ ಅಂಗಡಿಗೆ ಯಲ್ಲಿ ವಿತರಣೆಯಾದ ಅಕ್ಕಿಯಲ್ಲಿ ಕಸ ,ಸೊಣಬಿದಾರದ ತುಂಡು, ಪೇಪರ್ ಪೀಸ್ ಸೇರಿದಂತೆ ತ್ಯಾಜ್ಯ ವಸ್ತುಗಳು ಸೇರಿದ್ದರೇ ,ಕೊಟ್ಟ ಅಕ್ಕಿ ಮುಗ್ಗಲು ಬಂದು ಹಾಳಾಗಿದೆ. ಅಕ್ಕಿಯನ್ನು ಬಳಸಲು ಸಹ ಯೋಗ್ಯವಾಗಿರದಷ್ಟು ಕಳೆಪಯಾಗಿದ್ದು ಇದನ್ನು ಹೇಗೆ ಬಳಸಬೇಕು ಎಂಬುದು ಪಡಿತರ ದಾರರ ಪ್ರಶ್ನೆ ಯಾಗಿದೆ.

ಇನ್ನು ಈ ಕುರಿತು ರೈತ ಮುಖಂಡ ಮುಖಂಡ ಯುವರಾಜ ಗೌಡ ರವರು ಆಕ್ಷೇಪ ವ್ಯಕ್ತಪಡಿಸಿದ್ದು ,ಆಹಾರ ಇಲಾಖೆಯಿಂದ ದಾಸ್ತಾನು ಸಮರ್ಪಕವಾಗಿ ಮಾಡುತ್ತಿಲ್ಲ, ಹಾಳಾದ ಕೆಟ್ಟ ಮಟ್ಟದ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಇದನ್ನು ಸರಿಪಡಿಸದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಈ ಕಳಪೆ ಮಟ್ಟಸ ಅಕ್ಕಿ ನೋಡಿದ ಪಡಿತರದಾರರು ಅಕ್ಕಿ ಪಡೆಯದೇ ಮನೆಗೆ ತೆರಳಿದ್ದು ಇನ್ನಾದರೂ ಸಂಬಂಧಪಟ್ಟ ಇಲಾಖೆ ಇತ್ತ ಗಮನಿಸಿ ವ್ಯವಸ್ಥೆ ಸರಿಪಡಿಸಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!