A person was arrested by the police for smuggling milk powder of the education department at haliyala

Uttrakannada|ಮಕ್ಕಳಿಗೆ ನೀಡುವ ಹಾಲಿನ ಪೌಡರ್ ಕಳ್ಳಸಾಗಾಟ! 1.50 ಲಕ್ಷ milk ಪೌಡರ್ ವಶಕ್ಕೆ

84
GILANI super market karwar KSRTC bus stand near Karwar

ಕಾರವಾರ:- ಮಕ್ಕಳ ಪೌಷ್ಟಿಕ ಅಹಾರ ಕೊರತೆ ನೀಗಿಸಲು ಶಿಕ್ಷಣ ಇಲಾಖೆಗೆ ಸರ್ಕಾರದಿಂದ ಹಾಲಿನ ಪುಡಿಗಳನ್ನು ವಿತರಿಸಲಾಗುತ್ತದೆ.ಆದ್ರೆ ಈ ಹಾಲಿನ ಪುಡಿಯನ್ನು ಕಳ್ಳ ಸಾಗಾಟ ಮಾಡಿ ಇದೀಗ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕದೀಮರು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.

ಶಿಕ್ಷಣ ಇಲಾಖೆಯ 1,50,000 ಮೌಲ್ಯದ 791.40 ಕೆಜಿ ತೂಕದ ಹಾಲಿನ ಪೌಡರ್ ಪ್ಯಾಕೇಟುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮಹಾರಾಷ್ಟ್ರ ನೊಂದಣಿ ಹೊಂದಿದ ವಾಹನದಲ್ಲಿ ಹಳಿಯಾಳ-ಯಲ್ಲಾಪುರ ಮಾರ್ಗವಾಗಿ ಸಾಗಾಟ ಮಾಡುತ್ತಿರುವಾಗ ಬೆಳಗಾವಿ ಮೂಲದ ಸಂಜಯ್ ಯಶವಂತ್ ಪಾಟೀಲ್ ಎಂಬಾತನನ್ನು ಹಳಿಯಾಳ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಮೂಲಗಳ ಪ್ರಕಾರ ಬೆಳಗಾವಿ ಹಾಗೂ ಮಹಾರಾಷ್ಟ್ರದ ಕಡೆ ಈ ಹಾಲಿನ ಪುಡಿ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿರುವ ಮಾಹಿತಿ ಇದೆ.

ಆದ್ರೆ ಇಷ್ಟೊಂದು ಮಟ್ಟದ ಶಿಕ್ಷಣ ಇಲಾಖೆಗೆ ಸೇರಿದ ಹಾಲಿನ ಪುಡಿ ಹೇಗೆ ದೊರೆಯಿತು? ಅದು ಎಲ್ಲಿಯದ್ದು ಎಂಬುದು ತಿಳಿಯಬೇಕಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಭಾಗದಿಂದ ತೆಗೆದುಕೊಂಡು ಹೋಗುತಿದ್ದರಿಂದ ಇಲ್ಲಿಯದೇ ಎಂಬುದು ಪ್ರಶ್ನೆಯಾಗಿದ್ದು ಈ ಬಗ್ಗೆ ಹೆಚ್ಚಿನ ತನಿಖೆಯಾಗಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!