Uttrakannada News Mansoon flood kumta Honnavara Karwar

ಉತ್ತರ ಕನ್ನಡ ಮಳೆ ಅಬ್ಬರ | ಎಲ್ಲಿ ಏನಾಗಿದೆ ವಿವರ ಇಲ್ಲಿದೆ

58

Mansoon Rain Flood :- ಕರಾವಳಿಯಲ್ಲಿ ಸುರಿದ ರಣ ಮಳೆಗೆ ಕಾರವಾರ ,ಕುಮಟಾ, ಹೊನ್ನಾವರ (Honnavara) ನಡುಗಿ ಹೋಗಿದೆ. ಮಳೆಯ ಅಬ್ಬರಕ್ಕೆ ಜಲಾಶಯ ತುಂಬಿದರೇ ,ಮಳೆಯಿಂದಾಗಿ ನೀರಿನಲ್ಲಿ ಸಿಲುಕಿದ 60ಕ್ಕೂ ಹೆಚ್ಚು ಜನರನ್ನು NDRF ತಂಡ ರಕ್ಷಣೆ ಮಾಡಿದೆ.

ಒಂದೆಡೆ ಮಳೆಯ ಅಬ್ಬರಕ್ಕೆ ಎಲ್ಲಿನೋಡಿದರಲ್ಲಿ ನೀರು.ಮತ್ತೊಂದೆಡೆ ನೀರಿನಲ್ಲಿ ಸಿಲುಕಿದ ಜನರನ್ನ NDRF ತಂಡ ರಕ್ಷಣೆ ಮಾಡುತ್ತಿರುವುದು. ಹೌದು ಇದು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ್ದು. ಹೊನ್ನಾವರ ಭಾಗದಲ್ಲಿ ಶರಾವತಿ ಹಾಗೂ ಗುಂಡಬಾಳ ನದಿಗೆ ಹೆಚ್ಚಿನ ನೀರು ಬಂದ ಕಾರಣ ತಾಲೂಕಿನ ಕಡತೋಕ ಗ್ರಾಮದ ಗುದ್ನಕಟ್ಟು ಗ್ರಾಮ ಜಲಾವೃತವಾಗಿ ಗ್ರಾಮದ 60 ಜನರನ್ನು ಎನ್.ಡಿ.ಆರ್.ಎಫ್ ತಂಡ ರಕ್ಷಣೆ ಮಾಡಿದೆ.

ಇದೇ ಭಾಗದಲ್ಲಿ ಒಟ್ಟು 13 ಮನೆಗಳು ಜಲಾವೃತವಾಗಿ ಹಾನಿಯಾಗಿದೆ. ಇನ್ನು ಕಾರವಾರ ಅಂಕೋಲ ಭಾಗದಲ್ಲಿ ಸಹ ಕಡಲ ಕೊರತಿಂದ ಹಾರವಾಡದ ತರಂಗ ಮೇಟ್ ಕಡಲತೀರ ಭಾಗ ಹಾಗೂ ತಡೆಗೋಡೆ ಕೊಚ್ಚಿಹೋಗಿದೆ.ಇನ್ನು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ್ದರಿಂದ ಕಾಳಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ತಟ್ಟಿಹಳ್ಳಿ,ಸೂಫ ,ಕದ್ರಾ ಸಧರಿದಂತೆ ನಾಲ್ಕು ಆಣೆಕಟ್ಟುಗಳು ತುಂಬಿದ್ದು ಕದ್ರಾ ಜಲಾಶಯದಿಂದ 10,600 ಕ್ಯೂಸೆಕ ನೀರನ್ನು ಇಂದು ಸಹ ಹೊರಬಿಡಲಾಗಿದ್ದು ಕಾರವಾರ ತಾಲೂಕಿನ 20 ಗ್ರಾಮಗಳಿಗೆ ನೆರೆ ಭೀತಿ ಆವರಿಸಿದೆ.

ಸದ್ಯ ಜಲಾಶಯದ ಕೆಳಭಾಗದ ಕದ್ರಾ -ಮಲ್ಲಾಪುರ ರಸ್ತೆ ಮುಳುಗಿದ್ದು ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ.ಹೆದ್ದಾರಿಗಳಲ್ಲಿ ಅಲ್ಲಲ್ಲಿ ಗುಡ್ಡ ಕುಸಿದರೇ ಅರೆಬರೆ ಕಾಮಗಾರಿಯಿಂದ ಗುಡ್ಡದಿಂದ ಬರುವ ನೀರು ಸಮುದ್ರ ಸೇರದೇ ರಾಷ್ಟ್ರೀಯ ಹೆದ್ದಾರಿಯ ತಗ್ಗು ಪ್ರದೇಶಗಳಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗಿದ್ದು ಜನ ಆತಂಕದಲ್ಲೇ ದಿನ ದೂಡುವಂತಾಗಿದೆ.

ಇನ್ನು ಕಾಳಿ ನದಿಯಲ್ಲಿ ನೀರು ತುಂಬಿದ್ದರಿಂದ ಕದ್ರಾ ಜಲಾಶಯದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್ ಬಾಗಿನ ಅರ್ಪಣೆ ಮಾಡಿದರು. ಇದಲ್ಲದೇ ಪ್ರವಾಹ ಏರ್ಪಡದಂತೆ ಜಾಗೃತಿ ವಹಿಸಲು ಅಧಿಕಾರಿಗಳಿಗೆ ಸೂಚಿಸಿರು. ನಂತರ ಕಾರವಾರ ಚಂಡಿಯಾ ತಾಲೂಕಿನ ಪ್ರವಾಹ ಪರಿಸ್ಥಿತಿ ಸ್ಥಳಗಳಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದನ್ನೂ ಓದಿ:-

ಕರಾವಳಿಯ ಅಬ್ಬರದ ಮಳೆಗೆ ಜನ ತತ್ತರಿಸಿದ್ದಾರೆ. ಜಿಲ್ಲೆಯಾಧ್ಯಾಂತ 87.3 ಮಿಲೀ ಮೀಟರ್ ಮಳೆಯಾಗಿದೆ. ನೆರೆಯಿಂದ ಜಿಲ್ಲೆಯಲ್ಲಿ ಎಂಟು ಕಾಳಜಿ ಕೇಂದ್ರ ತೆರೆಯಲಾಗಿದೆ.ಕಾಳಜಿ ಕೇಂದ್ರ ದಲ್ಲಿ 313 ಜನ ಆಶ್ರಯ ಪಡೆದಿದ್ದಾರೆ.ಕುಮಟ, ಹೊನ್ನಾವರ ಭಾಗದಲ್ಲಿ ಹೆಚ್ಚಿನ ಮಳೆಯಾಗಿದ್ದು, ಪ್ರವಾಹ (Flood) ಏರ್ಪಟ್ಟ ಪರಿಣಾಮ ಜುಲೈ 9 ರಂದು ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರವರು ರಜೆ ಘೋಷಿಸಿದ್ದಾರೆ.

ಇನ್ನು ಕದ್ರಾ ಜಲಾಶಯ ಭಾಗದಲ್ಲಿ ಕೆ.ಪಿ.ಸಿ ನಿಗಮದಿಂದ ಕಾಳಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ. ಕದ್ರಾ ಜಲಾಶಯದಿಂದ ನಾಲ್ಕು ಗೇಟ್ ನಿಂದ ನಿರಂತರ ನೀರು ಹರಿಬಿಡಲಾಗುತಿದ್ದು ,ತುಂಬಿ ಹರಿಯುತ್ತಿರುವ ಜಲಾಶಯ ವೀಕ್ಷಣೆಗೆ ಪ್ರವಾಸಿಗರು ಹರಿದು ಬರುತಿದ್ದು ಎಂಜಾಯ್ ಮಾಡುತಿದ್ದರೆ.

ಸದ್ಯ ಜಿಲ್ಲೆಯಲ್ಲಿ ಸಂಜೆಯಿಂದ ಅಲ್ಪ ಮಳೆಯ ಆರ್ಭಟ ಕಡಿಮೆಯಾಗಿದೆ. ಆದರೂ ಹವಾಮಾನ ಇಲಾಖೆ ಆರೆಂಜ್ ಅಲರ್ಟ ನೀಡಿದ್ದು ಮತ್ತೆ ಮಳೆ ಅಬ್ಬರದ ಸೂಚನೆಯಿದೆ. ಜೊತೆಗೆ ಕರಾವಳಿಯಲ್ಲಿ ಅಲೆಗಳ ಅಬ್ಬರ ಹೆಚ್ಚಾಗಲಿದೆ.ಹೀಗಾಗಿ ಮತ್ತೆ ಜಿಲ್ಲೆಯಲ್ಲಿ ವರುಣ ಆರ್ಭಟಿಸಿ ಮತ್ತಷ್ಟು ಅನಾಹುತ ತಂದೊಡ್ಡುವ ಭಯ ಜನರನ್ನು ಕಾಡುತ್ತಿದೆ.

ಶರಾವತಿ ಮಡಿಲಿನ ಜೋಗ ಜಲಪಾತದ ಸೊಬಗು ನೋಡಿ:-




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!