Honnavara| ಗುಡ್ಡ ಕುಸಿತ ಹೆದ್ದಾರಿ ಬಂದ್ -ಶಾಲೆಗೆ ರಜೆ ಘೋಷಣೆ.

84

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಕಾರವಾರ – ಶಿವಮೊಗ್ಗ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.

ಹೊನ್ನಾರ ತಾಲೂಕಿನ ವರ್ನಕೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಒಮ್ಮಿಂದ ಒಮ್ಮೆಲೆ ಗುಡ್ಡ ಕುಸಿತ ಗೊಂಡು ಹೆದ್ದಾರಿ ಮೇಲೆ ಬಿದ್ದಿದೆ. ಇದರಿಂದಾಗಿ ದೊಡ್ಡ ಮರ ಹಾಗೂ ಮಣ್ಣು ರಸ್ತೆಗೆ ಬಿದ್ದಿದೆ.

ಇನ್ನು ಬಿದ್ದ ಮರ ಹಾಗೂ ಮಣ್ಣನ್ನು ತೆಗೆಯಲು ತೊಂದರೆಯಾಗಿದ್ದು ಕಾರ್ಯಾಚರಣೆ ಸಹ ತಡವಾಗುತಿದ್ದು ಸದ್ಯ ಈ ಭಾಗದಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಶಾಲೆಗೆ ರಜೆ ಘೋಷಣೆ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮುಂದುವರೆದ ವರುಣಾರ್ಭಟ ದಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಗುಂಡಬಾಳ ನದಿಯಿಂದಾಗಿ ಪ್ರವಾಹ ಆತಂಕ ಎದುರಾಗಿದೆ.

ಹೊನ್ನಾವಾರ ತಾಲೂಕಿನ ಐದು ಗ್ರಾಮಗಳ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಜನತಾ ವಿದ್ಯಾಲಯ ಅನಿಲಗೋಡ್ ,ಹಿರಿಯ ಪ್ರಾಥಮಿಕ ಶಾಲೆ ಅನಿಲಗೋಡ,ಗುಂಡ ಬಾಳ ನಂ-2,ಗುಂಡಿ ಬೈಲ್ ನಂ 2,ಹುಡ್ಗೋಡ ಇಟ್ಟಿಹಾದ ಪಬ್ಲಿಕ್ ಸ್ಕೂಲ್ , ಕಿರಿಯ ಪ್ರಾಥಮಿಕ ಶಾಲೆ ಗಂಜಿಗೆರೆ ಈ ಶಾಲೆಗಳಿಗೆ ರಜೆ ಘೋಷಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಆದೇಶ ಮಾಡಿದ್ದಾರೆ.

ಜಿಲ್ಲಾಧಿಕಾರಿ ಹೇಳಿಕೆ ವಿಡಿಯೋ ನೋಡಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!