ವಾಹನ ಸವಾರರಿಗೆ ಬಿಗ್ ರಿಲೀಫ್:HSRP ನೊಂದಣಿ ಅಳವಡಿಕೆಗೆ ಮತ್ತಷ್ಟು ಅವಕಾಶ-ಎಷ್ಟುದಿನ ವಿವರ ನೋಡಿ.

271

ಬೆಂಗಳೂರು,ಪೆಬ್ರವರಿ 14:- ವಾಹನಗಳಿಗೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗೆ ಕೊನೆಯ ದಿನವನ್ನು ಮುಂದೂಡಲಾಗಿದೆ. ಎಷ್ಟು ದಿನಗಳು ಅವಕಾಶ ಸಿಕ್ಕಿದೆ ಗೊತ್ತಾ? ಡೆಡ್‌ಲೈನ್ ಎಷ್ಟು ತಿಂಗಳು ಮುಂದೂಡಿಕೆ ಆಗಿದೆ? ಇಲ್ಲಿದೆ ಡಿಟೇಲ್ಸ್

ಎಚ್‌.ಎಸ್‌.ಆರ್‌.ಪಿ (HSRP) ನಂಬರ್ ಪ್ಲೇಟ್ ಅಳವಡಿಕೆಗಾಗಿ ನಿಗದಿಯಾಗಿದ್ದ 2024ರ ಫೆಬ್ರವರಿ 17ರ ಡೆಡ್‌ಲೈನ್ ಅನ್ನ ಈಗ ಮುಂದೂಡಿಕೆ ಮಾಡಲಾಗಿದೆ.

ಬರೋಬ್ಬರಿ 3 ತಿಂಗಳ ಕಾಲ ಇದೀಗ ಡೆಡ್‌ಲೈನ್ ಮುಂದೆ ಹಾಕಿದೆ. ಈ ಕುರಿತು ಕರ್ನಾಟಕ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರೇ ಮಾಹಿತಿ ನೀಡಿದ್ದಾರೆ. ಈ ಮೂಲಕ ಕರ್ನಾಟಕದ ವಾಹನಗಳ ಸವಾರರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ನಡೆದ ಸಾರಿಗೆ ಇಲಾಖೆ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿರವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ವಾಹನ ಸವಾರರಿಗೆ ದಂಡ ಕಟ್ಟಿ ಸಮಸ್ಯೆ ಅನುಭವಿಸುವುದು ತಪ್ಪಿದಂತಾಗಿದೆ.

ಈ ಹಿಂದೆ ನೀಡಿದಂತೆ 2024ರ ಫೆಬ್ರವರಿ 17ರ ಒಳಗಾಗಿ ವಾಹನ ಸವಾರರು ತಮ್ಮ, ತಮ್ಮ ವಾಹನಗಳಿಗೆ ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕಿತ್ತು. ಆದ್ರೆ ಈಗ ಮತ್ತೊಮ್ಮೆ 3 ತಿಂಗಳ ಕಾಲಾವಧಿಗೆ ವಿಸ್ತರಣೆ ಮಾಡಲಾಗಿದೆ. ಇದುವೆರಗೂ ಡೆಡ್‌ಲೈನ್ ದಿನಾಂಕವನ್ನು ಸ್ಪಷ್ಟವಾಗಿ ತಿಳಿಸಿಲ್ಲ, ಈ ಹಿನ್ನೆಲೆ ಭಾರಿ ಕುತೂಹಲ ಮೂಡಿದ್ದು ಬಹುತೇಕ ಕೊನೆಯ ದಿನಾಂಕವು ಸಹ ಹೊರಬೀಳಲಿದೆ.

1 ಸಾವಿರ ರೂಪಾಯಿ ದಂಡ

ಎಚ್‌ಎಸ್‌ಆರ್‌ಪಿ ಪ್ಲೇಟ್ ಅಳವಡಿಕೆ ಮಾಡದಿದ್ದರೆ ದಂಡ ಗ್ಯಾರಂಟಿ ಎಂಬುದು ಕೂಡ ವಾಹನ ಸವಾರರಿಗೆ ತಲೆನೋವು ತರಿಸಿತ್ತು. ಫೆಬ್ರವರಿ 17ಕ್ಕೆ ಗಡುವು ಮುಗಿದ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದಿದ್ದ ವಾಹನದ ಮಾಲಿಕರಿಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆಯೂ ಎಚ್ಚರಿಕೆ ನೀಡಿತ್ತು. ಎಚ್‌ಎಸ್‌ಆರ್‌ಪಿ ನಿಯಮದ, ಮೊದಲ ಬಾರಿ ಉಲ್ಲಂಘನೆಗಾಗಿ 1 ಸಾವಿರ ರೂಪಾಯಿ ದಂಡ. ನಂತರದ ಉಲ್ಲಂಘನೆಗೆ ಪ್ರತಿ ಬಾರಿ ಕೂಡ, 1 ಸಾವಿರ ರೂಪಾಯಿ ದಂಡ ನಿಗದಿ ಮಾಡಲಾಗಿತ್ತು.

ಇದನ್ನೂ ಓದಿ:-CM ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರಿಗೆ ನ್ಯಾಯಾಲಯದಿಂದ ದಂಡ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಹೈಕೋರ್ಟ್ ಸೂಚನೆ?

ಆದ್ರೆ ಸರ್ವರ್‌ ಸಮಸ್ಯೆ ಸೇರಿ ಹಲವು ಕಾರಣದಿಂದ, ಎಚ್‌ಎಸ್‌ಆರ್‌ಪಿ (HSRP) ನಂಬರ್ ಪ್ಲೇಟ್ ಅಳವಡಿಕೆ ಕಷ್ಟವಾಗಿತ್ತು. ಹೀಗಾಗಿಯೇ ವಾಹನಗಳ ಸವಾರರು ಕೂಡ ಈ ಕುರಿತು, ಕರ್ನಾಟಕ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಇದೀಗ 3 ತಿಂಗಳು ಮುಂದಕ್ಕೆ ಹೋಗಿರುವ ಡೆಡ್‌ಲೈನ್, ಕರ್ನಾಟಕದ ವಾಹನ ಸವಾರರಿಗೆ ದೊಡ್ಡ ರಿಲೀಫ್ ನೀಡಿದೆ.

ಹಾಗೇ ಹೊಸ ಡೆಡ್‌ಲೈನ್ ಯಾವಾಗ? ಅನ್ನೋದು ಇನ್ನೇನು ಕೆಲ ಹೊತ್ತಲ್ಲಿ ಅಧಿಕೃತವಾಗಿ ಗೊತ್ತಾಗಲಿದೆ. ಈ ಮೂಲಕ ವಾಹನ ಸವಾರರಿಗೆ ನಂಬರ್ ಪ್ಲೇಟ್ ಬದಲಾವಣೆಗೆ ಮತ್ತಷ್ಟು ಟೈಂ ಸಿಕ್ಕಂತಾಗಿದೆ.

ನೊಂದಣಿ ಮಾಡಲು ವೆಬ್‌ಸೈಟ್ ವಿಳಾಸ ಇಲ್ಲಿದೆ ನೋಡಿ.

ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ ವಾಹನ ಸವಾರರು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆಯಲು ಸಾರಿಗೆ ಇಲಾಖೆ ಅಧಿಕೃತ ವೆಬ್ಸೈಟ್ https://transport.karnataka.gov.in ಅಥವಾ www.siam.in ಮೂಲಕ ಮಾತ್ರ ನೋಂದಣಿಯ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ. ನಂಬರ್ ಪ್ಲೇಟ್ ಅಳವಡಿಕೆ ಸಮಯದಲ್ಲಿ ಸರ್ಕಾರ ಸೂಚಿಸಿರುವ ವೆಬ್‌ಗೆ ಮಾತ್ರ ಭೇಟಿ ನೀಡಬೇಕು. ಕರೆಗಳ ವಿಚಾರದಲ್ಲಿ ಕೂಡ ಮುನ್ನೆಚ್ಚರಿಕೆ ವಹಿಸಬೇಕು ಎಂದಿತ್ತು.

ಇದನ್ನೂ ಓದಿ:-ಸಿದ್ದರಾಮಯ್ಯ ಸರ್ಕಾರ ರಾಜ್ಯವನ್ನು ರಾವಣ ರಾಜ್ಯ ಮಾಡುತ್ತಿದೆ. ದಾಖಲೆ ಬಿಡುಗಡೆ ಮಾಡಿದಅನಂತಕುಮಾರ್ ಹೆಗಡೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!