ಲೋಕಸಭಾ ಚುನಾವಣೆ-28 ಕ್ಷೇತ್ರಕ್ಕೆ BJP ಉಸ್ತುವಾರಿ ನೇಮಕ-ಯಾವ ಕ್ಷೇತ್ರ ಯಾರು ವಿವರ ನೋಡಿ.

161

ಬೆಂಗಳೂರು, ಜನವರಿ 27: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್‌, ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ರಾಜ್ಯಸಭಾ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನು ಶನಿವಾರ ನೇಮಕ ಮಾಡಿದೆ. ಇದೀಗ ರಾಜ್ಯ ಬಿಜೆಪಿ 28 ಲೋಕಸಭಾ ಸ್ಥಾನಗಳಿಗೆ ವಿವಿಧ ನಾಯಕರನ್ನು ಉಸ್ತುವಾರಿ ಹಾಗೂ ಸಂಚಾಲಕರನ್ನ ನೇಮಿಸಿದೆ.

ಇದನ್ನೂ ಓದಿ:- ಬಿಜೆಪಿ “ಘರ್ ವಾಪಸಿ” ಪ್ರಾರಂಭ ಮಾತ್ರ ,ಅನೇಕ ಪಕ್ಷದ ಮುಖಂಡರು ನಾಯಕರ ಸಂಪರ್ಕದಲ್ಲಿದ್ದಾರೆ- ಸಂಸದಬಿ.ವೈ ರಾಘವೇಂದ್ರ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಹಲವು ಹಿರಿಯ ಮುಖಂಡ ಜೊತೆಗೆ ಚರ್ಚೆ ನಡೆಸಿ ಎಲ್ಲಾ 28 ಲೋಕಸಭಾ ಸ್ಥಾನಗಳಿಗೆ ನಾಯಕರನ್ನು ಉಸ್ತುವಾರಿ ಮತ್ತು ಸಂಚಾಲಕರನ್ನಾಗಿ ನೇಮಿಸಿದೆ.ಇದರ ಪಟ್ಟಿ ಈ ಕೆಳಗೆ ನೀಡಲಾಗಿದೆ.

ಶಿವಮೊಗ್ಗ: ಉಸ್ತುವಾರಿ ರಘುಪತಿ ಭಟ್, ಸಂಚಾಲಕರು ಗಿರೀಶ್ ಪಟೇಲ್.

ಉತ್ತರ ಕನ್ನಡ: ಉಸ್ತುವಾರಿ ಹರತಾಳು ಹಾಲಪ್ಪ, ಸಂಚಾಲಕರು ಗೋವಿಂದ ನಾಯಕ್.

ಧಾರವಾಡ: ಉಸ್ತುವಾರಿ ಈರಣ್ಣ ಕಡಾಡಿ, ಸಂಚಾಲಕರು ನಾಗರಾಜ್.

ಚಾಮರಾಜನಗರ: ಉಸ್ತುವಾರಿ ಎಮ್ ವಿ ಪನೀಶ್, ಸಂಚಾಲಕರು ಮಲ್ಲಿಕಾರ್ಜುನಪ್ಪ

ಮಂಡ್ಯ: ಉಸ್ತುವಾರಿ ಸುನಿಲ್ ಸುಬ್ರಮಣಿ, ಸಂಚಾಲಕರು ಸಿ.ಪಿ ಉಮೇಶ್.

ಹಾಸನ: ಉಸ್ತುವಾರಿ ಎಂ.ಕೆ ಪ್ರಾಣೇಶ್, ಸಂಚಾಲಕರು ಪ್ರಸನ್ನ

ದಕ್ಷಿಣ ಕನ್ನಡ: ಉಸ್ತುವಾರಿ ಕೋಟಾ ಶ್ರೀನಿವಾಸ್ ಪೂಜಾರಿ, ಸಂಚಾಲಕರು ನಿತಿನ್ ಕುಮಾರ್.

ಉಡುಪಿ ಚಿಕ್ಕಮಗಳೂರು: ಉಸ್ತುವಾರಿ ಆರಗ ಜ್ಞಾನೇಂದ್ರ, ಸಂಚಾಲಕರು ಕುಟ್ಯಾರು ನವೀನ್ ಶೆಟ್ಟಿ, ರವೀಂದ್ರ ಬೆಳವಾಡಿ.

ಹಾವೇರಿ: ಉಸ್ತುವಾರಿ ಅರವಿಂದ್ ಬೆಲ್ಲದ್, ಸಂಚಾಲಕರು ಕಳಕಪ್ಪ ಬಂಡಿ.

ಚಿಕ್ಕೋಡಿ: ಉಸ್ತುವಾರಿ ಅಭಯ್ ಪಾಟೀಲ್, ಸಂಚಾಲಕರು ರಾಜೇಶ್ ನೆರ್ಲಿ.

ಬಾಗಲಕೋಟೆ: ಉಸ್ತುವಾರಿ ಲಿಂಗಾರಾಜು ಪಾಟೀಲ್, ಸಂಚಾಲಕರು ಸಿದ್ದು ಸವದಿ.

ಬಿಜಾಪುರ: ಉಸ್ತುವಾರಿ ರಾಜಶೇಖರ್ ಶೀಲವಂತ್, ಸಂಚಾಲಕರು ಅರುಣ್ ಶಹಪುರ.

ಬೀದರ್: ಉಸ್ತುವಾರಿ ಅಮರನಾಥ್ ಪಾಟೀಲ್, ಸಂಚಾಲಕರು ಅರಹಂತ ಸಾವ್ಲೆ.

ಗುಲ್ಬರ್ಗ: ಉಸ್ತುವಾರಿ ರಾಜುಗೌಡ, ಸಂಚಾಲಕರು ಶೋಭಾ ಬನಿ.

ರಾಯಚೂರು: ಉಸ್ತುವಾರಿ ದೊಡ್ಡನ ಗೌಡ ಪಾಟೀಲ್, ಸಂಚಾಲಕರು ಗುರು ಕಾಮ.

ಕೊಪ್ಪಳ: ಉಸ್ತುವಾರಿ ರಘುನಾಥ್ ರಾವ್ ಮಲ್ಕಾಪುರೆ, ಸಂಚಾಲಕರು ಗಿರಿಗೌಡ.

ಬಳ್ಳಾರಿ: ಉಸ್ತುವಾರಿ ಎನ್ ರವಿಕುಮಾರ್, ಸಂಚಾಲಕರು ವೈ.ಎಂ ಸತೀಶ್.

ದಾವಣಗೆರೆ: ಉಸ್ತುವಾರಿ ಬೈರತಿ ಬಸವರಾಜ್, ಸಂಚಾಲಕರು ವೀರೇಶ್ ಹಾನಗವಾಡಿ.

ಚಿತ್ರದುರ್ಗ: ಉಸ್ತುವಾರಿ ಚನ್ನಬಸಪ್ಪ, ಸಂಚಾಲಕರು ಲಿಂಗಮಮೂರ್ತಿ

ತುಮಕೂರು: ಉಸ್ತುವಾರಿ ಗೋಪಾಲಯ್ಯ, ಸಂಚಾಲಕರು ಬೈರಣ್ಣ

ಚಿಕ್ಕಬಳ್ಳಾಪುರ: ಉಸ್ತುವಾರಿ ಕಟ್ಟಾಸುಬ್ರಮಣ್ಯ ನಾಯ್ಡು, ಸಂಚಾಲಕರು ಎ. ವಿ ನಾರಾಯಣ ಸ್ವಾಮಿ

ಕೋಲಾರ : ಉಸ್ತುವಾರಿ ಬಿ. ಸುರೇಶ್ ಗೌಡ, ಸಂಚಾಲಕರು ಮೈಗೇರಿ ನಾರಾಯಣ ಸ್ವಾಮಿ.

ಬೆಂಗಳೂರು ಗ್ರಾಮಾಂತರ: ಉಸ್ತುವಾರಿ ನಿರ್ಮಲ ಕುಮಾರ್ ಸುರಾನಾ , ಸಂಚಾಲಕರು ಮುನಿರತ್ನ

ಬೆಂಗಳೂರು ದಕ್ಷಿಣ: ಉಸ್ತುವಾರಿ ಎಂ ಕೃಷ್ಣಪ್ಪ , ಸಂಚಾಲಕರು ಉಮೇಶ್ ಶೆಟ್ಟಿ

ಬೆಂಗಳೂರು ಕೇಂದ್ರ: ಉಸ್ತುವಾರಿ ಗುರುರಾಜ್ ಗಂಟಿಹೂಳಿ, ಸಂಚಾಲಕರು ಗೌತಮ್ ಕುಮಾರ್ ಜೈನ್.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!