forest department protected the bullfrogs that were being smuggled to Goa

ಕಾರವಾರದಲ್ಲಿ ಗೋವಾಕ್ಕೆ ಕಳ್ಳಸಾಗಾಟವಾಗುತಿದ್ದ 41 ಕಪ್ಪೆಗಳ ರಕ್ಷಣೆ! ಕಪ್ಪೆಗಳನ್ನೂ ಕಳ್ಳಸಾಗಾಟ ಮಾಡ್ತಾರೆ ಏಕೆ ಗೊತ್ತಾ?

174

KARWAR NEWS :- ಭಕ್ಷಣೆಗಾಗಿ ಗೋವಾಕ್ಕೆ ಬಸ್ (goa Bus) ನಲ್ಲಿ ಸಾಗಾಟ ಮಾಡುತಿದ್ದ 41 ಬುಲ್ ಪ್ರಾಗ್ ಕಪ್ಪೆಗಳನ್ನು ಕಾರವಾರದ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿ ಗೋವಾ ಮೂಲದ ಇಬ್ಬರನ್ನು ಬಂಧಿಸಿ ಗೋವಾ ಮೂಲದ ಬಸ್ ನನ್ನು ವಶಕ್ಕೆ ಪಡೆದಿದ್ದಾರೆ.

ಕಚಿತ ಮಾಹಿತಿ ಆಧಾರದಲ್ಲಿ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ 66 ರ ಕಾಳಿ ಬ್ರಿಡ್ಜ್ ಬಳಿ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ( Karnataka Forest Department) ಗೋವಾ ಮೂಲದ ಕಾಣಕೋಣ್ ನಿವಾಸಿ ಚಾಲಕ ಸಿದ್ದೇಶ್ ದೇಸಾಯಿ ,ನಿರ್ವಾಹಕ ಜಾನು ಲೂಲಿಮ್ ಬಂಧಿಸಿದ್ದಾರೆ‌.

ಕಪ್ಪೆ ರಕ್ಷಣೆ ಏಕೆ? ಏನಿದರ ಗುಟ್ಟು?

Bull frog

ಗೋವಾ ದಲ್ಲಿ ಜಂಪಿಂಗ್ ಚಿಕನ್ ಎಂದೇ ಹೆಸರು ಪಡೆದಿರುವ ಕಪ್ಪೆಗಳ ಖಾಧ್ಯ ಪ್ರಖ್ಯಾತಿ ಗಳಿಸಿದೆ. ಬುಲ್ ಫ್ರಾಗ್ ( Bull frog) ಜಾತಿಯ ಕಪ್ಪೆಗಳು ಅತೀ ದೊಡ್ಡದಾಗಿರುತ್ತದೆ. ಇದನ್ನು ಜೀವಂತವಾಗಿ ಹಿಡಿದು ಗೋವಾದಲ್ಲಿ ಇವುಗಳ ಕಾಲು ಗಳನ್ನು ಕಡಿದು ಫ್ರೈ ಮಾಡಿ ಭಕ್ಷಿಸುತ್ತಾರೆ.

ಇದಲ್ಲದೇ ಜೀವಂತವಾಗಿಯೇ ಇವುಗಳ ಚರ್ಮ ತೆಗೆದು ಫ್ರೈ ಮಾಡಿ ತಿನ್ನುತ್ತಾರೆ. ಗೋವಾ ಭಾಗದಲ್ಲಿ ಈ ಕಪ್ಪೆಗಳ ಭಕ್ಷವನ್ನು ಜಂಪಿಂಗ್ ಚಿಕನ್ ಎನ್ನುತ್ತಾರೆ.

ಗೋವಾ ದಲ್ಲಿ ಗೋವಾ ಜನರು ಸೇರಿ ,ವಿದೇಶಿಗರಿಗೂ ಈ ಕಪ್ಪೆ ಖಾಧ್ಯ ಬಲು ಪ್ರೀತಿ. ಒಂದು ಕಪ್ಪೆ ಖಾಧ್ಯಕ್ಕೆ 1500 ಕ್ಕೂ ಹೆಚ್ಚು ದರ ವಿಧಿಸಲಾಗುತ್ತದೆ. ಇನ್ನು ಈ ಕಪ್ಪೆಗಳು ಗೋವಾ ಭಾಗದಲ್ಲಿ ಸಿಗುವುದಿಲ್ಲ‌ ಹೀಗಾಗಿ ಪಶ್ಚಿಮ ಘಟ್ಟ ಪ್ರದೇಶವಾದ ಕಾರವಾರ,ಅಂಕೋಲ ಸೇರಿದಂತೆ ಇತರೆ ಭಾಗದಿಂದ ಇವುಗಳನ್ನು ಕಳ್ಳಸಾಗಾಣಿಕೆ ಮಾಡಲಾಗುತ್ತದೆ. ಒಂದು ದೊಡ್ಡ ಕಪ್ಪೆಗೆ ಕನಿಷ್ಟ 500 ರೂಗಳ ದರ ನೀಡಲಾಗುತ್ತದೆ. ಹೀಗಾಗಿ ಇವುಗಳ ಭೇಟೆ ಕಾರವಾರ,ಅಂಕೋಲ ಭಾಗದಲ್ಲಿ ಅತೀ ಹೆಚ್ಚಿದ್ದು ಜೀವಂತವಾಗಿ ಹಿಡಿದು ಗೋವಾಕ್ಕೆ ಸಾಗಿಸಲಾಗುತ್ತದೆ‌.

ಕರ್ನಾಟಕ ರಾಜ್ಯ ಸರ್ಕಾರವು ಅರಣ್ಯ ಕಾಯ್ದೆ ಷಟ್ಯಲ್ 1 ರಂತೆ ಈ ಕಪ್ಪೆಗಳ ಬೇಟೆ, ರಕ್ಷಣೆಯನ್ನು ನಿಶೇಧಿಸಿದೆ.ಆದರೂ ಗೋವಾದಲ್ಲಿ ಅತೀ ಹೆಚ್ಚು ಬೇಡಿಕೆ ಇರುವುದರಿಂದ ಮಳಡಗಾಲದ ಆರಂಭದಲ್ಲಿ ಇವುಗಳ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತವೆ.

ಆದ್ರೆ ಇದೀಗ ಕಾರವಾರದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಲವು ದಿನದ ಕಾರ್ಯಾಚರಣೆ ಬಳಿಕ ದೊಡ್ಡ ಮಟ್ಟದ ಕಪ್ಪೆಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ‌
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!