Mla sathish sail karwar

ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ರು ಜಿಲ್ಲೆಯ ಅಧಿಕಾರಿಗಳು ನಮ್ಮ ಮಾತು ಕೇಳ್ತಾ ಇಲ್ಲ -ಶಾಸಕ ಸತೀಶ್ ಸೈಲ್

116

ಕಾರವಾರ:- ರಾಜ್ಯದಲ್ಲಿ ನಮ್ಮದೆ ಸರ್ಕಾರ( government) ಇದ್ರು ಜಿಲ್ಲೆಯ ಕೆಲವು ಅಧಿಕಾರಿಗಳು ನಮ್ಮ ಮಾತು ಕೇಳ್ತಾ ಇಲ್ಲ ಹೀಗಂತ ಆರೋಪ ಮಾಡಿದ್ದು ಕಾಂಗ್ರೆಸ್ ಪಕ್ಷದ ಕಾರವಾರದ ಹಾಲಿ ಶಾಸಕ ಸತೀಶ್ ಸೈಲ್. ಅವರ ಈ ಕೋಪಕ್ಕೆ ಅಧಿಕಾರಿಗಳ ನಡುವಳಿಕೆ ಕಾರಣವಾಗಿದೆ.

ಇಂದು ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಖಾಸಗಿ ಸಂಸ್ಥೆಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಸೌಲಭ್ಯ ನೀಡಲು ವೈದ್ಯಕೀಯ ಕಾಲೇಜ್ ನಿರ್ದೆಶಕ ಗಜಾನನ್ ನಾಯ್ಕ ರವರು ತಿರಸ್ಕರಿಸಿದ್ದಾರೆ.

ರಾಜ್ಯದಲ್ಲಿ ತಮ್ಮದೆ ಸರ್ಕಾರ ಇದ್ರು ಜಿಲ್ಲೆಯ ಕೆಲವು ಅಧಿಕಾರಿಗಳು ನಮ್ಮ ಮಾತು ಕೇಳ್ತಾ ಇಲ್ಲ, ಕ್ರಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ರೋಗಿಗಳು ಬಹಳ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ:-ಗೋಕರ್ಣ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಕ್ಕು ಯಾರಿಗೆ? ಆಡಳಿತಾಧಿಕಾರಿ ಹೇಳಿದ್ದೇನು?

ನಾನೇ ಎಷ್ಟೋ ರೋಗಿಗಳನ್ನು ಉಡುಪಿ, ಮಂಗಳೂರು ಹಾಗೂ ಪಣಜ ಗೆ ಕಳುಹಿಸುಕೊಡುತ್ತಿದ್ದೇನೆ.

ಕಾರವಾರ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಕೆಲವೇ ಕೆಲವು ವಿಭಾಗಗಳು ಮಾತ್ರ ಇಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿವೆ.

ಮಿಟಿಂಗ್ ನಲ್ಲಿ ನಾವು ಏನೆ ಹೇಳಿದ್ರು ಎಸ್ ಎಸ್ ಅಂತಾ ತಲೆ ಮೇಲೆ ಇಟ್ಕೊಳ್ತಾರೆ, ಆದ್ರೆ ಯಾವುದೇ ಕೆಲಸವನ್ನು ಆರೋಗ್ಯಾಧಿಕಾರಿಗಳು ಮಾಡುತ್ತಿಲ್ಲ.

ಡೀನ್, ಡಿ.ಎಸ್ ಹಾಗೂ ಡಿ.ಎಚ್ ಓ ಸರಕಾರಿ ಆಸ್ಪತ್ರೆಯಲ್ಲಿ ರೌಂಡ್ಸ್ ಹಾಕಲ್ಲ. ಬಿಜಿಎಸ್ಎಸ್ ಸುಮತಿ ನಾಯಕ್ ರವರ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ನ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಸೌಲಭ್ಯಕ್ಕೆ ನಿರಾಕರಣೆ ಮಾಡಿದ್ದಾರೆ.

ಇದನ್ನೂ ಓದಿ:-ಹೊನ್ನಾವರ ಅಗ್ನಿಶಾಮಕ ದಳದ ನಾಗೇಶ್ ಪೂಜಾರಿಗೆ ಮುಖ್ಯಮಂತ್ರಿ ಚಿನ್ನದ ಪದಕ

ಕ್ರಿಮ್ಸ್ ಸಂಸ್ಥೆಯ ನಿರ್ದೇಶಕ ಗಜಾನನ ನಾಯ್ಕ್ ಈ ವರ್ಷ ಕ್ಲಿನಿಕ್ ಸೌಲಭ್ಯ ಕೊಡಲು ನಿರಾಕರಿಸಿದ್ದಾರೆ.
ಕಳೆದ 22 ವರ್ಷಗಳಿಂದ ಕಾರವಾರ ಸರ್ಕಾರಿ ಆಸ್ಪತ್ರೆಯಲ್ಲೆ ಪ್ರಾಕ್ಟಿಕಲ್ ಮಾಡುತ್ತಿದ್ದರು.

ಆದ್ರೆ ಈ ವರ್ಷ ಒಮ್ಮಿಂದ ಒಮ್ಮೆಲೆ ಸರಕಾರದ ಹೊಸ ನಿಯಮ ಅನುಸಾರ ಅವಕಾಶ ಕೊಡಲು ಆಗೊದಿಲ್ಲ ಅಂತಿದ್ದಾರೆ.ಈ ಬಗ್ಗೆ ನಾನು ವೈದಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗೆ ಕರೆ ಮಾಡಿದ್ದೆ.
ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆಗೆ ಅನಗುಣವಾಗಿ ಅವಕಾಶ ಕೊಡುವಂತೆ ಹೇಳಿದ್ದಾರೆ.

ಆದ್ರೆ ನಮ್ಮ ಕ್ರಿಮ್ಸ್ ನಿರ್ದೇಶಕರು ಮಾತ್ರ ಇದಕ್ಕೆ ಅವಕಾಶನೆ ಕೊಡುತ್ತಿಲ್ಲ. ಇದರಿಂದ ನೂರಾರು ವಿದ್ಯಾರ್ಥಿಗಳು ಪ್ರಾಕ್ಟಿಕಲ್ ಇಲ್ಲದೇ ತೊಂದರೆ ಅನುಭವಿಸುವಂತೆ ಆಗಿದೆ.ಈ ಬಗ್ಗೆ ಮಂಗಳವಾರ ಸಚಿವರನ್ನು ಭೇಟಿ ಮಾಡಿ ಅವರ ಗಮನಕ್ಕೆ ತರುತ್ತೇನೆ,ವಿದ್ಯಾರ್ಥಿಗಳಿಗೆ ಯಾವುದೇ ಅನ್ಯಾಯ ಆಗದಂತೆ ನಾನು ನೊಡಿಕೊಳ್ಳುತ್ತೇನೆ ಎಂದು ಸಮಸ್ಯೆಯಲ್ಲಿರುವ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಪರ ಮಾತನಾಡಿದರು.

ಇನ್ನು ಈ ಹಿಂದೆ ಕ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಅವ್ಯವಸ್ಥೆ ಕುರಿತು ಕುದ್ದು ಅಲ್ಲಿನ ಸಿಬ್ಬಂದಿ ,ವಿದ್ಯಾರ್ಥಿಗಳು ಸಚಿವ ಮಂಕಾಳು ವೈದ್ಯರು ನಡೆಸಿದ್ದ ಸಭೆಯಲ್ಲಿ ಅಳಲು ತೋಡಿಕೊಂಡಿದ್ದರು.ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಇದೀಗ ಮೌನಕ್ಕೆ ಶರಣಾಗಿದ್ದಾರೆ‌ .

ಇದನ್ನೂ ಓದಿ:-Uttrakannda|ಯುವತಿ ಜೊತೆ ಪ್ರೇಮ ವಿಚಾರ-ಸಹೋದರನಿಂದ ಯುವಕನಿಗೆ ಚಾಕು ಇರಿತ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!