news/karnataka news/karnataka high court stays arrest warrant against b s yediyurappa in pocso-case

ಫೋಕ್ಸೋ ಪ್ರಕರಣ:ಯಡಿಯೂರಪ್ಪ ಬಂಧನಕ್ಕೆ ಎರಡು ವಾರ ತಡೆ!

109

ಬೆಂಗಳೂರು:- ಫೋಕ್ಸೋ ಪ್ರಕರಣ ಹಿನ್ನಲೆಯಲ್ಲಿ ಯಡಿಯೂರಪ್ಪನವರ ವಿರುದ್ಧ ಫೋಕ್ಸೋ ತನಿಖಾ ವಿಶೇಷ ನ್ಯಾಯಾಲಯವು ಹೊರಡಿಸಿದ್ದ ಬಂಧನದ ವಾರೆಂಟ್ ಗೆ ಹೈ ಕೋರ್ಟ ತಡೆ ನೀಡಿದೆ.

ಶುಕ್ರವಾರ ಬಂಧನ ವಾರೆಂಟ್ ಕುರಿತು ವಿಚಾರಣೆ ನಡೆಸಿದ ಪೀಠವು ಯಡಿಯೂರಪ್ಪ ನವರ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಿನ ವಿಚಾರಣೆ ವರೆಗೂ ತಡೆ ನೀಡಿದೆ.

ಮುಂದಿನ ಎರಡು ವಾರಗಳ ವರೆಗೆ ಯಾವುದೇ ಒತ್ತಾಯದ ಕ್ರಮ ಬೇಡ ,ಅವರನ್ನು ವಶದಲ್ಲಿ ಇಟ್ಟುಕೊಂಡು ವಿಚಾರಣೆ ನಡೆಸುವ ಅಗತ್ಯವಿಲ್ಲ,ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸರಿಗೆ ಪೀಠ ನಿರ್ದೇಶನ ನೀಡಿದೆ.ಈ ಪೀಠದಲ್ಲಿ ನ್ಯಾ. ಕೃಷ್ಣ ಎಸ್ ,ದೀಕ್ಷಿತ್ ವಾದ ವಿವಾದ ಆಲಿಸಿದ್ದು ಮುಂದಿನ ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!