Sharavathi river siganduru temple

ಬತ್ತಿದ ಲಿಂಗನಮಕ್ಕಿ: ನಿಂತ ಹಸಿರುಮಕ್ಕಿ ಲಾಂಚ್

72
GILANI super market karwar KSRTC bus stand near Karwar

Sagar news:- ನೀರಿನ ಮಟ್ಟ ಇಳಿಕೆಯಾದ ಹಿನ್ನೆಲೆ ಶರಾವತಿ ಹಿನ್ನೀರು(sharavathi backwater) ಭಾಗದ ಹಸಿರುಮಕ್ಕಿ ಲಾಂಚ್‌ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮಳೆ ಕೊರತೆ ಮತ್ತು ಭಾರಿ ಬಿಸಿಲಿನ ಪರಿಣಾಮ ಶರಾವತಿ ನದಿಯಲ್ಲಿ ನೀರಿನ ಮಟ್ಟ ತಗ್ಗಿದೆ.
ನೀರಿನ ಆಳದಲ್ಲಿದ್ದ ಮರದ ದಿಮ್ಮಿಗಳು ಮೇಲೆ ಬರುತ್ತಿವೆ. ಇವು ಲಾಂಚ್‌ಗೆ ತಾಗಿ ಹಾನಿ ಉಂಟು ಮಾಡಲಿವೆ. ಈ ಹಿನ್ನೆಲೆ ಲಾಂಚ್‌ ಸೇವೆ ತಾತ್ಕಾಲಿಕ ಅವಧಿಗೆ ಸ್ಥಗಿತಗೊಳಿಸಲಾಗಿದೆ.

ಮಳೆ ಬಂದು ನೀರಿನ ಮಟ್ಟ ಹೆಚ್ಚಳವಾಗುವವರೆಗೆ ಹಸಿರುಮಕ್ಕಿ ಲಾಂಚ್‌ ಸೇವೆ ಇರುವುದಿಲ್ಲ. ಕಳೆದ ಒಂದು ವಾರದಿಂದ ಲಾಂಚ್‌ನಲ್ಲಿ ಜನರ ಜೊತೆಗೆ ಲಘು ಮತ್ತು ದ್ವಿಚಕ್ರ ವಾಹನಗಳನ್ನು ಮಾತ್ರ ದಾಟಿಸಲಾಗುತ್ತಿತ್ತು. ಈಗ ಲಾಂಚ್‌ ಸೇವೆ ಸಂಪೂರ್ಣಗ ಸ್ಥಗಿತವಾಗಿದೆ.

ಇನ್ನು ಸಿಗಂದೂರಿಗೆ (siganduru) ಹೊನ್ನಾವರ -ಕಾರ್ಗಲ್ ಮಾರ್ಗವಾಗಿ ಹೋಗುವ ಮುಪ್ಪಾನೆ ಲಾಂಚ್ ಸಹ ನೀರು ಇಲ್ಲದ ಕಾರಣ ಸ್ಥಗಿತಮಾಡಲಾಗಿದೆ.

ನೀರು ಇಳಿಕೆಯಾದ್ರೆ ಸಾಗರ-ಸಿಗಂದೂರು ಲಾಂಚ್ ಗೂ ಸಂಕಷ್ಟ!

ಸದ್ಯ ಸಾಗರ ದಿಂದ ಸಿಗಂದೂರಿಗೆ ತೆರಳುವ ಲಾಂಚ್ ಕಾರ್ಯನಿರ್ವಹಿಸುತ್ತಿದೆ. ಆದರೇ 15 ದಿನದಲ್ಲಿ ನಿಗದಿ ನೀರು ಬಾರದಿದ್ದರೇ ಲಾಂಚ್ ನನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಕಾರವಾರ ಒಳನಾಡು ಜಲಸಾರಿಗೆ ಹಾಗೂ ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸಿ ಸ್ವಾಮಿ ತಿಳಿಸಿದ್ದಾರೆ. ಸದ್ಯ ದೇವಸ್ಥಾನ ಕ್ಕೆ ತೆರಳುವ ಹಾಗೂ ಸ್ಥಳೀಯರಿಗೆ ಸಮಸ್ಯೆ ಇಲ್ಲ. ನೀರು ಕಡಿಮೆಯಾದಲ್ಲಿ ಸ್ಥಳೀಯರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅವರು ಹೇಳಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!