Dengue fever

ಡೆಂಗ್ಯೂ ಗೆ ಗ್ರಾಮಪಂಚಾಯ್ತಿ ಮಾಜಿ ಅಧ್ಯಕ್ಷೆ ಸಾವು| ಶಿರಸಿಯಲ್ಲೂ ಹೆಚ್ಚಾದ ಡೆಂಗ್ಯೂ!

111

Dengue News: ಡೆಂಗ್ಯು (Dengue) ಜ್ವರದಿಂದ ಬಳಲುತ್ತಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಶಿಗ್ಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವಸಂತಾ (40) ಸಾಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜ್ವರ, ವಾಂತಿ ಹಿನ್ನೆಲೆ ವಸಂತಾ ಅವರನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಡೆಂಗ್ಯು ಪತ್ತೆಯಾಗಿತ್ತು. ಶುಕ್ರವಾರ ಅವರು ಮೃತಪಟ್ಟಿದ್ದಾರೆ.

ಇನ್ನು ಸೊರಬ (Sorabha) ಗಡಿ ಹೊಂದಿಕೊಂಡ ಶಿರಸಿ ತಾಲೂಕಿನಲ್ಲೂ ಡೆಂಗ್ಯೂ ಹೆಚ್ಚಾಗಿದ್ದು ,ಈವರೆಗೆ ಆರು ಪ್ರಕರಣಗಳು ಪತ್ತೆಯಾಗಿವೆ‌ . ಆದರೇ ಆರೋಗ್ಯ ಇಲಾಖೆ ಬಳಿ ಇವುಗಳ ಮಾಹಿತಿ ಸಹ ಇಲ್ಲ. ಇನ್ನು ಬಹುತೇಕ ಪ್ರಕರಣಗಳು ಖಾಸಗಿ ಆಸ್ಪತ್ರೆಗೆ ದಾಖಲಾಗುತಿದ್ದು ಇದರಿಂದ ಆರೋಗ್ಯ ಇಲಾಖೆ ಸಹ ಮಾಹಿತಿ ಸಮರ್ಪಕ ದಾಖಲೆ ಮಾಡಿಲ್ಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!